₹1.5 ಕೋಟಿ ಬೆಂಗಳೂರಿನ ಫ್ಲ್ಯಾಟ್ ಯಾಕೆ? ಟೆಕ್ಕಿಯ ಪ್ರಶ್ನೆಗೆ ಮ್ಯಾನೇಜರ್ ಕೊಟ್ಟ ಉತ್ತರ ವೈರಲ್
ಬೆಂಗಳೂರು: ಸ್ವಂತ ಮನೆ ಖರೀದಿಸುವ ವಿಚಾರದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಅಭಿರುಚಿ ವಿಭಿನ್ನವಾಗಿರುತ್ತದೆ. ಕೆಲವರು ತಮ್ಮ ಊರಿನಲ್ಲಿ ದೊಡ್ಡ ಮನೆ ಕಟ್ಟಬೇಕೆಂದು ಆಸೆ ಪಟ್ಟರೆ, ಇನ್ನು ಕೆಲವರು ಉದ್ಯೋಗ ಮಾಡುವ ನಗರದಲ್ಲಿ ಮನೆಯನ್ನು ಖರೀದಿಸಲು ಮುಂದಾಗುತ್ತಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಟೆಕ್ಕಿಯೊಬ್ಬರ ಪೋಸ್ಟ್ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಯುವ ಟೆಕ್ಕಿಯೊಬ್ಬ ತನ್ನ ಮ್ಯಾನೇಜರ್ ಇತ್ತೀಚೆಗೆ ಸುಮಾರು ₹1.5 ಕೋಟಿ ಮೌಲ್ಯದ ಫ್ಲ್ಯಾಟ್ ಖರೀದಿಸಿದ್ದಾಗಿ ಹೇಳಿದ್ದಾನೆ. ಕಚೇರಿ ತಂಡದೊಂದಿಗೆ ಊಟ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ, ಮ್ಯಾನೇಜರ್‌ಗೆ ಒಂದು ಪ್ರಶ್ನೆ ಕೇಳಿದ್ದಾನೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಯುವ ಟೆಕ್ಕಿಯೊಬ್ಬರು ತಮ್ಮ ಮ್ಯಾನೇಜರ್ ಇತ್ತಿಚಿನ ದಿನಗಳಲ್ಲಿ ಸುಮಾರು 1.5 ಕೋಟಿ ಮೌಲ್ಯದ ಫ್ಲ್ಯಾಟ್ ಖರೀಸಿದ್ದಾಗಿ ಹೇಳಿಕೊಂಡಿದ್ದಾರೆ ಕಛೇರಿ ತಂಡದೊಂದಿಗೆ ಊಟ ಮುಗಿಸಿ ವಾಪಸ್ ಬರಿತ್ತಿದ್ದ ವೇಳೆ ಮ್ಯಾನೇಜರನ್ನು ಒಂದು ಪ್ರಶ್ನೆಯನ್ನು ಕೇಳಿದ್ದಾರೆ.
1.5 ಕೋಟಿ ಹಣದಲ್ಲಿ ನಿಮ್ಮ ಊರಿನಲ್ಲಿಯೆ ದೊಡ್ಡದಾಗಿ ಮನೆಯನ್ನು ಕಟ್ಟಬಹುದಿತ್ತಲ್ಲ, ಬೆಂಗಳೂರಿನಲ್ಲಿ ಫ್ಲ್ಯಾಟ್ ಏಕೆ ಖರಿದಿ ಮಾಡಿದಿರಿ ಎಂದ ಕೇಳಿದ್ದಾನೆ.
ಇದಕ್ಕೆ ಮ್ಯಾನೇಜರ್ ನಗುತ್ತಾ ಒಂದೇ ಮಾತು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ
ಈ ಉತ್ತರದಿಂದ ಕುತೂಹಲಗೊಂಡ ಟೆಕ್ಕಿ ತನ್ನ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ತನ್ನ ಮ್ಯಾನೇಜರ್ ಮೂಲತಃ ಒಡಿಶಾದ ಭುವನೇಶ್ವರದವರು ಎಂದು ಹೇಳಿರುವ ಟೆಕ್ಕಿ, ಅಲ್ಲಿ ಉತ್ತಮ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಮೂಲಸೌಕರ್ಯಗಳಿದ್ದರೂ ಬೆಂಗಳೂರಿನಲ್ಲಿ ಮನೆ ಖರೀದಿಸಲು ಕಾರಣವೇನು ಎಂದು ಪ್ರಶ್ನಿಸಿದ್ದಾನೆ.
ಅವರ ಕುಟುಂಬ ಈಗಾಗಲೇ ಸುಮಾರು 12 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವುದರಿಂದ ನಗರ ಜೀವನಕ್ಕೆ ಹೊಂದಿಕೊಂಡಿರಬಹುದು ಅಥವಾ ಉದ್ಯೋಗದ ಅವಕಾಶಗಳೇ ಮುಖ್ಯ ಕಾರಣವಾಗಿರಬಹುದು ಎಂದು ಆತ ಊಹಿಸಿದ್ದಾನೆ.
ನೆಟ್ಟಿಗರು ಹೇಳಿದ್ದೇನು?
ಈ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ಗೇಟೆಡ್ ಕಮ್ಯುನಿಟಿಯಲ್ಲಿ ವಾಸಿಸುವುದರಿಂದ ಸಿಗುವ ಅನುಕೂಲಗಳೇ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವರ ಪ್ರಕಾರ ಭದ್ರತೆ, ಸ್ವಚ್ಛತೆ, ನಿರ್ವಹಣೆ, ಮಕ್ಕಳ ಆಟದ ಮೈದಾನ, ಜಿಮ್, ಕ್ಲಬ್‌ಹೌಸ್ ಸೇರಿದಂತೆ ಹಲವು ಸೌಲಭ್ಯಗಳು ಕುಟುಂಬ ಜೀವನವನ್ನು ಸರಳಗೊಳಿಸುತ್ತದೆ, ವಯಸ್ಸಾದಂತೆ ಇಂತಹ ಸೌಲಭ್ಯಗಳಿಗೆ ಹೆಚ್ಚಿನ ಮಹತ್ವ ಸಿಗುತ್ತದೆ ಎಂದು ಹೇಳಿದ್ದಾರೆ.
ಕುಟುಂಬ ಮತ್ತು ಉದ್ಯೋಗ ಈ ಎರಡು ಪ್ರಮುಖ ಕಾರಣ
ಇನ್ನೂ ಕೆಲವರು, ಉತ್ತಮ ಆಸ್ಪತ್ರೆಗಳು, ಮಕ್ಕಳ ಶಿಕ್ಷಣ, ಉದ್ಯೋಗ ಅವಕಾಶ ಹಾಗೂ ದಿನನಿತ್ಯದ ಸೌಲಭ್ಯಗಳಿಗಾಗಿ ಜನರು ಮೆಟ್ರೋ ನಗರಗಳನ್ನು ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಮಕ್ಕಳು ಶಾಲೆಗೆ ಹೋಗುವುದು, ವಯಸ್ಸಾದ ನಂತರ ಮತ್ತೆ ಊರು ಬದಲಿಸುವುದು ಕಷ್ಟವಾಗುತ್ತದೆ. ಉದ್ಯೋಗದ ಸ್ಥಿರತೆಯೂ ಪ್ರಮುಖ ಕಾರಣವಾಗಿರುವುದರಿಂದ, ಅನೇಕರು ನಗರದಲ್ಲೇ ಮನೆ ಖರೀದಿಸಲು ಮುಂದಾಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಭೂಮಿಯ ಬೆಲೆ ಒಂದು ದೊಡ್ಡ ಕಾರಣ
ಒಬ್ಬ ನೆಟ್ಟಿಗರು ಹೇಳಿದ್ದಾರೆ "ಬೆಂಗಳೂರು ಹೊರವಲಯದಲ್ಲೇ 30x40 ಅಳತೆಯ ನಿವೇಶನಕ್ಕೆ ಸುಮಾರು ₹2 ಕೋಟಿ ವೆಚ್ಚವಾಗುತ್ತದೆ. ಅದರ ಮೇಲೆ ಮನೆ ಕಟ್ಟಲು ಮತ್ತಷ್ಟು ಹಣ ಬೇಕಾಗುತ್ತದೆ. ಅದಕ್ಕೇ ನಿಮ್ಮ ಮ್ಯಾನೇಜರ್ ನಗುತ್ತಾ ಉತ್ತರ ಕೊಟ್ಟಿರಬಹುದು," ಎಂದು ಕಾಮೆಂಟ್ ಮಾಡಿದ್ದಾರೆ.
ಮನೆ ಖರೀದಿ ಎಂದರೆ ಕೇವಲ ಗಾತ್ರದಿಂದ ಅಳೆಯುವುದಿಲ್ಲ
ಈ ಚರ್ಚೆಯಲ್ಲಿ ಭಾಗವಹಿಸಿದ ಬಹುತೇಕರು, ಮನೆ ಖರೀದಿಸುವ ನಿರ್ಧಾರವು ಕೇವಲ ದೊಡ್ಡ ಮನೆ ಕಟ್ಟುವುದರ ಬಗ್ಗೆ ಮಾತ್ರವಲ್ಲ ಎಂದು ಹೇಳಿದ್ದಾರೆ. ಉದ್ಯೋಗ, ಮಕ್ಕಳ ಭವಿಷ್ಯ, ಆರೋಗ್ಯ ಸೇವೆ, ಭದ್ರತೆ, ಜೀವನಶೈಲಿ ಮತ್ತು ದೀರ್ಘಕಾಲದ ಅನುಕೂಲತೆ ಇವೆಲ್ಲವನ್ನೂ ಪರಿಗಣಿಸಿ ಜನರು ತಮ್ಮ ಆಯ್ಕೆಯನ್ನು ಮಾಡುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸೂಚನೆ: ಈ ಮಾಹಿತಿಯು ಸಾಮಾಜಿಕ ಮಾಧ್ಯಮದ ವೈರಲ್ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳ ಆಧಾರದ ಮೇಲೆ ಸಿದ್ಧಪಡಿಸಲಾದುದಾಗಿದೆ. ಇದರಲ್ಲಿರುವ ಅಂಶಗಳು ಬಳಕೆದಾರರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು, ಇವು ಅಧಿಕೃತವಾಗಿ ಪರಿಶೀಲಿಸಲ್ಪಟ್ಟ ಮಾಹಿತಿಯಲ್ಲ.














Click it and Unblock the Notifications