Toxic: ಬಿಡುಗಡೆಯಾಯ್ತು ರಾಕಿಂಗ್ ಸ್ಟಾರ್ ಅಭಿನಯದ 'ಟಾಕ್ಸಿಕ್' ಸಿನಿಮಾ ಟೀಸರ್; ಯಶ್ ಅಭಿಮಾನಿಗಳಿಗೆ ಹಬ್ಬ

ಬೆಂಗಳೂರು: 'ಕೆಜಿಎಫ್' ಸರಣಿಯ ಯಶಸ್ಸಿನ ಬಳಿಕ ರಾಕಿಂಗ್ ಸ್ಟಾರ್ ಯಶ್ ಮುಂದೇನು ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರವಾಗಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್'. ಈ ಚಿತ್ರ ಘೋಷಣೆಯಾದ ದಿನದಿಂದಲೇ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಈ ಪ್ಯಾನ್ ಇಂಡಿಯಾ ಸಿನಿಮಾದ ಅಧಿಕೃತ ಟೀಸರ್ ಬುಧವಾರ (ಜುಲೈ 1) ಬಿಡುಗಡೆಯಾಗಿದೆ.

ಇದರೊಂದಿಗೆ ಅಭಿಮಾನಿಗಳಲ್ಲಿ ಇದ್ದ ಕಾತರ ಮತ್ತಷ್ಟು ದುಪ್ಪಟ್ಟಾಗಿದ್ದು, ಹೊಸ ಸುಳಿವುಗಳನ್ನು ಹೊತ್ತು ತಂದಿರುವ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Yash Toxic

ಟಾಕ್ಸಿಕ್ ಸಿನಿಮಾದಲ್ಲಿ ಯಶ್‌ ದ್ವಿಪಾತ್ರ

ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೀಗ ಬಹುತೇಕ ಖಚಿತವಾಗಿದೆ. ಕೇವಲ ಹೀರೋ ಕೇಂದ್ರಿತ ಕಥೆಯಾಗಿರದೆ, ಚಿತ್ರದಲ್ಲಿರುವ ಪ್ರಬಲ ಮಹಿಳಾ ಪಾತ್ರಗಳೊಂದಿಗೂ ಯಶ್ ಸಮಾನವಾದ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದ್ದಾರೆ ಎಂಬುದು ಈ ಸ್ಪೆಷಲ್ ಟೀಸರ್‌ನಿಂದ ಸ್ಪಷ್ಟವಾಗಿದೆ.

Toxic ಅಪ್‌ಡೇಟ್ ಕೊಟ್ಟ ಯಶ್‌: ವೈರಲ್‌ ಆಯ್ತು ಪೋಸ್ಟ್, ಅಭಿಮಾನಿಗಳ ಸಂಭ್ರಮಾಚರಣೆ ಶುರು
Toxic ಅಪ್‌ಡೇಟ್ ಕೊಟ್ಟ ಯಶ್‌: ವೈರಲ್‌ ಆಯ್ತು ಪೋಸ್ಟ್, ಅಭಿಮಾನಿಗಳ ಸಂಭ್ರಮಾಚರಣೆ ಶುರು

ವೆಂಕಟ್ ಕೆ ನಾರಾಯಣ ಅವರ 'ಕೆವಿಎನ್ ಪ್ರೊಡಕ್ಷನ್ಸ್' ಹಾಗೂ ಯಶ್ ಅವರದ್ದೇ ಆದ 'ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್‌' ಬ್ಯಾನರ್ ಅಡಿಯಲ್ಲಿ ಜಂಟಿಯಾಗಿ ಈ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ಚಿತ್ರದ ಪ್ರತಿಯೊಂದು ದೃಶ್ಯಾವಳಿಯೂ ಹಾಲಿವುಡ್ ಮೇಕಿಂಗ್‌ಗಳನ್ನು ನೆನಪಿಸುವಂತಿದ್ದು, ಯಶ್ ಟಾಕ್ಸಿಕ್ ಸಿನಿಮಾವು ಅಭಿಮಾನಿಗಳಿಗೆ ಹೊಸದೊಂದು ಲೋಕವನ್ನು ಪರಿಚಯಿಸಲಿದೆ.

ಟಾಕ್ಸಿಕ್ ತಾರಾಗಣ: ಘಟಾನುಘಟಿ ನಟಿಯರ ರಗಡ್ ಅವತಾರ

ಸಾಮಾನ್ಯವಾಗಿ ಆಕ್ಷನ್ ಸಿನಿಮಾಗಳಲ್ಲಿ ನಾಯಕಿಯರ ಪಾತ್ರ ಕೇವಲ ಗ್ಲಾಮರ್‌ಗೆ ಅಥವಾ ಬೆರಳೆಣಿಕೆಯ ದೃಶ್ಯಗಳಿಗೆ ಸೀಮಿತವಾಗಿರುತ್ತದೆ. ಆದರೆ, ಟಾಕ್ಸಿಕ್ ತಾರಾಗಣ ಇದಕ್ಕೊಂದು ವಿರುದ್ದವಾಗಿದೆ. ಭಾರತೀಯ ಚಿತ್ರರಂಗದ ಘಟಾನುಘಟಿ ನಟಿಯರು ಈ ಚಿತ್ರದಲ್ಲಿ ಒಂದಾಗಿದ್ದಾರೆ.

ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರು ಇಂಟರ್ನ್ಯಾಷನಲ್ ಮಾಫಿಯಾ ಕ್ವೀನ್ ಆಗಿ ಅಬ್ಬರಿಸಲಿದ್ದಾರೆ. ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ 'ನಾದಿಯಾ' ಎಂಬ ಕಿಲ್ಲರ್ ಲುಕ್‌ನ ಸ್ಟೈಲಿಶ್ ಪಾತ್ರದಲ್ಲಿ ಕಾಣಿಸಿಕೊಂಡರೆ, ನಟಿ ಹುಮಾ ಖುರೇಷಿ 'ಎಲಿಜಬೆತ್' ಎಂಬ ರಗಡ್ ಆಕ್ಷನ್ ಅವತಾರದಲ್ಲಿ ಬೆರಗು ಮೂಡಿಸಲಿದ್ದಾರೆ.

ಇನ್ನು, ನಮ್ಮ ಕನ್ನಡದ ಪ್ರತಿಭೆ ರುಕ್ಮಿಣಿ ವಸಂತ್ 'ಮೆಲಿಸ್ಸಾ' ಎಂಬ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇವರ ಜೊತೆಗೆ ಬಾಲಿವುಡ್ ನಟಿ ತಾರಾ ಸುತಾರಿಯಾ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಬಿಡುಗಡೆಯಾಗಿರುವ ಝಲಕ್‌ನಲ್ಲಿ ಈ ಎಲ್ಲಾ ಪ್ರಬಲ ಪಾತ್ರಗಳ ಅಧಿಕೃತ ಪರಿಚಯ ಮಾಡಿಕೊಡಲಾಗಿದೆ.

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಆಕ್ಷನ್ ಡ್ರಾಮಾ ಬಿಡುಗಡೆ ಯಾವಾಗ?

ಸದ್ಯ ಬಿಡುಗಡೆಯಾಗಿರುವ ಟೀಸರ್, ಚಿತ್ರದ ಪ್ರಚಾರ ಕಾರ್ಯಗಳಿಗೆ ಭರ್ಜರಿ ಚಾಲನೆ ನೀಡಿದೆ. ಈ ವರ್ಷದ ಅತಿದೊಡ್ಡ ಪ್ಯಾನ್ ಇಂಡಿಯಾ ಆಕ್ಷನ್ ಡ್ರಾಮಾ ಸಿನಿಮಾಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಟಾಕ್ಸಿಕ್, ಇದೇ ಆಗಸ್ಟ್ 26 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಗಪ್ಪಳಿಸಲಿದೆ.

ಟಾಕ್ಸಿಕ್‌ ಸಿನಿಮಾ ಬಗ್ಗೆ ಹೊಸ ಅಪ್‌ಡೇಟ್‌, ಯಾವಾಗ ಚಿತ್ರ ಬಿಡುಗಡೆ, ಈ ಸಲನೂ ಕಾಗೆ ಹಾರಿಸ್ತಾರ!
ಟಾಕ್ಸಿಕ್‌ ಸಿನಿಮಾ ಬಗ್ಗೆ ಹೊಸ ಅಪ್‌ಡೇಟ್‌, ಯಾವಾಗ ಚಿತ್ರ ಬಿಡುಗಡೆ, ಈ ಸಲನೂ ಕಾಗೆ ಹಾರಿಸ್ತಾರ!

ವಿಶೇಷವೆಂದರೆ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳ ಜೊತೆಗೆ ಇಂಗ್ಲಿಷ್ ಭಾಷೆಯಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಹಾಗೂ ಇತರ ನುರಿತ ಸಂಗೀತ ನಿರ್ದೇಶಕರು ಈ ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತಕ್ಕೆ ಜೀವ ತುಂಬಿದ್ದಾರೆ.

ಜುಲೈ 1ರಂದು ರಿಲೀಸ್ ಆದ ಈ ಟೀಸರ್, ಯಶ್ ಫ್ಯಾನ್ಸ್‌ ಪಾಲಿಗೆ ಒಂದು ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಮೇಕಿಂಗ್, ಬಲಿಷ್ಠ ತಾರಾಗಣ ಹಾಗೂ ರವಿ ಬಸ್ರೂರ್ ಅವರ ಬಿಜಿಎಂ ಗಮನಿಸಿದರೆ, ಟಾಕ್ಸಿಕ್ ಸಿನಿಮಾವು ಹೊಸ ಚರಿತ್ರೆ ಬರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+