ಕೇವಲ 3ಗಂಟೆ ಓದಿ CBSE 12ನೇ ತರಗತಿಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಪಡೆದ ಕೃಷಿವ್ ; ಇದು ಟಾಪರ್ ಯಶಸ್ಸಿನ ಗುಟ್ಟು

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2026ನೇ ಸಾಲಿನ 12ನೇ ತರಗತಿ ಪರೀಕ್ಷೆಯಲ್ಲಿ ಅಹಮದಾಬಾದ್‌ನ ವಿದ್ಯಾರ್ಥಿ ಕೃಷಿವ್ ಅಚ್ಯುತ್ ದಾನಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಅದ್ಭುತ ಯಶಸ್ಸಿನ ಬಳಿಕ ಮಾತನಾಡಿದ ಅವರು, ತಾವು ಅನುಸರಿಸಿದ ಅಧ್ಯಯನ ವಿಧಾನ ಹಾಗೂ ಶೈಕ್ಷಣಿಕ ತಯಾರಿಯ ಬಗ್ಗೆ ಮುಖ್ಯವಾದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಯಾವುದೇ ದೊಡ್ಡ ಗುರಿಯನ್ನು ಸಾಧಿಸಲು ನಿರಂತರ ಹಾಗೂ ಕಠಿಣ ಪರಿಶ್ರಮ ಎಷ್ಟು ಮುಖ್ಯ ಎಂಬುದನ್ನು ಸಿಬಿಎಸ್‌ಇ 12ನೇ ತರಗತಿ ಟಾಪರ್ ಆಗಿರುವ ಕೃಷಿವ್ ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ.

CBSE

ಕೃಷಿವ್ ಅಚ್ಯುತ್ ದಾನಿ ಅವರ ದಿನಚರಿ ಮತ್ತು ಅಧ್ಯಯನ ಶೈಲಿ

ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆಯಲು ದಿನದ 24 ಗಂಟೆಯೂ ಪುಸ್ತಕ ಹಿಡಿದುಕೊಂಡು ಓದಬೇಕಿಲ್ಲ ಎನ್ನುವುದಕ್ಕೆ ಕೃಷಿವ್ ಅವರೇ ಉತ್ತಮ ಉದಾಹರಣೆ. ಫಲಿತಾಂಶದ ಬಗ್ಗೆ ತೀವ್ರ ಸಂತಸ ವ್ಯಕ್ತಪಡಿಸಿದ ಅವರು, "ನನ್ನ ಈ ಸಾಧನೆ ನನಗೆ ಬಹಳ ಖುಷಿ ತಂದಿದೆ. ಬೋರ್ಡ್ ಪರೀಕ್ಷೆಗಳಿಗಾಗಿ ನಾನು ಪ್ರತಿದಿನ ಕೇವಲ 2 ರಿಂದ 3 ಗಂಟೆಗಳ ಕಾಲ ಮಾತ್ರ ಓದುತ್ತಿದ್ದೆ," ಎಂದು ಹೇಳಿದ್ದಾರೆ. ಪರೀಕ್ಷೆ ಹತ್ತಿರ ಬಂದಾಗ ಮಾತ್ರ ಎಚ್ಚೆತ್ತುಕೊಂಡು ರಾತ್ರಿ ಹಗಲು ಎನ್ನದೆ ಓದುವ ಬದಲು, ವರ್ಷವಿಡೀ ಒಂದು ನಿರ್ದಿಷ್ಟ ವೇಳಾಪಟ್ಟಿಯನ್ನು ಅನುಸರಿಸಿ, ಪ್ರತಿನಿತ್ಯ ನಿರಂತರವಾಗಿ ಅಧ್ಯಯನ ಮಾಡುವುದು ಅವರ ಯಶಸ್ಸಿನ ಮೂಲ ಮಂತ್ರವಾಗಿತ್ತು. ಈ ಸ್ಥಿರತೆಯೇ ಅವರನ್ನು ಅಖಿಲ ಭಾರತ ಮಟ್ಟದಲ್ಲಿ ಮೊದಲ ಸ್ಥಾನಕ್ಕೇರುವಂತೆ ಮಾಡಿದೆ.

ಬೋರ್ಡ್ ಪರೀಕ್ಷೆಯ ಜೊತೆಗೆ ಸಿಎ ಫೌಂಡೇಶನ್ ಪರೀಕ್ಷೆ ಗುರಿ

ಕೃಷಿವ್ ಕೇವಲ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಅವರ ಗುರಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗುವುದಾಗಿದ್ದು, ಅದಕ್ಕಾಗಿ ಮೇ 2026 ರಲ್ಲಿ ನಡೆದ 'ಸಿಎ ಫೌಂಡೇಶನ್ ಪರೀಕ್ಷೆ'ಗೂ ಅವರು ತಯಾರಿ ನಡೆಸುತ್ತಿದ್ದರು. "ಬೋರ್ಡ್ ಪರೀಕ್ಷೆಗಳ ಓದಿನ ಜೊತೆಗೆ, ನಾನು ಪ್ರತಿದಿನ ನನ್ನ ಸಿಎ ಫೌಂಡೇಶನ್ ಪರೀಕ್ಷೆಗಳಿಗಾಗಿಯೂ ಓದುತ್ತಿದ್ದೆ.

ಎರಡಕ್ಕೂ ಸಮಾನ ಆದ್ಯತೆ ನೀಡಿ, ದಿನಕ್ಕೆ 2-3 ಗಂಟೆಗಳ ಕಾಲ ಓದುವುದು ನನ್ನ ಮೊದಲ ಗುರಿಯಾಗಿತ್ತು," ಎಂದು ಅವರು ವಿವರಿಸಿದ್ದಾರೆ. ಎರಡು ಪ್ರಮುಖ ಪರೀಕ್ಷೆಗಳನ್ನು ಒಟ್ಟಿಗೆ ನಿಭಾಯಿಸುವುದು ಸುಲಭದ ಮಾತಲ್ಲವಾದರೂ, ಸ್ಪಷ್ಟವಾದ ಯೋಜನೆ ಇದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

ಕೃಷಿವ್ ಅವರು ಅಕೌಂಟೆನ್ಸಿ, ಇಂಗ್ಲಿಷ್, ಎಂಟರ್‌ಪ್ರೆನರ್‌ಶಿಪ್, ಬ್ಯುಸಿನೆಸ್ ಸ್ಟಡೀಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಷಯಗಳನ್ನು ತಮ್ಮ ಪಠ್ಯಕ್ರಮದಲ್ಲಿ ಆಯ್ಕೆ ಮಾಡಿಕೊಂಡಿದ್ದರು. ಯಾವುದೇ ವಿಷಯವನ್ನು ಕೇವಲ ಬಾಯಿಪಾಠ ಮಾಡದೆ, ಪರಿಕಲ್ಪನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವುದರ ಕಡೆಗೆ ಅವರು ಹೆಚ್ಚು ಗಮನ ಹರಿಸಿದ್ದರು.

ಪರೀಕ್ಷೆ ಬರೆಯುವ ಮೊದಲು ಪ್ರತಿಯೊಂದು ವಿಷಯವನ್ನು ಕನಿಷ್ಠ ಒಂದು ಅಥವಾ ಎರಡು ಬಾರಿ ಸಂಪೂರ್ಣವಾಗಿ ರಿವಿಶನ್‌ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಸರಿಯಾದ ಸಮಯದಲ್ಲಿ ವಿಷಯಗಳನ್ನು ಪುನರ್ಮನನ ಮಾಡುವುದರಿಂದ ಪರೀಕ್ಷಾ ಸಮಯದಲ್ಲಿ ಯಾವುದೇ ಗೊಂದಲವಿಲ್ಲದೆ ಉತ್ತರ ಬರೆಯಲು ಸಾಧ್ಯವಾಗುತ್ತದೆ ಎಂಬುದು ಅವರ ಅಭಿಪ್ರಾಯ.

ಸಿಬಿಎಸ್‌ಇ 12ನೇ ತರಗತಿಯಲ್ಲಿ ಅಗ್ರಸ್ಥಾನ ಪಡೆದ ಕೃಷಿವ್ ಅಚ್ಯುತ್ ದಾನಿ ಅವರ ಈ ಶೈಕ್ಷಣಿಕ ಪಯಣ ಮುಂಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಸ್ಫೂರ್ತಿಯಾಗಿದೆ. ಸರಿಯಾದ ಯೋಜನೆ, ಸಮತೋಲಿತ ದಿನಚರಿ, ನಿರಂತರ ಪ್ರಯತ್ನ, ವಿಷಯಗಳ ಸರಿಯಾದ ರೆವಿಶನ್‌ ಮತ್ತು ದೃಢವಾದ ಸಮರ್ಪಣಾ ಮನೋಭಾವವಿದ್ದರೆ ಎಂತಹ ದೊಡ್ಡ ಗುರಿಯನ್ನಾದರೂ ಸುಲಭವಾಗಿ ತಲುಪಬಹುದು ಎನ್ನುವುದು ಅವರು ವಿದ್ಯಾರ್ಥಿ ಸಮುದಾಯಕ್ಕೆ ನೀಡುವ ಸರಳ ಹಾಗೂ ಮುಖ್ಯವಾದ ಸಂದೇಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+