Bengaluru Property: ಬೆಂಗಳೂರಿನ ಭೂಮಿಗೆ ಮತ್ತೆ ಬಂಗಾರದ ಬೆಲೆ: GCC ವರದಿ ಕೊಟ್ಟ ದೊಡ್ಡ ಗುಡ್‌ನ್ಯೂಸ್

Bengaluru Property: ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮೊದಲಿನಿಂದಲೂ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದೀಗ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮತ್ತೊಂದು ಭರ್ಜರಿ ಗುಡ್‌ನ್ಯೂಸ್ ಬಂದಿದೆ. ಭಾರತದ ಅತಿದೊಡ್ಡ ಜಾಗತಿಕ ಸಾಮರ್ಥ್ಯ ಕೇಂದ್ರ (GCC) ಮಾರುಕಟ್ಟೆಯಾಗಿ ಬೆಂಗಳೂರು ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. 2026ರ ಮೊದಲ ತ್ರೈಮಾಸಿಕದ ವಾಣಿಜ್ಯ ಆಸ್ತಿ ಬಾಡಿಗೆ ಸೂಚ್ಯಂಕ (CPRI) ಆಧಾರಿತ ಹೊಸ ಶ್ರೇಯಾಂಕದ ಪ್ರಕಾರ, ಬೆಂಗಳೂರಿನ GCC ಸೂಚ್ಯಂಕವು ಕಳೆದ ಮೂರು ವರ್ಷಗಳಲ್ಲಿ ಶೇಕಡಾ 1.6ರ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (CAGR) ದಾಖಲಿಸಿದೆ. ಭಾರತದಲ್ಲಿ ಅತಿ ಹೆಚ್ಚು ಜಿಸಿಸಿಗಳಿಗೆ ನೆಲೆಯಾಗಿರುವ ಬೆಂಗಳೂರು, ನಗರದಲ್ಲಿ ಗ್ರೇಡ್ A/A+ ಕಟ್ಟಡಗಳ ಹೆಚ್ಚಳದಿಂದಾಗಿ ಮುಂದಿನ ದಿನಗಳಲ್ಲಿ ಜಿಸಿಸಿ ಕಚೇರಿ ಬಾಡಿಗೆಯಲ್ಲಿ ನಿಧಾನಗತಿಯ ಏರಿಕೆಯನ್ನು ನಿರೀಕ್ಷಿಸಬಹುದು ಎಂದು ಹೇಳಲಾಗಿದೆ.

ಐಐಎಂ ಬೆಂಗಳೂರು (IIM Bengaluru) ಮತ್ತು ಸಿಆರ್‌ಇ ಮ್ಯಾಟ್ರಿಕ್ಸ್ (CRE Matrix) ಜಂಟಿಯಾಗಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ವಾಣಿಜ್ಯ ಆಸ್ತಿ ಬಾಡಿಗೆ ಸೂಚ್ಯಂಕ (CPRI) ವರದಿಯನ್ನು ಪ್ರಕಟಿಸಿವೆ. 2024ರಲ್ಲಿ ಅಭಿವೃದ್ಧಿಪಡಿಸಲಾದ CPRI, ಭಾರತದ ಕಚೇರಿ ಮಾರುಕಟ್ಟೆಗೆ ರೂಪಿಸಲಾದ ದೇಶದ ಮೊದಲ ವೈಜ್ಞಾನಿಕ ಮಾದರಿ ಆಧಾರಿತ ವಾಣಿಜ್ಯ ಬಾಡಿಗೆ ಸೂಚ್ಯಂಕವಾಗಿದೆ. ಹೊಸದಾಗಿ ಬಿಡುಗಡೆಯಾದ GCC-CPRI ಶ್ರೇಯಾಂಕವು ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ಕಚೇರಿ ಬಾಡಿಗೆ ಪ್ರವೃತ್ತಿಯನ್ನು ಸಾಮಾನ್ಯ ವಾಣಿಜ್ಯ ಮಾರುಕಟ್ಟೆಯಿಂದ ಪ್ರತ್ಯೇಕವಾಗಿ ವಿಶ್ಲೇಷಿಸುತ್ತದೆ. ಜೊತೆಗೆ, ಭಾರತದ GCC ಕಚೇರಿ ಮಾರುಕಟ್ಟೆಗೆ ವಿಶೇಷವಾಗಿ ರೂಪಿಸಲಾದ ಮೊದಲ ವಾಣಿಜ್ಯ ಬಾಡಿಗೆ ಸೂಚ್ಯಂಕ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

Bengaluru Property

ಬೆಂಗಳೂರಿಗೆ ಪೈಪೋಟಿ ಕೊಡುತ್ತಿರುವ ನಗರಗಳು

ಇನ್ನು ಆಸ್ತಿ ಹಾಗೂ ರ್‍ಯಾಂಕಿಂಗ್ ವಿಚಾರದಲ್ಲಿ ಬೆಂಗಳೂರಿಗೆ ಭಾರತದ ವಿವಿಧ ಪ್ರಮುಖ ನಗರಗಳು ಭಾರೀ ಪೈಪೋಟಿ ನೀಡಿವೆ. ಬೆಂಗಳೂರು ಸ್ಥಿರವಾದ ಆಸ್ತಿ ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ಪುಣೆ ಮತ್ತು ಹೈದರಾಬಾದ್ ಪ್ರಸ್ತುತ ಪ್ರಬಲ ಜಿಸಿಸಿ ಮಾರುಕಟ್ಟೆಗಳಾಗಿವೆ. ಬೆಂಗಳೂರು ಮೂರನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ 212.1 CPRI ಯೊಂದಿಗೆ ಅಗ್ರಸ್ಥಾನದಲ್ಲಿದೆ ಮತ್ತು ಪುಣೆ ಎರಡನೇ ಸ್ಥಾನ ಪಡೆದಿದೆ. ಬೆಂಗಳೂರು ವರ್ಷದಿಂದ ವರ್ಷಕ್ಕೆ 2.7% ಕುಸಿತ ಕಂಡರೆ, ಹೈದರಾಬಾದ್ ವರ್ಷದಿಂದ ವರ್ಷಕ್ಕೆ 5.4% ಬೆಳವಣಿಗೆಯನ್ನು ದಾಖಲಿಸಿದೆ. ಒಟ್ಟಾರೆ ಬೆಳವಣಿಗೆಯಲ್ಲಿ ಬೆಂಗಳೂರಿಗೆ ಹಿನ್ನಡೆ ಆಗುತ್ತಿದೆ ಎಂದೇ ಹೇಳಲಾಗಿದೆ.

Bengaluru Rent: ದೆಹಲಿಗಿಂತ ಬೆಂಗಳೂರಿನಲ್ಲಿ 4 ಪಟ್ಟು ಮನೆ ಬಾಡಿಗೆ ಹೆಚ್ಚು, ಕಲ್ಚರಲ್ ಶಾಕ್ ಬಗ್ಗೆ Google ಎಂಜಿನಿಯರ್ ಮಾತು
Bengaluru Rent: ದೆಹಲಿಗಿಂತ ಬೆಂಗಳೂರಿನಲ್ಲಿ 4 ಪಟ್ಟು ಮನೆ ಬಾಡಿಗೆ ಹೆಚ್ಚು, ಕಲ್ಚರಲ್ ಶಾಕ್ ಬಗ್ಗೆ Google ಎಂಜಿನಿಯರ್ ಮಾತು

ಬೆಂಗಳೂರಿನಂತಹ ದೊಡ್ಡ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿರುವುದರಿಂದ ಖರೀದಿದಾರರಿಗೆ ಹಲವು ಆಯ್ಕೆಗಳು ಸಿಗುತ್ತವೆ. ಈ ಕಾರಣದಿಂದ ಆಸ್ತಿ ಬೆಲೆಗಳು ವೇಗವಾಗಿ ಏರಿಕೆ ಕಾಣುವುದಿಲ್ಲ. ಆದರೆ ಸಣ್ಣ ಮಾರುಕಟ್ಟೆಗಳಲ್ಲಿ ಪೂರೈಕೆ ಕಡಿಮೆ ಮತ್ತು ಬೇಡಿಕೆ ಹೆಚ್ಚಿರುವುದರಿಂದ ಬೆಲೆಗಳು ಶೀಘ್ರವಾಗಿ ಏರಿಕೆಯಾಗುತ್ತವೆ ಎಂದು ಹೇಳಲಾಗಿದೆ.

 Bengaluru Property: ಬಿ ಖಾತಾ ಆಸ್ತಿದಾರರಿಗೆ ಗುಡ್‌ನ್ಯೂಸ್: ಎ ಖಾತಾ ಪರಿವರ್ತನೆ ಶುಲ್ಕ ರಿಯಾಯಿತಿ, ಹೊಸ ಅಪ್ಡೇಟ್ಸ್‌
Bengaluru Property: ಬಿ ಖಾತಾ ಆಸ್ತಿದಾರರಿಗೆ ಗುಡ್‌ನ್ಯೂಸ್: ಎ ಖಾತಾ ಪರಿವರ್ತನೆ ಶುಲ್ಕ ರಿಯಾಯಿತಿ, ಹೊಸ ಅಪ್ಡೇಟ್ಸ್‌
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+