ನಮಗೆ ಪಾಕಿಸ್ತಾನದ ಅಗತ್ಯವಿಲ್ಲ, ಭಾರತದ ಕಡೆ ಹೋಗ್ತೀವಿ: ಪಾಕ್ ಸರ್ಕಾರಕ್ಕೆ ಪಿಒಕೆ ಪ್ರತಿಭಟನಾಕಾರರ ಎಚ್ಚರಿಕೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಸಾರ್ವಜನಿಕರ ಪ್ರತಿಭಟನೆಗಳು ಈಗ ತೀವ್ರ ಸ್ವರೂಪ ಪಡೆದುಕೊಂಡಿವೆ. ಸ್ಥಳೀಯ ನಾಗರಿಕರು ಮತ್ತು ಪ್ರತಿಭಟನಾಕಾರರು ಇಸ್ಲಾಮಾಬಾದ್‌ನ ಆಡಳಿತಗಾರರ ವಿರುದ್ಧ ಸಿಡಿದೆದ್ದಿದ್ದು, "ನಾವು ಯಾವುದೇ ಕಾರಣಕ್ಕೂ ಪಾಕಿಸ್ತಾನದ ಭಾಗವಲ್ಲ" ಎಂದು ನೇರವಾಗಿ ಘೋಷಿಸುವ ಮೂಲಕ ಅಲ್ಲಿನ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ.

'ಭಾರತದತ್ತ ಮುಖ ಮಾಡಬೇಕಾದೀತು' ಎಂದು ಎಚ್ಚರಿಕೆ

ತಮ್ಮ ನ್ಯಾಯಸಮ್ಮತ ಬೇಡಿಕೆಗಳಿಗೆ ಪಾಕ್ ಸರ್ಕಾರ ಸರಿಯಾಗಿ ಸ್ಪಂದಿಸದಿದ್ದರೆ, ತಾವು ಪರ್ಯಾಯ ಮಾರ್ಗವನ್ನು ಹುಡುಕಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ, ಅನಿವಾರ್ಯವಾದರೆ ತಾವು ಭಾರತದ ಕಡೆಗೆ ತಿರುಗಬೇಕಾಗುತ್ತದೆ ಎಂಬ ಗಂಭೀರ ಮುನ್ಸೂಚನೆಯನ್ನೂ ನೀಡಿದ್ದಾರೆ.

PoK Protests

ಈ ಕುರಿತು ನಡೆದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಎಮ್‌ಸಿ (GMC) ನಾಯಕ ಸರ್ದಾರ್ ಅಮಾನ್ ಖಾನ್, "ಪಿಒಕೆ ಎಂದಿಗೂ ಪಾಕಿಸ್ತಾನಕ್ಕೆ ಸೇರಿದ ಭೂಭಾಗವಲ್ಲ. ನಮಗೆ ಪಾಕಿಸ್ತಾನದ ಅಗತ್ಯವಿಲ್ಲ, ಆದರೆ ಪಾಕಿಸ್ತಾನಕ್ಕೇ ಪಿಒಕೆಯ ಅಗತ್ಯವಿದೆ. ನಮ್ಮನ್ನು ಬೇರೆ ದಾರಿ ಹುಡುಕುವಂತೆ ಅನಿವಾರ್ಯ ಪರಿಸ್ಥಿತಿಗೆ ತಳ್ಳಬೇಡಿ. ಒಂದು ವೇಳೆ ಭಾರತದ ಕಡೆಯ ರಸ್ತೆಯನ್ನು ಮುಕ್ತಗೊಳಿಸಿದರೆ, ನೀವೇ ನಮ್ಮ ಮುಂದೆ ಬಂದು ಬೇಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ" ಎಂದು ಪಾಕ್ ಆಡಳಿತಕ್ಕೆ ಎಚ್ಚರಿಸಿದ್ದಾರೆ.

US-Iran Talks: ಪಾಕ್ ನೆಲದಲ್ಲಿ 21 ಗಂಟೆಗಳ ಸಂಧಾನ ಮಾತುಕತೆ ವಿಫಲ: ಹೆಚ್ಚಿದ ಯುದ್ಧ ಭೀತಿ- ಪ್ರಮುಖಾಂಶಗಳು
US-Iran Talks: ಪಾಕ್ ನೆಲದಲ್ಲಿ 21 ಗಂಟೆಗಳ ಸಂಧಾನ ಮಾತುಕತೆ ವಿಫಲ: ಹೆಚ್ಚಿದ ಯುದ್ಧ ಭೀತಿ- ಪ್ರಮುಖಾಂಶಗಳು

ಪ್ರತಿಭಟನೆಗೆ ಅಸಲಿ ಕಾರಣವೇನು?

ಪಾಕಿಸ್ತಾನ ಸರ್ಕಾರವು ಪಿಒಕೆ ಭಾಗದ ಜನರ ವಿರುದ್ಧ ತಾರತಮ್ಯ ಎಸಗುತ್ತಿದ್ದು, ಮಲತಾಯಿ ಧೋರಣೆ ತಳೆದಿದೆ ಎನ್ನುವುದು ಅಲ್ಲಿನ ಜನರ ಪ್ರಮುಖ ಆರೋಪ. ಪ್ರಸ್ತುತ ಈ ಭಾಗಕ್ಕೆ ಅಗತ್ಯವಿರುವ ಮೂಲಭೂತ ಆಹಾರ ಧಾನ್ಯಗಳು ಮತ್ತು ಅಗತ್ಯ ವಸ್ತುಗಳ ಪೂರೈಕೆಯನ್ನು ಪಾಕ್ ಸರ್ಕಾರ ಸಂಪೂರ್ಣವಾಗಿ ನಿಲ್ಲಿಸಿದೆ. ಸರ್ಕಾರದ ಈ ಜನವಿರೋಧಿ ನೀತಿಯಿಂದ ಆಕ್ರೋಶಗೊಂಡಿರುವ ಸಾರ್ವಜನಿಕರು, ಜೂನ್ 9ರಿಂದ ಗಡಿ ರೇಖೆಯಾದ ಎಲ್‌ಒಸಿ (LoC) ಬಳಿ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಆಡಳಿತದ ನಿರ್ಲಕ್ಷ್ಯ ಧೋರಣೆಯೇ ಈ ಬೃಹತ್ ಜನಾಂದೋಲನಕ್ಕೆ ಮುಖ್ಯ ಕಾರಣವಾಗಿದೆ. ಪಾಕ್ ಸರ್ಕಾರವು ಈ ಪ್ರದೇಶಕ್ಕೆ ನೀಡುತ್ತಿದ್ದ ಆಹಾರ ಧಾನ್ಯಗಳು ಹಾಗೂ ಅತ್ಯಗತ್ಯ ವಸ್ತುಗಳ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇದರೊಂದಿಗೆ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಸರ್ಕಾರದ ಈ ಕ್ರೂರ ನಿರ್ಧಾರವೇ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಭಾರತದ ಗಡಿಯತ್ತ ಮುಖ ಮಾಡಿದ ನಾಗರಿಕರು

ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಗಡಿ ರೇಖೆಯನ್ನು ದಾಟಿ ಭಾರತದೊಳಗೆ ಪ್ರವೇಶಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. "ಒಮ್ಮೆ ಭಾರತದ ಕಡೆಯ ದಾರಿಯನ್ನು ಮುಕ್ತಗೊಳಿಸಿದರೆ, ಇಸ್ಲಾಮಾಬಾದ್‌ನ ಆಡಳಿತಗಾರರು ನಮ್ಮ ಬಳಿ ಬಂದು ಬೇಡುವ ಪರಿಸ್ಥಿತಿ ಬರುತ್ತದೆ" ಎಂದು ಪ್ರತಿಭಟನಾಕಾರರು ಪಾಕ್ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಿಸಲು ಪಾಕ್ ಸೇನೆ ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+