ಶನಿಯ ಹಿಮ್ಮುಖ ಚಲನೆಯಿಂದ ಈ ರಾಶಿಯವರಿಗೆ ಅದೃಷ್ಟ: ಕಷ್ಟ ಕಳೆದು ಸಮೃದ್ದಿ ಕರುಣಿಸುವ ರವಿಪುತ್ರ

ಜ್ಯೋತಿಷ್ಯದ ಪ್ರಕಾರ, ಶನಿಯ ಪಥದಲ್ಲಿನ ಪ್ರತಿಯೊಂದು ಬದಲಾವಣೆಯು ಎಲ್ಲಾ 12 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಕೆಲವೆ ದಿನಗಳಲ್ಲಿ ಶನಿಯು ತನ್ನ ಪಥವನ್ನು ಬದಲಾಯಿಸಲಿದ್ದಾನೆ. ಈ ಬದಲಾವಣೆಯು ಕೆಲವು ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ. ಅನುಭವಿಸಿದ ಎಲ್ಲಾ ಕಷ್ಟ ನಷ್ಟಗಳಿಗ ಪರಿಹಾರ ಸಿಗಲಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿಯನ್ನು ನ್ಯಾಯದ ದೇವರು ಮತ್ತು ಕರ್ಮಕ್ಕೆ ತಕ್ಕ ಫಲ ನೀಡುವವನು ಎಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಮಾಡಿದ ಕರ್ಮಕ್ಕೆ ಅನುಗುಣವಾಗಿ ಆತ ಫಲವನ್ನು ಪಡೆಯುವಂತೆ ಶನಿದೇವ ಮಾಡುತ್ತಾನೆ. ಇದೇ ಕಾರಣಕ್ಕೆ ನವ ಗ್ರಹಗಳ ಪೈಕಿ ಶನಿಗೆ ವಿಶೇಷ ಸ್ಥಾನವಿದೆ. ಪ್ರಸ್ತುತ, ಶನಿಯು ಗುರುವಿನ ಆಳ್ವಿಕೆಯಲ್ಲಿರುವ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ.ಈ ರಾಶಿಯಲ್ಲಿ, ಶನಿಯು ಜುಲೈ 27 ರಿಂದ ಹಿಮ್ಮುಖ ಚಲನೆ ಆರಂಭಿಸುತ್ತಾನೆ. ಒಟ್ಟು 138 ದಿನಗಳವರೆಗೆ, ಶನಿಯು ಹಿಮ್ಮುಖ ಅಥವಾ ವಕ್ರ ನಡಿಗೆಯಲ್ಲಿಯೇ ಇರುತ್ತಾನೆ.ಶನಿಯ ಹಿಮ್ಮುಖ ಚಲನೆ ಡಿಸೆಂಬರ್ 11, 2026 ರವರೆಗೆ ಮುಂದುವರಿಯುತ್ತದೆ.

Saturn Retrograde 2026

ಶನಿಯ ಹಿಮ್ಮುಖ ಅವಧಿಯನ್ನು ಸಾಮಾನ್ಯವಾಗಿ ಕಠಿಣ ಅವಧಿ ಎಂದು ಪರಿಗಣಿಸಲಾಗುತ್ತದೆ. ಆದರೆ ಮೀನ ರಾಶಿಯಲ್ಲಿ ಶನಿಯ ಹಿಮ್ಮುಖ ಸ್ಥಿತಿಯು ಕೆಲವು ರಾಶಿಯವರಿಗೆ ರಾಜಯೋಗದಂತಹ ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ನಿರ್ದಿಷ್ಟವಾಗಿ ನಾಲ್ಕು ರಾಶಿಯವರು ಈ ಅವಧಿಯಲ್ಲಿ ಅದೃಷ್ಟ ಮತ್ತು ಆರ್ಥಿಕ ಲಾಭವನ್ನು ಪಡೆಯುತ್ತಾರೆ.

ಜುಲೈ 4 ರಿಂದ ಈ ರಾಶಿವರ ಮೇಲೆ ಶುಕ್ರನ ಕೃಪೆ : ಒಲಿದು ಬರುವುದು ರಾಜವೈಭೋಗ, ಹಣದ ಕೊರತೆ ಇರುವುದೇ ಇಲ್ಲ
ಜುಲೈ 4 ರಿಂದ ಈ ರಾಶಿವರ ಮೇಲೆ ಶುಕ್ರನ ಕೃಪೆ : ಒಲಿದು ಬರುವುದು ರಾಜವೈಭೋಗ, ಹಣದ ಕೊರತೆ ಇರುವುದೇ ಇಲ್ಲ

ವೃಷಭ ರಾಶಿ (taurus):

ವೃಷಭ ರಾಶಿಯವರಿಗೆ ಶನಿಯ ಹಿಮ್ಮುಖ ಚಲನೆಯು ಆರ್ಥಿಕ ಕ್ಷೇತ್ರದಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೀಡುವ ಸಾಧ್ಯತೆಯಿದೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ನಿಮ್ಮ ಜಾತಕದ 11 ನೇ ಮನೆಯಲ್ಲಿ ಶನಿ ಸಾಗುತ್ತಿದ್ದಾನೆ. ಹೀಗಾಗಿ ಬಹಳ ದಿನಗಳಿಂದ ಬಾಕಿ ಉಳಿದಿರುವ ಹಣವು ಹಿಂತಿರುಗುವ ಸಾಧ್ಯತೆಯಿದೆ. ಹಿಂದೆ ಮಾಡಿದ ದೀರ್ಘಕಾಲೀನ ಹೂಡಿಕೆಗಳಿಂದ ಉತ್ತಮ ಲಾಭವನ್ನು ಪಡೆಯಬಹುದು. ಉದ್ಯೋಗದಲ್ಲಿ ಸ್ಥಿರತೆ ಹೆಚ್ಚಾಗುವುದರ ಜೊತೆಗೆ, ಉದ್ಯೋಗ ಬದಲಾವಣೆಯನ್ನು ಬಯಸುವವರಿಗೆ ಪ್ರತಿಷ್ಠಿತ ಕಂಪನಿಗಳಿಂದ ಆಕರ್ಷಕ ಪ್ಯಾಕೇಜ್‌ಗಳೊಂದಿಗೆ ಅವಕಾಶಗಳು ಸಿಗುವ ಸೂಚನೆಗಳಿವೆ.

ಮಿಥುನ ರಾಶಿ (Gemini):

ಮಿಥುನ ರಾಶಿಯವರ 10ನೇ ಮನೆಯಲ್ಲಿ ಶನಿ ಸಂಚಾರ ಮಾಡುತ್ತಾನೆ. ಈ ಸ್ಥಾನವು ಉದ್ಯೋಗ ಮತ್ತು ವೃತ್ತಿಜೀವನದ ವಿಷಯದಲ್ಲಿ ಬಲಶಾಲಿ ಎಂದು ಪರಿಗಣಿಸಲಾಗಿದೆ. ಉದ್ಯೋಗಿಗಳಿಗೆ ಬಡ್ತಿ ಅಥವಾ ಪ್ರಮುಖ ಜವಾಬ್ದಾರಿಗಳು ಸಿಗುವ ಸಾಧ್ಯತೆಯಿದೆ. ತಮ್ಮ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವುದು. ಹೊಸ ವ್ಯವಹಾರ ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಈ ಅವಧಿ ಅನುಕೂಲಕರವಾಗಿರಬಹುದು. ವಿದೇಶಿ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಅಥವಾ ವಿದೇಶದಲ್ಲಿ ವೃತ್ತಿ ಅವಕಾಶಗಳಿಗಾಗಿ ಕಾಯುತ್ತಿರುವವರ ಆಸೆಗಳು ಸಹ ಈಡೇರುವ ಸಾಧ್ಯತೆಯಿದೆ.

ಶನಿ ಪ್ರಭಾವ ಕಡಿಮೆಯಾಗಿ ಹೆಚ್ಚುವುದು ಗುರುಬಲ : ಆರು ರಾಶಿಯವರಿಗೆ ಹಣ ಲಾಭ, ಅಷ್ಟೈಶ್ವರ್ಯ ಒದಗಿ ಬರುವ ಕಾಲ
ಶನಿ ಪ್ರಭಾವ ಕಡಿಮೆಯಾಗಿ ಹೆಚ್ಚುವುದು ಗುರುಬಲ : ಆರು ರಾಶಿಯವರಿಗೆ ಹಣ ಲಾಭ, ಅಷ್ಟೈಶ್ವರ್ಯ ಒದಗಿ ಬರುವ ಕಾಲ

ತುಲಾ ರಾಶಿ (Libra):

ತುಲಾ ರಾಶಿಯವರ 6ನೇ ಮನೆಯಲ್ಲಿ ಶನಿಯು ಸಂಚಾರ ಮಾಡುತ್ತಾನೆ. ಈ ಸ್ಥಾನವು ಸಮಸ್ಯೆಗಳನ್ನು ನಿವಾರಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ದೀರ್ಘಕಾಲದ ಸಾಲಗಳ ಹೊರೆ ಕಡಿಮೆಯಾಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ನ್ಯಾಯಾಲಯದ ಪ್ರಕರಣಗಳು ಅಥವಾ ಕಾನೂನು ವಿವಾದಗಳಲ್ಲಿ ಅನುಕೂಲಕರ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ.

ವೃಶ್ಚಿಕ ರಾಶಿ (Scorpio):

ವೃಶ್ಚಿಕ ರಾಶಿಯವರ 5ನೇ ಮನೆಯಲ್ಲಿ ಶನಿಯ ಸಂಚಾರ ನಡೆಯುತ್ತಿದೆ. ಈ ಮನೆಯನ್ನು ಶಿಕ್ಷಣ, ಬುದ್ಧಿಶಕ್ತಿ ಮತ್ತು ಮಕ್ಕಳಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ. ಶನಿಯ ಅನುಕೂಲಕರ ಪ್ರಭಾವದಿಂದ, ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದ ಪ್ರಮುಖ ಕೆಲಸಗಳು ಮತ್ತೆ ಚುರುಕು ಪಡೆಯುವ ಸಾಧ್ಯತೆಯಿದೆ. ಅದೃಷ್ಟದ ಆಗಮನದೊಂದಿಗೆ ಆತ್ಮವಿಶ್ವಾಸ ಹೆಚ್ಚಾಗಬಹುದು. ಮನೆ, ಭೂಮಿ ಅಥವಾ ಹೊಸ ವಾಹನವನ್ನು ಖರೀದಿಸುವ ಕನಸನ್ನು ನನಸಾಗಿಸುವ ಸಾಧ್ಯತೆಗಳಿವೆ. ಷೇರು ಮಾರುಕಟ್ಟೆ, ಲಾಟರಿ ಅಥವಾ ಇತರ ವಿಧಾನಗಳ ಮೂಲಕ ಹಠಾತ್ ಆರ್ಥಿಕ ಲಾಭದ ಸಾಧ್ಯತೆಗಳಿವೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+