UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್‌ಸಿ ಪಾಸ್, ಯಾರವರು? ಹಿನ್ನೆಲೆ ಏನು
ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು (UPSC) ಶುಕ್ರವಾರ ಮಾರ್ಚ್ 06ರಂದು ನಾಗರಿಕಾ ಸೇವಾ ಸಿವಿಲ್ ಪರೀಕ್ಷೆಯ (2025) ಫಲಿತಾಂಶ ಪ್ರಕಟಿಸಿದೆ. ಇದರಲ್ಲಿ ಉತ್ತೀರ್ಣಗೊಂಡು ನಾಗರಿಕ ಸೇವೆಗೆ ಅರ್ಹತೆ ಪಡೆದ 958 ಅಭ್ಯರ್ಥಿಗಳಲ್ಲಿ ನಾಲ್ಕು ಮಂದಿ ರಾಜ್ಯದ ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯವರು ಎಂಬುದು ರಾಜ್ಯಕ್ಕೆ ಹೆಮ್ಮೆಯಾಗಿದೆ. ಇವರ ಶ್ರೇಣಿ, ಪರಿಚಯ ಇನ್ನಿತರ ವಿವರ ಇಲ್ಲಿದೆ.
ಅಭಿವೃದ್ಧಿ ಕಾಣದ, ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನಲಾಗುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಿಲ್ಲೆಯಿಂದ ನಾಲ್ವರು ಯುಪಿಎಸ್‌ಸಿ ಪಾಸ್ ಮಾಡಿದ್ದಾರೆ. ಈ ಮೂಲಕ ಅಖಿಲ ಭಾರತದ ಮಟ್ಟದಲ್ಲಿ ಕರ್ನಾಟಕ ಯಾದಗಿರಿ ಜಿಲ್ಲೆಯ ಹೆಸರಿಗೆ ಕೀರ್ತಿ ತಂದಿದ್ದಾರೆ.

ಯಾದಗಿರಿಯ ಸಂದೀಪ್ ಬಾಡದ್ ಕರ್ನಾಟಕದ ಮಟ್ಟಿಗೆ 2ನೇ ಮತ್ತು ಅಖಿಲ ಭಾರತ ಮಟ್ಟದಲ್ಲಿ ಯುಪಿಎಸ್‌ಸಿಯಲ್ಲಿ 82ನೇ ಶ್ರೇಣಿ ಪಡೆದಿದ್ದಾರೆ. ವೈದ್ಯೆ ಡಾ. ನಿವೇದಿತಾ ಭಾವಿಮನಿ ಅವರು 469ನೇ ಶ್ರೇಣಿ, ಬಸವರಾಜ್ ಜವಳಿ 664ನೇ ಹಾಗೂ ಚಂದ್ರಶೇಖರ್ ಅವರು 880ನೇ ಶ್ರೇಣಿ ಪಡೆಯುವ ಮೂಲಕ ದೇಶವೇ ಯಾದಗಿರಿ ಜಿಲ್ಲೆಯತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಯುಪಿಎಸ್‌ಸಿ 4 ಅರ್ಹರ ಪರಿಚಯ
ಸಂದೀಪ್ ಬಾಡದ್: ಇವರು ಯಾದಗಿರಿ ನಗರದ ನಿವಾಸಿಯಾಗಿದ್ದು, ತಂದೆ ಬಸವರಾಜ್ ಕಿರಾಣಿ ವ್ಯಾಪಾರಿ. ಅವರೆ ಎರಡನೇ ಪುತ್ರ ಸಂದೀಪ್ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 82ನೇ ಶ್ರೇಣಿ ಪಡೆದಿದ್ದಾರೆ. ನಗರದ ಚಿರಂಜೀವಿ, ನ್ಯೂ ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಶಹಾಪುರದ ಕೇಂದ್ರೀಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿವರೆಗೆ ಓದಿದ್ದಾರೆ.
ಬೆಂಗಳೂರಿನ ಎಐಟಿ (ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಯಲ್ಲಿ ಇಂಜಿನೀಯರಿಂಗ್ ಪದವಿ ಪಡೆದಿದ್ದಾರೆ. ನಂತರ ಎರಡು ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ದುಡಿದಿದ್ದಾರೆ. ನಂತರ ಅವರು ನಾಗರಿಕ ಸೇವೆಯಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಮಹದಾಸೆಯಿಂದ ದೆಹಲಿಯಲ್ಲಿ ಐಎಎಸ್ ಪರೀಕ್ಷೆಯ ತರಬೇತಿ ಪಡೆದ್ದಿದ್ದಾರೆ. ಅವರ ಅವಿರತ ಶ್ರಮವು 2025ನೇ ಸಾಲಿನ ಯುಪಿಎಸ್‌ಸಿಯಲ್ಲಿ ಪಾಸಾಗುವಂತೆ ಮಾಡಿದೆ. ಅವರು ಕರ್ನಾಟಕ ರಾಜ್ಯ ಮಟ್ಟದಲ್ಲಿ 2ನೇ ಟಾಪರ್ ಆಗಿದ್ದಾರೆ.
ಡಾ. ನಿವೇದಿತಾ ಭಾವಿಮನಿ: ಇವರು ತಮ್ಮ ಎರಡನೇ ಪ್ರಯತ್ನದಲ್ಲೆ ಯುಪಿಎಸ್‌ಸಿ ಪಾಸಾಗಿದ್ದಾರೆ. ಆರೋಗ್ಯ ಇಲಾಖೆಯ ನಿವೃತ್ತ ಸಿಬ್ಬಂದಿ ಚಂದಪ್ಪ ಬಾವಿಮನಿ ಮತ್ತು ವರ್ಕನಳ್ಳಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಬಾವಿಮನಿ ಇವರ ಪೋಷಕರು. ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 469ನೇ ರಾಂಕ್ ಪಡೆದಿದ್ದಾರೆ. ಇವರು ಇಲ್ಲಿನ ದೋಕಾ ಜೈನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಆರ್. ವಿ. ವಿದ್ಯಾಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ. ಕಲಬುರಗಿ ಎಸ್‌ಬಿಆರ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ (ವಿಜ್ಞಾನ), ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದಿದ್ದಾರೆ. ಇದೀಗ ಯುಪಿಎಸ್‌ಸಿ ಪಾಸ್ ಆಗಿ ತಮ್ಮ ಕುಟುಂಬಕ್ಕೆ ಜಿಲ್ಲೆಗೆ ಮಾತ್ರವಲ್ಲದೇ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಬಸವರಾಜ್ ಜವಳಿ: ಜಿಲ್ಲೆಯ ಶಹಾಪುರದ ನಗರದ ಬಸವರಾಜ್ ಜವಳಿ ಅವರು ಯುಪಿಎಸ್‌ಸಿ ನಡೆದಿ 2025ರ ಪರೀಕ್ಷೆಯಲ್ಲಿ 664ನೇ ಶ್ರೇಣಿ ಪಡೆದಿದ್ದಾರೆ. ಇವರ ತಂದೆ ವಿಶ್ವನಾಥ್ ಹಾಗೂ ಗಿರಿಜಾ ಜವಳಿ ಉದ್ಯಮಿಗಳಾಗಿದ್ದಾರೆ. ಇವರು ಏಳನೇ ತರಗತಿವರೆಗೆ ಕನ್ನಡದಲ್ಲಿ ವ್ಯಾಸಂಗ ಮಾಡಿದ್ದಾರೆ. ಬಳಿಕ ಇಂಗ್ಲಿಷ್‌ನಲ್ಲಿ ಶಿಕ್ಷಣ ಮುಂದುವರಿಸಿದ್ದಾರೆ. ಸಿವಿಲ್ ಇಂಜಿನೀಯರಿಂಗ್‌ನಲ್ಲಿ ಪದವಿ ಪಡೆದ ಇವರು ಯುಪಿಎಸ್‌ಸಿ ಪರೀಕ್ಷೆ ಪಾಸಾಗಿ ದೇಶದ ನಾಗರಿಕ ಸೇವೆಗೆ ಅರ್ಹತೆ ಪಡೆದಿದ್ದಾರೆ.
ಚಂದ್ರಶೇಖರ್: ಇವರು ಜಿಲ್ಲೆಯ ಶಹಾಪುರ ತಾಲೂಕಿನ ಚೆನ್ನೂರು ಗ್ರಾಮದವರಾಗಿದ್ದು, ಇವರದ್ದು ಕೃಷಿ ಕುಟುಂಬ. ಚಂದ್ರಶೇಖರ್ ಅಖಿಲ ಭಾರತ ಮಟ್ಟದ ನಾಗರಿಕ ಸೇವಾ ಪರೀಕ್ಷೆಯಲ್ಲಿ 880ನೇ ಶ್ರೇಣಿ ಪಡೆದಿದ್ದಾರೆ. ತಮ್ಮ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ವನದುರ್ಗದಲ್ಲಿ ಪ್ರೌಢ ಶಿಕ್ಷಣ, ಕಲಬುರಗಿಯ ಶ್ರೀ ಗುರು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದಾರೆ. ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಇಂಜಿನೀಯರಿಂಗ್ ಓದಿ ಪದವಿ ಪಡೆದಿರು ಇವರು ಮೂರು ಸಲ ಸಂದರ್ಶನಕ್ಕೆ ಆಯ್ಕೆಯಾಗಿ, ಈಗ ನಾಲ್ಕನೇ ಬಾರಿಗೆ 880 ಶ್ರೇಣಿ ಪಡೆದಿದ್ದಾರೆ. ಛಲ ಬಿಡದೇ ಶ್ರಮಿಸಿದರೆ ಏನುಬೇಕಾದರೂ ಸಾಧಿಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಇನ್ನೂ ಈ ಅಭ್ಯರ್ಥಿಯ ಹಿರಿಯಣ್ಣ ಡಾ. ದೇವೇಂದ್ರಪ್ಪ. ಅವರು ತೋಟಗಾರಿಕೆ ಇಲಾಖೆಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications