ರಷ್ಯಾ ವಿರುದ್ಧ ರೊಚ್ಚಿಗೆದ್ದ ಅಮೆರಿಕ ನಾಯಕರು, ಕಾರಣ ತಿಳಿಯಿರಿ | Operation Roaring Lion
ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿದ್ದು, ಈ ಯುದ್ಧದಲ್ಲಿ ಇಸ್ರೇಲ್ ಕೂಡ ಜಗತ್ತಿನ ದೊಡ್ಡಣ್ಣ ಅಮೆರಿಕ ಜೊತೆಗೆ ನಿಂತು ಹೋರಾಡುತ್ತಿದೆ. ಹೇಗಾದರೂ ಮಾಡಿ ಈ ಬಾರಿ ಇರಾನ್ ಸೇನೆ ಸೋಲಬೇಕು, ಎಂಬ ಒನ್‌ಲೈನ್ ಅಜೆಂಡಾ ಇಟ್ಟುಕೊಂಡು ಎರಡೂ ದೇಶಗಳು ವಾರ್ ಶುರು ಮಾಡಿ ದೊಡ್ಡದಾಗಿ ದಾಳಿ ನಡೆಸುತ್ತಿವೆ. ಆದರೆ ಇಂತಹ ಸಮಯದಲ್ಲೇ ಅಮೆರಿಕಗೆ ಸಾಲು ಸಾಲು ಹಿನ್ನಡೆ ಉಂಟಾಗುತ್ತಿದ್ದು, ಇಸ್ರೇಲ್ ಕೂಡ ಈ ವಿಚಾರದಲ್ಲಿ ದೊಡ್ಡ ಸವಾಲು ಎದುರಿಸುತ್ತಿದೆ. ಹೀಗಿದ್ದಾಗಲೇ ರಷ್ಯಾ ಗುಪ್ತಚರ ಇಲಾಖೆಯ ವಿರುದ್ಧ ಅಮೆರಿಕ ರೊಚ್ಚಿಗೆದ್ದಿದೆ. ಪ್ರಮುಖವಾಗಿ ಇರಾನ್‌ಗೆ ಈಗ ರಷ್ಯಾ ಗುಪ್ತಚರ ಮಾಹಿತಿ ನೀಡಿ, ಅಮೆರಿಕಗೆ ಸವಾಲು ಉಂಟು ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಅಮೆರಿಕ ಹಾಗೂ ಇಸ್ರೇಲ್ ಸೇನೆಯ ಭೀಕರ ದಾಳಿ ಪರಿಣಾಮ ಇರಾನ್ ರಾಜಧಾನಿ ತೆಹ್ರಾನ್ ಇದೀಗ ನರಕವಾಗಿ ಬದಲಾಗುತ್ತಿದೆ. ಇರಾನ್ ಸರ್ವಾಧಿಕಾರಿ ಖಮೇನಿ ಸೇರಿದಂತೆ ಸುಮಾರು 1500 ಜನರನ್ನು ಈಗಾಗಲೇ ಇರಾನ್ ಕಳೆದುಕೊಂಡಿದೆ. ಇಷ್ಟಾದರೂ ಯುದ್ಧ ನಿಲ್ಲಿಸಲು ತಯಾರಿಲ್ಲದ ಇರಾನ್ ಮತ್ತೆ ಮತ್ತೆ ದಾಳಿ ಮಾಡುತ್ತಾ ಇದ್ದು, ಅರಬ್ ದೇಶಗಳು & ಇಸ್ರೇಲ್ ಮೇಲೆ ಡೆಡ್ಲಿ ಅಟ್ಯಾಕ್ ಮುಂದುವರಿಸಿ ಆಘಾತ ನೀಡುತ್ತಿದೆ. ಇಂತಹ ಸಮಯದಲ್ಲೇ ಇರಾನ್ ಜೊತೆ ರಷ್ಯಾ ಗುಪ್ತಚರ ಮಾಹಿತಿ ಹಂಚಿಕೊಳ್ಳುವ ಮೂಲಕ ಸಹಾಯ ಮಾಡುತ್ತಿದೆ ಎಂಬ ಆರೋಪ ಮಾಡಲಾಗಿದೆ.

3ನೇ ಮಹಾಯುದ್ಧದ ಮುನ್ಸೂಚನೆ?
ರಷ್ಯಾ ವಿರುದ್ಧ ಈಗ ಅಮೆರಿಕದ ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದು, ಇರಾನ್‌ಗೆ ಬೇಕಾದ ಗುಪ್ತಚರ ಮಾಹಿತಿಯನ್ನು ರಷ್ಯಾ ಹಂಚಿಕೊಳ್ಳುತ್ತಿದೆ. ಇದರಿಂದ ಅಮೆರಿಕಗೆ ಯುದ್ಧದಲ್ಲಿ ಹಿನ್ನಡೆ & ಕಷ್ಟ ಎದುರಾಗುತ್ತಿದೆ ಎಂದು ಗರಂ ಆಗಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಮತ್ತಷ್ಟು ಅಲರ್ಟ್ ಆಗಿ ಅಮೆರಿಕ ಹೊಸ ಹೊಸ ತಂತ್ರಗಳ ಮೂಲಕ ಇರಾನ್ ಮೇಲೆ ದಾಳಿ ಮಾಡಲು ಮುಂದಾಗುತ್ತಿದೆ. ಈ ಹಿನ್ನೆಲೆ ಕೆಲವೇ ಗಂಟೆಗಳಲ್ಲಿ ಇರಾನ್ ಮೇಲೆ ಅತ್ಯಂತ ಅಪಾಯಕಾರಿ ಹಾಗೂ ಡೆಡ್ಲಿ ಅಟ್ಯಾಕ್ ನಡೆದು ವಿದ್ವಂಸ ಸಂಭವಿಸುತ್ತಾ? ಎಂಬ ಪ್ರಶ್ನೆ ಕೂಡ ಮೂಡಿದೆ.
ಇನ್ನಷ್ಟು ದಿನಗಳ ಕಾಲ ಯುದ್ಧ?
ಅಮೆರಿಕ ಎಲ್ಲಾ ತಯಾರಿ ಮಾಡಿಕೊಂಡೇ ಇರಾನ್ ರಾಜಧಾನಿ ಮೇಲೆ ದಾಳಿಯನ್ನ ಮಾಡುತ್ತಾ ಇದ್ದು, ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಸೇನೆಯ 50,000ಕ್ಕೂ ಹೆಚ್ಚು ಸೈನಿಕರು ಬಂದು ನಿಂತು ಅಲರ್ಟ್ ಆಗಿದ್ದಾರೆ. ಇರಾನ್ ಸಮೀಪ ಅಮೆರಿಕ ಸೇನೆ ಬೃಹತ್ ಯುದ್ಧ ನೌಕೆ ಹಾಗೂ ಕಠಿಣ ಸಂದರ್ಭ ಎದುರಿಸಿ ನಿಲ್ಲುವ ಯುದ್ಧ ವಿಮಾನಗಳನ್ನು ಸಿದ್ಧಪಡಿಸಿಕೊಂಡು ಕಾಯುತ್ತಿದೆ. ಹೀಗಿದ್ದಾಗ ಪ್ರಸ್ತುತ ಮಧ್ಯಪ್ರಾಚ್ಯ ಭಾಗದಲ್ಲಿ ಇರುವ ಒಟ್ಟು 8 ವಾಯುನೆಲೆಗಳ ಬೆಂಬಲದಿಂದ ಅಮೆರಿಕ ಸೇನೆ ನೇರವಾಗಿ ಇರಾನ್ ಮೇಲೆ ಕಿಚ್ಚಿನಿಂದ ದಾಳಿ ಮಾಡುತ್ತಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಇರಾನ್ ಮತ್ತು ಅಮೆರಿಕ ನಡುವಿನ ಈ ಯುದ್ಧ ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ತೋರಿಸುತ್ತಿದೆ.












Click it and Unblock the Notifications