ದಕ್ಷಿಣ ಕೆರೊಲಿನಾದಲ್ಲಿ ಅಮೆರಿಕದ ಯುದ್ಧ ವಿಮಾನ F-35 ನಾಪತ್ತೆ

ದಕ್ಷಿಣ ಕೆರೊಲಿನಾದಲ್ಲಿ ಅಮೆರಿಕದ ಮೆರೈನ್ ಕಾರ್ಪ್ಸ್ ಫೈಟರ್ ಜೆಟ್ ನಾಪತ್ತೆಯಾಗಿದೆ. ಕಾಣೆಯಾದ ಬಹು ಮಿಲಿಯನ್ ಡಾಲರ್ ಬೆಲೆಯ ವಿಮಾನವನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ಅಮೆರಿಕದ ಮಿಲಿಟರಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ ಎಂದು ಗಾರ್ಡಿಯನ್ ವರದಿ ಮಾಡಿದೆ.

ಕೆಟ್ಟ ಹವಾಮಾನವಿದ್ದ ಕಾರಣ, ವಿಮಾನ ಅಪಘಾತಕ್ಕೀಡಾಗಿತ್ತು, ಪೈಲಟ್ ವಿಮಾನದಿಂದ ಹಾರುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚಾರ್ಲ್ಸ್​​ಟನ್ ನಗರದ ಉತ್ತರಕ್ಕೆ ಎರಡು ಸರೋವರಗಳ ಸುತ್ತಲೂ ಯುದ್ಧ ವಿಮಾನಕ್ಕೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

us-f-35-fighter-jet-goes-missing

ಕೆಟ್ಟ ಹವಾಮಾನದಿಂದಾಗಿ ಎಫ್​-35 ಯುದ್ಧ ವಿಮಾನದ ಹುಡುಕಾಟ ಕೊಂಚ ನಿಧಾನವಾಯಿತು, ಪೈಲಟ್ ಸುರಕ್ಷಿತವಾಗಿ ಜಾಯಿಂಟ್​ ಬೇಸ್​ಗೆ ಮರಳಿದ್ದಾರೆ ಆದರೆ ವಿಮಾನ ಎಲ್ಲಿದೆ ಎಂಬುದೇ ತಿಳಿಯದಂತಾಗಿದೆ ಎಂದು ಮೇಜರ್ ಸಲಿನಾಸ್ ಹೇಳಿದ್ದಾರೆ. ಪ್ರಮುಖ ಜಾಯಿಂಟ್ ಬೇಸ್ ಚಾರ್ಲ್ಸ್ಟನ್ ಸ್ಥಳೀಯ ನಿವಾಸಿಗಳನ್ನು ಸಹಾಯಕ್ಕಾಗಿ ಕೇಳಿದ್ದಾರೆ.

ನಮ್ಮ ಮರುಪಡೆಯುವಿಕೆ ತಂಡಗಳು F-35 ಅನ್ನು ಪತ್ತೆಹಚ್ಚಲು ಸಹಾಯ ಮಾಡುವ ಯಾವುದೇ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಬೇಸ್ ಡಿಫೆನ್ಸ್ ಆಪರೇಷನ್ ಸೆಂಟರ್‌ಗೆ ಕರೆ ಮಾಡಿ ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಇನ್ನೂ ಸುದ್ದಿ ತಿಳಿಯುತ್ತಿದ್ದಂತೆ ಜನರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ನೀವು ಹೇಗೆ ಎಫ್​-35 ಫೈಟರ್​ ಜೆಟ್ ಅನ್ನು ಕಳೆದುಕೊಳ್ಳಲು ಸಾಧ್ಯ, ಅದರಲ್ಲಿ ಯಾವುದೇ ಟ್ರ್ಯಾಕಿಂಗ್ ಸಾಧನಗಳಿಲ್ಲವೇ, ಅದ್ಹೇಗೆ ಸಾರ್ವಜನಿಕರಲ್ಲಿ ಸಹಾಯ ಮಾಡುವಂತೆ ಕೇಳುತ್ತಿದ್ದೀರಿ ಎಂದು ನ್ಯಾನ್ಸಿ ಮೇಸ್ ಎಂಬುವವರು ಪ್ರಶ್ನೆ ಮಾಡಿದ್ದಾರೆ. ಎಎಫ್​ಪಿ ವರದಿಯ ಪ್ರಕಾರ, ಲಾಕ್​ಹೀಡ್​ ಮಾರ್ಟಿನ್ ತಯಾರಿಸಿದ ಪ್ರತಿ ವಿಮಾನಗಳಿಗೆ 80 ಮಿಲಿಯನ್ ಡಾಲರ್​ ವೆಚ್ಚವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+