Israel Palestine War: ಮಧ್ಯಪ್ರಾಚ್ಯಕ್ಕೆ ಬೆಂಕಿ ಹಚ್ಚಲಿದೆ ಇಸ್ರೇಲ್‌- ಹಮಾಸ್‌ ಯುದ್ಧ; ಅಖಾಡಕ್ಕೆ ಅಮೆರಿಕ-ಇರಾನ್?

ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಯುದ್ಧ ಮಧ್ಯಪ್ರಾಚ್ಯಕ್ಕೆ ಕೊಳ್ಳಿ ಇಡುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಹಮಾಸ್‌ ವಿರುದ್ಧ ಭೀಕರ ದಾಳಿ ನಡೆಸುತ್ತಿರುವ ಇಸ್ರೇಲ್‌ ಗಾಜಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ದಾಂಗುಡಿ ಇಟ್ಟಿದೆ. ಇಸ್ರೇಲ್‌ನ ಈ ನಡೆಯು ಮಧ್ಯಪ್ರಾಚ್ಯದ ಬಲಾಢ್ಯ ದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆಳವಣಿಗೆಗಳನ್ನು ಗಮನಿಸಿರುವ ಅಮೆರಿಕ ಇಸ್ರೇಲ್‌ಗೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ.

ಭಾನುವಾರ ರಾತ್ರಿಯಿಡೀ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 50 ಕ್ಕೂ ಹೆಚ್ಚು ಪ್ಯಾಲೆಸ್ತೀನಿಗಳು ಹತರಾಗಿದ್ದಾರೆ ಎಂದು ಗಾಜಾ ವೈದ್ಯಕೀಯ ಮೂಲಗಳು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿವೆ. ಈ ಆಕ್ರೋಶ ವ್ಯಕ್ತಪಡಿಸಿರುವ ಇರಾನ್‌ ಕಠಿಣ ನಿರ್ಧಾರ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ. ಒಂದು ವೇಳೆ, ಇರಾನ್‌ ಯುದ್ಧಭೂಮಿಗೆ ಬಂದರೆ, ಅಮೆರಿಕ ನೇರವಾಗಿ ಸಂಘರ್ಷಕ್ಕೆ ಇಳಿಯಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

Israel-Hamas War: Is USAs Military Support to Israel spreading the war in the Middle east?

ಸಿರಿಯಾ, ಲೆಬನಾನ್‌ನಲ್ಲೂ ದಾಳಿ

ಭಾನುವಾರ ಮುಂಜಾನೆ ಸಿರಿಯಾದ ಡಮಾಸ್ಕಸ್ ಮತ್ತು ಅಲೆಪ್ಪೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿ ಇಸ್ರೇಲ್‌ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ವಿಮಾನ ನಿಲ್ದಾಣದ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ. ಅಲೆಪ್ಪೊ ವಿಮಾನ ನಿಲ್ದಾಣಗಳಲ್ಲಿ ಸೇವೆಗಳಿಗೆ ತಾತ್ಕಾಲಿಕ ತಡೆಯೊಡ್ಡಲಾಗಿದೆ ಎಂದು ಸಿರಿಯನ್ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಇಸ್ರೇಲ್‌ ವಿಮಾನಗಳು ದಾಳಿ ನಡೆಸಿವೆ. ಇದರಲ್ಲಿ ಆರು ಉಗ್ರರು ಮೃತಪಟ್ಟಿದ್ದಾರೆ. ಹಿಜ್ಬುಲ್ಲಾ ಸಂಘಟನೆಯು ಇರಾನ್ ಬೆಂಬಲಿತ ಸಂಘಟನೆಯಾಗಿದೆ.

Israel-Hamas War: Is USAs Military Support to Israel spreading the war in the Middle east?

ಹೆಚ್ಚುತ್ತಲೇ ಇದೆ ಇಸ್ರೇಲ್‌ ಆಕ್ರಮಣ

ಗಾಜಾದಲ್ಲಿ ಅಷ್ಟೇ ಅಲ್ಲದೇ ವಿವಿಧ ಪ್ರದೇಶಗಳಲ್ಲಿ ಇಸ್ರೇಲಿನ ಆಕ್ರಮಣ ಹೆಚ್ಚಾಗುತ್ತಿದೆ. ಈಗ ಮುತ್ತಿಗೆ ಹಾಕಿರುವ ಪ್ಯಾಲೆಸ್ತೀನ್‌ ಭೂಪ್ರದೇಶದಲ್ಲಿ ವೈಮಾನಿಕ ದಾಳಿಯನ್ನು ಹೆಚ್ಚಿಸುವುದಾಗಿ ಇಸ್ರೇಲ್‌ ಹೇಳಿಕೊಂಡಿದೆ. ಈ ಪ್ರದೇಶಗಳಲ್ಲಿ ವಿಮಾನ ಹಾಗೂ ಸೈನಿಕರು ತೆರಳಲು ಅತ್ಯುತ್ತಮ ಪರಿಸ್ಥಿತಿಯನ್ನು ಸೃಷ್ಟಿಸುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

'ನಾವು ಉತ್ತಮ ಪರಿಸ್ಥಿತಿಗಳಲ್ಲಿ ಯುದ್ಧದ ಮುಂದಿನ ಹಂತವನ್ನು ಪ್ರವೇಶಿಸಬೇಕಾಗಿದೆ. ಇಂದಿನಿಂದ ನಾವು ದಾಳಿಗಳನ್ನು ಹೆಚ್ಚಿಸುತ್ತೇವೆ' ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ.

ನೆರವಿನ ಹಸ್ತ ಚಾಚಿದ ಭಾರತ

ಭಾರತವು ಭಾನುವಾರ ಪ್ಯಾಲೆಸ್ತೀನ್ ಜನರಿಗೆ ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ. ಭಾರತೀಯ ವಾಯುಪಡೆಯ ಸಿ-17 ಸಾರಿಗೆ ವಿಮಾನದಲ್ಲಿ ಈ ಸಾಮಾಗ್ರಿಗಳನ್ನು ಈಜಿಪ್ಟ್‌ಗೆ ಕಳುಹಿಸಲಾಗಿದೆ.

Israel-Hamas War: Is USAs Military Support to Israel spreading the war in the Middle east?

ಅಮೆರಿಕದ ಹಸ್ತಕ್ಷೇಪ

ಇಸ್ರೇಲ್‌ ಹಮಾಸ್‌ ನಡುವಿನ ಹೊತ್ತಿಕೊಂಡಿರುವ ಬೆಂಕಿಗೆ ಅಮೆರಿಕ ತುಪ್ಪ ಸುರಿಯುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಇಸ್ರೇಲ್‌ಗೆ ಬೆಂಬಲ ನೀಡುವ ಮೂಲಕ ಮಧ್ಯಪ್ರಾಚ್ಯದ ಮುಸ್ಲಿಂ ರಾಷ್ಟ್ರಗಳನ್ನು ಎದುರು ಹಾಕಿಕೊಳ್ಳುವ ಸಾಹಸಕ್ಕೆ ಅಮೆರಿಕ ಮುಂದಾಗಿದೆ. ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಬಂದು ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಈ ವರೆಗೆ 6500 ಮಂದಿ ಬಲಿ

ಅಕ್ಟೋಬರ್ 7 ರಂದು ಇಸ್ಲಾಮಿಸ್ಟ್ ಚಳುವಳಿಯ ಹೆಸರಿನಲ್ಲಿ ಹಮಾಸ್ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿದರು. ಈ ದಾಳಿಯ ನಂತರ ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ಯುದ್ಧವನ್ನೇ ಸಾರಿದೆ. ಹಮಾಸ್‌ ದಾಳಿಯಲ್ಲಿ 1400 ಇಸ್ರೇಲಿಗಳು ಹತರಾಗಿದ್ದಾರೆ. ಇಸ್ರೇಲ್‌ ದಾಳಿಯಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ಯುದ್ಧವು ಇಲ್ಲಿಯವರೆಗೆ 6,500 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಯುದ್ಧ ಅಪರಾಧಗಳನ್ನು ನಿಲ್ಲಿಸಬೇಕೆಂದು ವಿಶ್ವಸಂಸ್ಥೆ ಮನವಿ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+