ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ: ಟಾರ್ಚ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಹಿಳೆ ಸಾವು

|
Google Oneindia Kannada News

ಸಹರ್ಸಾ, ಮಾರ್ಚ್ 22: ವೈದ್ಯರೊಬ್ಬರು ಮಹಿಳೆಗೆ ಟಾರ್ಚ್ ಬೆಳಕಿನಲ್ಲೇ ಶಸ್ತ್ರಚಿಕಿತ್ಸೆ ನಡೆಸಿದ ಸುದ್ದಿಯನ್ನು ಹಲವರು ಓದಿರಬಹುದು. ಈ ಘಟನೆ ನಡೆದಿದ್ದು ಬಿಹಾರದ ಸಹರ್ಸಾ ಎಂಬಲ್ಲಿಯ ಸಾದರ್ ಎಂಬ ಖಾಸಗಿ ಆಸ್ಪತ್ರೆಯಲ್ಲಿ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ವೈದ್ಯರ ಮತ್ತು ಆಸ್ಪತ್ರೆಯ ದಿವ್ಯ ನಿರ್ಲಕ್ಷ್ಯದಿಂದ ಟಾರ್ಚ್ ಬೆಳಕಿನಲ್ಲಿ ಶಸತ್ರಚಿಕಿತ್ಸೆಗೊಳಗಾದ ಮಹಿಳೆ ನಿನ್ನೆ ರಾತ್ರಿ(ಮಾ.21) ಅಸುನೀಗಿದ್ದು, ಇದಕ್ಕೆ ವೈದ್ಯರೇ ಹೊಣೆ ಎಂದು ಆಕೆಯ ಸಂಬಂಧಿಗಳು ದೂರಿದ್ದಾರೆ.

ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲವೆಂದು ಸಂಬಂಧಿಯ ದೇಹದಾನ ಮಾಡಿದ ಮಹಿಳೆಅಂತ್ಯ ಸಂಸ್ಕಾರಕ್ಕೆ ಹಣವಿಲ್ಲವೆಂದು ಸಂಬಂಧಿಯ ದೇಹದಾನ ಮಾಡಿದ ಮಹಿಳೆ

ಅಪಘಾತಕ್ಕೊಳಗಾಗಿ, ಮೂಳೆ ಮುರಿತ ಮತ್ತಿತರ ಗಾಯಗಳಿಂದ ಬಳಲುತ್ತಿದ್ದ ಮಹಿಳೆಯನ್ನು ಮಾ.19 ರಂದು ಸಾದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿವ ವೈದ್ಯರು ಆಕೆಯನ್ನು ಟಾರ್ಚ್ ಬೆಳಕಿನಲ್ಲೇ ಶಸ್ತ್ರಚಿಕಿತ್ಸೆಗೊಳಪಡಿಸಿದ್ದರು.

Woman operated under torchlight dies, kin blames hospital

ನಂತರ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ಆಕೆಯನ್ನು ಪಾಟ್ನಾದಲ್ಲಿರುವ ಆಸ್ಪತ್ರೆಯೊಂದಕ್ಕೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಂತೆ ವೈದ್ಯರು ಹೇಳಿದ್ದರು. ಈ ಮಧ್ಯೆ ಆಕೆ ಅಸುನೀಗಿದ್ದಾರೆ.

ಘಟನೆ ಕುರಿತಂತೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲೆ ಎಂಬುದು ಅಚ್ಚರಿಯ ಸಂಗತಿ.

English summary
The woman who was operated under torchlight at Bihar's Sadar Hospital in Saharsa, died on Wednesday night.Family of the victim held the hospital administration and their negligence responsible for her death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X