Nitish Kumar: ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ: ಕ್ಷಮೆ ಕೇಳಿದ ಬಿಹಾರ ಸಿಎಂ ನಿತೀಶ್ ಕುಮಾರ್
ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳಾ ಶಿಕ್ಷಣದ ಪಾತ್ರದ ಕುರಿತು ಮಂಗಳವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ಷಮೆಯಾಚಿಸಿದ್ದಾರೆ.
"ನಾನು ಕ್ಷಮೆಯಾಚಿಸುತ್ತೇನೆ ಮತ್ತು ನನ್ನ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ. ನನ್ನ ಮಾತುಗಳು ತಪ್ಪಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ, ಯಾರಿಗಾದರೂ ನೋಯಾಗಿದ್ದರೆ, ನಾನು ಅವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ" ಎಂದು ಅವರು ಹೇಳಿದರು.

ಬಿಹಾರದ ವಿಧಾನಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ, ರಾಜ್ಯದಲ್ಲಿ ಸಂತಾನೋತ್ಪತ್ತಿ ಪ್ರಮಾಣ ಶೇ 4.2 ರಿಂದ 2.9ಕ್ಕೆ ಕುಸಿದಿದೆ ಎಂದು ಮಾಹಿತಿ ನೀಡುವ ಸಂದರ್ಭದಲ್ಲಿ ಜನಸಂಖ್ಯಾ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಲು ಹೆಣ್ಣುಮಕ್ಕಳಿಗೆ ಶಿಕ್ಷಣದ ಅಗತ್ಯವಿದೆ ಎಂದಿದ್ದರು.
ಜನಸಂಖ್ಯೆ ನಿಯಂತ್ರಣ ಮಾಡುವಲ್ಲಿ ಮಹಿಳೆಯರು ಶಿಕ್ಷಣ ಹೊಂದಿರುವುದು ಮುಖ್ಯ ಪಾತ್ರ ವಹಿಸುತ್ತದೆ. ವಿದ್ಯಾವಂತ ಮಹಿಳೆಯು ಗಂಡ ಲೈಂಗಿಕ ಕ್ರಿಯೆಯಲ್ಲಿ ತೊಡಗದಂತೆ ನಿರ್ಬಂಧ ಹೇರುವ ಸಾಮರ್ಥ್ಯ ಹೊಂದಿರುತ್ತಾಳೆ, ಜನನ ಪ್ರಮಾಣ ಹೆಚ್ಚಳಕ್ಕೆ ಪತಿಯ ಕೃತ್ಯ ಕಾರಣವಾಗುತ್ತದೆ, ಶಿಕ್ಷಣ ಪಡೆದ ಮಹಿಳೆ ಪತಿಯನ್ನು ನಿಯಂತ್ರಿಸುವುದನ್ನು ತಿಳಿದುಕೊಂಡಿರುತ್ತಾಳೆ, ಜನನ ಪ್ರಮಾಣದಲ್ಲಿ ಇಳಿಕೆಯಾಗಲಿ ಮಹಿಳೆಯರು ಶಿಕ್ಷಿತರಾಗಿರುವುದೇ ಕಾರಣ" ಎಂದು ಹೇಳಿದ್ದರು.
ನಿತೀಶ್ ಹೇಳಿಕೆಗೆ ವ್ಯಾಪಕ ಆಕ್ರೋಶ
ನಿತೀಶ್ ಕುಮಾರ್ ಅವರು ಬಳಸಿದ ಭಾಷೆ ಅಶ್ಲೀಲ ಹಾಗೂ ನಾಚಿಕೆಗೇಡಿನದ್ದು ಎಂದು ಬಿಜೆಪಿ ಖಂಡಿಸಿತ್ತು. ನಿತೀಶ್ ಕುಮಾರ್ ಅವರು ಈ ಕುರಿತು ಕ್ಷಮೆ ಯಾಚಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಅಧ್ಯಕ್ಷೆ ರೇಖಾ ಶರ್ಮಾ ಆಗ್ರಹಿಸಿದ್ದರು.
ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಪ್ರತಿಕ್ರಿಯೆ ನೀಡಿದ ನಿತಿಶ್ ಕುಮಾರ್, "ಯಾರನ್ನೂ ನೋಯಿಸುವ ಉದ್ದೇಶದಿಂದ ಹೇಳಿಕೆ ನೀಡಿಲ್ಲ, ಜನಸಂಖ್ಯೆ ನಿಯಂತ್ರಣಕ್ಕೆ ಶಿಕ್ಷಣ ಅಗತ್ಯ ಎಂದು ನಾನು ಯಾವಾಗಲೂ ಕಾಪಾಡಿಕೊಂಡಿದ್ದೇನೆ. ಮಹಿಳಾ ಸಬಲೀಕರಣ ಮತ್ತು ಮಹಿಳಾ ಅಭಿವೃದ್ಧಿಗಾಗಿ ಬದ್ಧವಾಗಿದ್ದೇನೆ" ಎಂದರು.
ಈ ಟೀಕೆಗಳು ಜನಸಂಖ್ಯೆ ನಿಯಂತ್ರಣದ ಜವಾಬ್ದಾರಿಯನ್ನು ಮಹಿಳೆಯರ ಮೇಲೆ ಹೇರುವ ಕೀಳು ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಲಾಗಿತ್ತು.
ನಿತೀಶ್ ಕುಮಾರ್ ಅವರ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸಮರ್ಥನೆ ಮಾಡಿಕೊಂಡಿದ್ದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ನಿತೀಶ್ ಕುಮಾರ್ ಹೇಳಿಕೆ ವಿರುದ್ಧ ಬಿಜೆಪಿ ಕಿಡಿ ಕಾರಿದೆ, ಅವರನ್ನು "ಬಿ-ಗ್ರೇಡ್ ವಯಸ್ಕ ಚಲನಚಿತ್ರಗಳಿಂದ ಹುಳುಗಳಿಂದ ಮುತ್ತಿಕೊಂಡಿರುವ ಮನಸ್ಸು" ಎಂದು ಕರೆದಿದೆ.
ಬಿಹಾರದ ಉಜಿಯಾರ್‌ಪುರದ ಲೋಕಸಭಾ ಸಂಸದ, ಕೇಂದ್ರ ಸಚಿವ ನಿತ್ಯಾನಂದ ರೈ ಪ್ರತಿಕ್ರಿಯೆ ನೀಡಿ, ನಿತೀಶ್ ಕುಮಾರ್ ಅವರು ತಮ್ಮ "ಮಾನಸಿಕ ಸ್ಥಿರತೆ" ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದು, ಅವರನ್ನು ಸಮರ್ಥನೆ ಮಾಡಿದ ತೇಜಸ್ವಿ ಯಾದವ್ ವಿರುದ್ಧ ಕೂಡ ಆಕ್ರೋಶ ವ್ಯಕ್ತಪಡಿಸಿದರು.
"ನಿತೀಶ್ ಮಹಿಳೆಯರ ಬಗ್ಗೆ ಮಾತನಾಡಿರುವ ರೀತಿ ಆಕ್ಷೇಪಾರ್ಹವಾಗಿದೆ, ತೇಜಸ್ವಿ ಯಾದವ್ ಅವರ ಹೇಳಿಕೆ ಕೂಡ ಆಕ್ಷೇಪಾರ್ಹವಾಗಿದೆ. ನಿತೀಶ್ ಕುಮಾರ್ ಇನ್ನು ಮುಂದೆ ಸಿಎಂ ಆಗಲು ಅರ್ಹರಲ್ಲ. ಅವರು ರಾಜಕೀಯದಿಂದ ದೂರವಿರಬೇಕು" ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.
"ಮಹಿಳೆಯರು ಸಾಕಷ್ಟು ಶಿಕ್ಷಣ ಪಡೆದಿದ್ದರೆ (ಅವರು) ಮಕ್ಕಳನ್ನು ಯಾವಾಗ ಪಡೆಯಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ" ಎಂದು ಅವರು ಹೇಳಬಹುದಿತ್ತು. ಬದಲಿಗೆ, ಅವರು ಅದನ್ನು ಅನುಚಿತ ಪದಗಳು ಮತ್ತು ಸನ್ನೆಗಳ ಮೂಲಕ ವಿವರಿಸಿದರು, ಅಸಾಸುದ್ದಿನ್ ಓವೈಸಿ ಕೂಡ ಹೇಳಿದ್ದಾರೆ.












Click it and Unblock the Notifications