ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲವೆಂದು ಸಂಬಂಧಿಯ ದೇಹದಾನ ಮಾಡಿದ ಮಹಿಳೆ
ಬಾಸ್ಟರ್(ಛತ್ತೀಸ್ ಗಢ), ಫೆಬ್ರವರಿ 17: ಶವವನ್ನು ಆಸ್ಪತ್ರೆಯಿಂದ ಸಾಗಿಸಲು ಹಣವಿಲ್ಲವೆಂದು, ಮಹಿಳೆಯೊಬ್ಬರು ಸಂಬಂಧಿಯ ದೇಹದಾನ ಮಾಡಿದ ಘಟನೆ ಛತ್ತೀಸ್ ಗಢದ ಬಾಸ್ಟರ್ ಎಂಬಲ್ಲಿ ನಡೆದಿದೆ.
ವಾಹನಾಪಘಾತದಿಂದ ಪೆಟ್ಟು ತಿಂದು ಬಳಲುತ್ತಿದ್ದ ವ್ಯಕ್ತಿಯೊಬ್ಬನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಆತನ ಮೃತದೇಹವನ್ನು ಮನೆಗೆ ಸಾಗಿಸಲು ಅಂಬುಲೆನ್ಸ್ ಆಗಲಿ, ಆತನ ಅಂತ್ಯಕ್ರಿಗೆ ನೀಡುವುದಕ್ಕೆ ಹಣವಾಗಲಿ ಇಲ್ಲದ ಕಾರಣ ಆತನ ಅತ್ತಿಗೆ ಆತನ ದೇಹವನ್ನು ಇಲ್ಲಿನ ಜಗ್ದಲ್ಪುರ ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ದಾರೆ.

ಫೆಬ್ರವರಿ 15 ರಂದು ಈ ಘಟನೆ ನಡೆದಿದೆ. ಆತನ ಅಂತ್ಯಕ್ರಿಯೆಗೆ ಸಂಬಮಧಿಕರ್ಯಾರೂ ಶಾಯ ಮಾಡುವುದಿಲ್ಲ, ತನ್ನ ಬಳಿ ಹಣವಿಲ್ಲ ಎಂದು ಆತನ ಅತ್ತಿಗೆ ಹೇಳಿದಾಗ, ಆಸ್ಪತ್ರೆಯ ಸಿಬ್ಬಂದಿಯೊಬ್ಬರು ದೇಹದಾನದ ಬಗ್ಗೆ ತಿಳಿಸಿದ್ದಾರೆ. ಇದರಿಂದ ಮತ್ತೊಬ್ಬರಿಗೆ ಉಪಯೋಗವಾಗುತ್ತದೆ ಎಂದಾದರೆ ಹಾಗೆಯೇ ಮಾಡೋಣ, ನನಗೂ ಬೇರೆ ಗತಿ ಇಲ್ಲ ಎಂದು ನಿರ್ಧರಿಸಿದ ಆತ್ತಿಗೆ ಈ ತೀರ್ಮಾನ ಕೈಗೊಂಡಿದ್ದಾರೆ.












Click it and Unblock the Notifications