Get Updates
Get notified of breaking news, exclusive insights, and must-see stories!

ನಿತೀಶ್ ಕುಮಾರ್‌ಗೆ ಆಟ, ಕಾಂಗ್ರೆಸ್ ನಾಯಕರಿಗೆ ಪ್ರಾಣ ಸಂಕಟ!

2024ರ ಲೋಕಸಭಾ ಚುನಾವಣೆಗೆ ಭಾರತ ಸಜ್ಜಾಗುತ್ತಿದ್ದು, ಇಡೀ ಜಗತ್ತೇ ಈಗ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಮೇಲೆ ಕಣ್ಣಿಟ್ಟು ಕೂತಿದೆ. ಪ್ರಧಾನಿ ನರೇಂದ್ರ ಮೋದಿಗೆ ಈ ಚುನಾವಣೆ ಅತ್ಯಂತ ಮುಖ್ಯವಾಗಿದ್ದು ಹ್ಯಾಟ್ರಿಕ್ ಬಾರಿಸುವ ನಿರೀಕ್ಷೆಯಲ್ಲೂ ಇದ್ದಾರೆ. ಈ ಸ್ಥಿತಿಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಕಾಂಗ್ರೆಸ್ & ವಿರೋಧ ಪಕ್ಷಗಳ ನಾಯಕರಿಗೆ ಮರ್ಮಾಘಾತ ನೀಡಿದ್ದಾರೆ.

ಅಂದಹಾಗೆ ನಿತೀಶ್ ಕುಮಾರ್ ಅವರು ಪಕ್ಷಾಂತರ ಮಾಡುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಬಿಜೆಪಿ ಜೊತೆ ಸರ್ಕಾರ ರಚಿಸಿ, ಕೊನೆಗೆ ಬಿಜೆಪಿಗೆ ಕೈಕೊಟ್ಟು ಓಡಿ ಬಂದರು. ಹತ್ತಾರು ವರ್ಷಗಳ ಕಾಲ ಬಿಜೆಪಿ ಜೊತೆಗೆ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ 2014ರಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಮುನಿಸಿಕೊಂಡರು. ಹಾಗೇ ಮೋದಿ ಅವರಿಗೆ ಪ್ರಧಾನಿ ಸ್ಥಾನ ಸಿಕ್ಕಿದ್ದು ನಿತೀಶ್ ಕುಮಾರ್‌ಗೆ ಇಷ್ಟ ಇರಲಿಲ್ಲ ಎಂಬ ಮಾತು ಕೇಳಿಬಂದವು.

Nitish Kumar Likely to Take Oath As CM Of Bihar with BJPs Support

ಕೊನೆಗೆ ಬಿಜೆಪಿ ಬಿಟ್ಟು ಹೊರಗೆ ಬಂದು ಕಾಂಗ್ರೆಸ್ & ಆರ್‌ಜೆಡಿ ಜೊತೆ ಸೇರಿ ಬಿಹಾರದಲ್ಲಿ, ಸರ್ಕಾರ ರಚಿಸಿದ್ದರು ನಿತೀಶ್ ಕುಮಾರ್. ಆದರೆ ಆ ನಂತರ ಮತ್ತೆ ಬಿಜೆಪಿಗೆ ಓಡಿ ಹೋದ್ರು ಇದೇ ನಿತೀಶ್ ಕುಮಾರ್. ಹೀಗೆ ಕೆರೆ ದಡ & ದಡ ಕೆರೆ ಆಟ ಆಡುತ್ತಿರುವ ಬಿಹಾರ ಸಿಎಂಗೆ ಈಗ ಮತ್ತೊಮ್ಮೆ ಬಿಜೆಪಿಗೆ ಹೋಗುವ ಮನಸ್ಸಾಗಿದೆ ಎನ್ನಲಾಗುತ್ತಿದೆ!

2022ರಲ್ಲಿ ಮತ್ತೆ ಕಾಂಗ್ರೆಸ್ ಜೋಡಿ!

ಇನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಯಾವಾಗ ಯಾರ ಜೊತೆ ಇರುತ್ತಾರೆ? ಅನ್ನೋದು ಗೊತ್ತೇ ಆಗಲ್ಲ. ಅದೇ ರೀತಿ 2022ರಲ್ಲಿ ಅವರು ಮತ್ತೆ ಬಿಜೆಪಿಗೆ ಕೈಕೊಟ್ಟು, ವಾಪಸ್ ಅದೇ ಹಳೆಯ ದೋಸ್ತಿಗಳ ಜೊತೆ ಸೇರಿ ಬಿಹಾರದಲ್ಲಿ ಸರ್ಕಾರ ರಚಿಸಿದ್ದರು. ಹೀಗೆ ನಿತೀಶ್ ಮತ್ತೆ ಕಾಂಗ್ರೆಸ್ & ಆರ್‌ಜೆಡಿ ಸಂಬಂಧ ಬೆಳೆಸಿದ್ದರು. ಹೀಗೆ, ವಿರೋಧ ಪಕ್ಷಗಳ ಜೊತೆಗೆ ಸರ್ಕಾರ ರಚನೆ ಮಾಡಿ 2 ವರ್ಷ ಕೂಡ ಕಳೆದಿಲ್ಲ. ಆಗಲೇ ಮತ್ತೊಮ್ಮೆ ಬಿಜೆಪಿಗೆ ಹೋಗಲು ನಿತೀಶ್ ತಯಾರಿ ನಡೆಸಿದ್ದಾರಂತೆ.

ನಿತೀಶ್ ಕುಮಾರ್ ಗುರಿ ಏನು?

2024ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಕ್ಕೂಟ ರಚಿಸಿದಾಗ ಇದೇ ನಿತೀಶ್ ಕುಮಾರ್ ಮುಂಚೂಣಿಯಲ್ಲಿ ಇದ್ದರು. ಅದರಲ್ಲೂ ವಿವಿಧ ಪಕ್ಷಗಳ ಜೊತೆಗೆ ಮಾತುಕತೆ ನಡೆಸಿದ್ದ ಅವರು, ಹಲವು ಸಭೆಗಳ ಮುಂದಾಳತ್ವ ವಹಿಸಿದ್ದರು. ಈ ಮೂಲಕ ಇಂಡಿಯಾ ಒಕ್ಕೂಟಕ್ಕೆ ಬೆಂಬಲವಾಗಿ ನಿಂತಿದ್ದರು. ಆದರೆ ಮೊದಲಿನಿಂದ ಪ್ರಧಾನಿ ಪಟ್ಟದ ಮೇಲೆ ಒಂದು ಕಣ್ಣು ಇಟ್ಟಿರುವ ನಿತೀಶ್ ಕುಮಾರ್ ಈಗ ವಿರೋಧ ಪಕ್ಷಗಳಿಗೆ ಕೈಕೊಟ್ಟು, ವಾಪಸ್ ಬಿಜೆಪಿಗೆ ಹೋಗುತ್ತಿರುವುದು ಸಂಚಲನ ಸೃಷ್ಟಿಸಿದೆ.

Nitish Kumar Likely to Take Oath As CM Of Bihar with BJPs Support

ಕಾಂಗ್ರೆಸ್ ನಾಯಕರಿಗೆ ಚಿಂತೆ ಶುರು

ಈಗಾಗಲೇ ಬಿಹಾರ ಸಿಎಂ ನಿತೀಶ್ ಕುಮಾರ್ ಡಿಸೈಡ್ ಮಾಡಿದಂತೆ ಕಾಣುತ್ತಿದೆ. ಯಾಕಂದ್ರೆ ಲೋಕಸಭೆ ಚುನಾವಣೆ ಸಮಯದಲ್ಲಿ ನಿತೀಶ್ ಕುಮಾರ್ ಅವರ ಬೆಂಬಲ ಬಿಜೆಪಿ ಅಗತ್ಯವಿದೆ. ಇದೇ ಸಮಯದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೂ ನಿತೀಶ್ ಕುಮಾರ್ ಮುನಿಸನ್ನು ಮುಂದುವರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ನಿತೀಶ್ ಕುಮಾರ್ ದಿಢೀರ್ ಎಸ್ಕೇಪ್ ಆಗಿ, ಮತ್ತೆ ಬಿಜೆಪಿ ಜೊತೆ ಸೇರುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಲೋಕಸಭಾ ಚುನಾವಣೆ 2024ಕ್ಕೆ ಮೊದಲು ಭಾರತೀಯ ರಾಜಕೀಯ ಶೇಕ್ ಆಗಿದೆ. ಹಾಗೇ ಕಾಂಗ್ರೆಸ್ ನಾಯಕರಿಗೂ ನಿತೀಶ್ ಕುಮಾರ್ ಸಂಪರ್ಕ ಸಾಧ್ಯವಾಗುತ್ತಿಲ್ಲ.

2024ರ ಲೋಕಸಭೆ ಚುನಾವಣೆಯಲ್ಲಿ BJP ವಿರುದ್ಧ ಜಯ ಸಾಧಿಸುವುದು ವಿಪಕ್ಷಗಳ ಒನ್‌ಲೈನ್ ಅಜೆಂಡಾ. ಇದೇ ಹಿನ್ನೆಲೆ ವಿರೋಧ ಪಕ್ಷಗಳ ನಡುವೆ ಒಗ್ಗಟ್ಟನ್ನೂ ಮೂಡಿಸಿ, ಲೋಕಸಭೆಗಾಗಿ ಸಜ್ಜಾಗಲು ಮೀಟಿಂಗ್ ಮೇಲೆ ಮೀಟಿಂಗ್ ಮಾಡಲಾಗಿತ್ತು. ಹೀಗಿದ್ದಾಗ, ನಿತೀಶ್ ಕುಮಾರ್‌ಗೆ ಗಾಳ ಹಾಕಲು ಬಿಜೆಪಿ ನಾಯಕರು ಮೊದಲಿಂದ ಯತ್ನಿಸಿದ್ದರು ಎನ್ನುವ ಮಾತು ಹರಿದಾಡಿ ಸಂಚಲನ ಸೃಷ್ಟಿಯಾಗಿತ್ತು. ಆದರೆ ಇದೀಗ ಅದು ನಡೆದೇ ಹೋಗಿದೆ. ನಿತೀಶ್ ಕುಮಾರ್‌ಗೆ ಬಿಜೆಪಿ ಸೇರಲು ರೆಡ್ ಕಾರ್ಪೆಟ್ ಹಾಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+