ಕಾಳಸರ್ಪ ಯೋಗದಿಂದ 4 ರಾಶಿಯವರಿಗೆ ಕಷ್ಟ: ಎದುರಾಗುವುದು ಭಾರೀ ನಷ್ಟ
ಜ್ಯೋತಿಷ್ಯದ ಪ್ರಕಾರ, ರಾಹು ಮತ್ತು ಕೇತುಗಳನ್ನು ದುಷ್ಟ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಪ್ರಸ್ತುತ, ರಾಹು ಕುಂಭ ರಾಶಿಯಲ್ಲಿ ಮತ್ತು ಕೇತು ಸಿಂಹ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ವ್ಯಕ್ತಿಯ ಜಾತಕದಲ್ಲಿರುವ ಎಲ್ಲಾ ಇತರ ಗ್ರಹಗಳು ಈ ಎರಡು ಛಾಯಾ ಗ್ರಹಗಳ ನಡುವೆ ಸಿಕ್ಕಿಹಾಕಿಕೊಂಡಾಗ, 'ಕಾಳಸರ್ಪ ಯೋಗ' ಎಂಬ ವಿಶೇಷ ಸ್ಥಿತಿ ರೂಪುಗೊಳ್ಳುತ್ತದೆ. ಈ ಯೋಗವು ವ್ಯಕ್ತಿಯ ಜೀವನದಲ್ಲಿ ಅನೇಕ ಸವಾಲುಗಳು ಮತ್ತು ಏರಿಳಿತಗಳನ್ನು ತರುತ್ತದೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಈ 'ಯೋಗ'ದ ಪರಿಣಾಮವು ಚಂದ್ರನು ಕನ್ಯಾರಾಶಿಗೆ ಪ್ರವೇಶಿಸಿದಾಗ ಕೊನೆಗೊಳ್ಳುತ್ತದೆ. ಈ ಅವಧಿಯು ಕೆಲವು ರಾಶಿಯವರಿಗೆ ಕಠಿಣ ಪರೀಕ್ಷೆಯನ್ನು ಒಡ್ಡುವ ಸಾಧ್ಯತೆಯಿದೆ. ಆದ್ದರಿಂದ ಅವರು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಮಿಥುನ ರಾಶಿ (Cancer):
ಈ ಅವಧಿಯಲ್ಲಿ ಮಿಥುನ ರಾಶಿಯವರು ವಿಶೇಷವಾಗಿ ಜಾಗರೂಕರಾಗಿರಬೇಕು. ಇವರು ಆಡುವ ಮಾತುಗಳಲ್ಲಿ ಕಠೋರ ಪದಗಳನ್ನು ಬಳಸುವ ಸಾಧ್ಯತೆ ಇದ್ದು, ಇದು ನಿಮ್ಮ ಸಂಬಂಧಗಳಲ್ಲಿ ಅಂತರವನ್ನು ಹೆಚ್ಚಿಸಬಹುದು. ನಿಮಗೆ ಬಹಳ ಹತ್ತಿರವಿರುವವರಿಂದಲೇ ದ್ರೋಹವಾಗುವ ಅಪಾಯವೂ ಇದೆ. ಕೆಲಸದಲ್ಲಿನ ಸವಾಲುಗಳು ನಿಮ್ಮ ತಾಳ್ಮೆಯನ್ನು ಪರೀಕ್ಷಿಸಬಹುದು. ಯಾವ ಕೆಲಸವೇ ಆಗಲಿ ಪ್ರತೀ ಕೆಲಸ ಮಾಡುವಾಗಲೂ ವಿಶೇಷ ಎಚ್ಚರಿಕೆ ಅಗತ್ಯ. ಇಲ್ಲವಾದಲ್ಲಿ ನಷ್ಟವನ್ನು ಎದುರಿಸಬೇಕಾಗಬಹುದು. ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು.
ಕರ್ಕಾಟಕ ರಾಶಿ (Cancer):
ಈ ಸಮಯವು ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೆ ಸ್ವಲ್ಪ ಒತ್ತಡದಿಂದ ಕೂಡಿರಬಹುದು. ಕೆಲಸದ ಒತ್ತಡ ಹೆಚ್ಚಾಗಬಹುದು. ವೈಯಕ್ತಿಕ ಜೀವನದಲ್ಲಿ ಸಂಘರ್ಷದ ಸಂದರ್ಭಗಳು ಎದುರಾಗಬಹುದು. ನಿಮ್ಮ ಸ್ನೇಹಿತರು ಸಂಬಂಧಿಗಳೊಂದಿಗೆ ಭಿನ್ನಾಭಿಪ್ರಾಯಗಳು ಅಥವಾ ತಪ್ಪು ತಿಳುವಳಿಕೆಗಳು ಮೂಡುವ ಸಾಧ್ಯತೆ ಇರುತ್ತದೆ. ಹಣಕಾಸಿನ ವಿಷಯಗಳಲ್ಲಿಯೂ ಎಚ್ಚರಿಕೆ ಅಗತ್ಯ. ಇಲ್ಲವಾದರೆ ನಷ್ಟವನ್ನು ತಪ್ಪಿಸುವುದು ಸಾಧ್ಯವಾಗದೇ ಇರಬಹುದು. ಸಣ್ಣ ಆರೋಗ್ಯ ಸಮಸ್ಯೆ ಎದುರಾದರೂ ಜಾಗೃತೆ ವಹಿಸಿ. ಸ್ವಲ್ಪ ನಿರ್ಲಕ್ಷ್ಯ ಕೂಡಾ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಆತುರಕ್ಕೆ ಬಿದ್ದು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಸಿಂಹ ರಾಶಿ (Leo):
ಸಿಂಹ ರಾಶಿಯವರಿಗೆ ಈ ಅವಧಿ ಸವಾಲಿನಿಂದ ಕೂಡಿರುವುದು. ಹಣಕಾಸಿನ ವಿಷಯಗಳಲ್ಲಿ ಅಸ್ಥಿರತೆ ಕಾಡಬಹುದು. ವೃತ್ತಿಪರ ಜೀವನದಲ್ಲಿ ಅಡೆತಡೆಗಳು ಎದುರಾಗಬಹುದು. ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗಬಹುದು. ಆದ್ದರಿಂದ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಚಿಂತನಶೀಲವಾಗಿ ವರ್ತಿಸುವುದು ಬಹಳ ಮುಖ್ಯ. ವೈವಾಹಿಕ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು. ಸಣ್ಣ ವಿಷಯಗಳಿಗೂ ವಿವಾದಗಳು ಕಾಣಿಸಿಕೊಳ್ಳಬಹುದು. ಈ ಸಮಯದಲ್ಲಿ ಮಾತಿನಲ್ಲಿ ಸಂಯಮವಿರಲಿ. ಏಕೆಂದರೆ ನಿಮ್ಮ ಮಾತುಗಳು ಇತರರಿಗೆ ನೋವುಂಟು ಮಾಡಬಹುದು.
ಕುಂಭ ರಾಶಿ (Aquarius):
ಈ ಅವಧಿಯು ಕುಂಭ ರಾಶಿಯವರಿಗೂ ಸವಾಲಿನದ್ದೇ ಆಗಿರುವುದು. ಆದರೂ ಕೆಲವೊಂದು ವಿಷಯಗಳಲ್ಲಿ ನಿಮಗೆ ಗೆಲುವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ತೊಂದರೆಗಳು ಉಂಟಾಗಬಹುದು. ಸಹೋದ್ಯೋಗಿಗಳು ಅಥವಾ ವ್ಯವಹಾರ ಪಾಲುದಾರರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಈ ಸಮಯದಲ್ಲಿ ತೆಗೆದುಕೊಳ್ಳುವ ಆತುರದ ನಿರ್ಧಾರಗಳು ನಷ್ಟಗಳಿಗೆ ಕಾರಣವಾಗಬಹುದು. ಮನಸ್ಸು ಚಂಚಲವಾಗಿರುವುದು. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೂ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು. ಆದ್ದರಿಂದ ಪ್ರಮುಖ ಕೆಲಸಗಳನ್ನು ಜಾಗರೂಕತೆಯಿಂದ ಮಾಡಿ. ಬೇರೆಯವರನ್ನು ಕುರುಡಾಗಿ ನಂಬಬೇಡಿ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಇನ್ನು ಕಾಳ ಸರ್ಪ ಯೋಗದ ಅವಧಿ ಮುಗಿಯುತ್ತಿದ್ದ ಹಾಗೆಯೇ ಈ ರಾಶಿಯವರು ಮತ್ತೆ ಯಶಸ್ಸಿನ ಹಾದಿಯಲ್ಲಿ ಮುಂದುವರೆಯುತ್ತಾರೆ. ಹಾಗಾಗಿ ಕಾಳ ಸರ್ಪ ಯೋಗದ ಅವಧಿಯಲ್ಲಿ ಹುಷಾರಾಗಿರುವುದು ಒಳ್ಳೆಯದು.
(ಬರಹ: ರಂಜಿತಾ ಆರ್.ಕೆ.)


Click it and Unblock the Notifications
