Festival Special Train Mysuru-Raxaul: ಕರ್ನಾಟಕ-ಬಿಹಾರ ವಿಶೇಷ ರೈಲು ವೇಳಾಪಟ್ಟಿ, ಪ್ರಯಾಣ ದಿನಾಂಕ, ದರದ ಮಾಹಿತಿ
ಬೆಂಗಳೂರು, ನವೆಂಬರ್ 14: ದೇಶದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಋತುವಿನ ಸಂಚಾರ ದಟ್ಟಣೆಯನ್ನು ನಿರ್ವಹಣೆಗೆ ಭಾರತೀಯ ರೈಲ್ವೇಯು ಕರ್ನಾಟಕದ ಮೈಸೂರು ಮತ್ತು ಬಿಹಾರದ ರಕ್ಸಾಲ್ ನಡುವೆ ವಿಶೇಷ ರೈಲು (Mysore-Raxaul Special Train) ಓಡಿಸಲು ನಿರ್ಧರಿಸಿದೆ. ಇದು ಹೆಚ್ಚಾಗುವ ಪ್ರಮಾಣಿಕರನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.
ರೈಲ್ವೆ ಇಲಾಖೆಯು ಈ ವಿಶೇಷ ರೈಲುಗಳು 2023ರ ಹಬ್ಬದ ಸಂದರ್ಭಗಳಲ್ಲಿ ಹೆಚ್ಚಾಗುವ ಪ್ರಯಾಣಿಕರ ಒಳಹರಿವನ್ನು ನಿರ್ವಹಿಸುವ ಗುರಿಯನ್ನು ಹೊಂದಿವೆ. ಹಾಗಾದರೆ ಈ ಮೈಸೂರು-ರಕ್ಸಾಲ್ ವಿಶೇಷ ರೈಲುಗಳು (Mysruru to Raxaul Special Train) ವೇಳಾಪಟ್ಟಿ, ಪ್ರಯಾಣದ ದರ, ಯಾವಾಗೆಲ್ಲ ಈ ರೈಲು ಸಂಚಾರ ಲಭ್ಯ, ಸಮಯದ ವಿವರ ತಿಳಿಯಿರಿ.

ವಿಶೇಷ ರೈಲಿನ ವೇಳಾಪಟ್ಟಿ ಮಾಹಿತಿ
* ಮೈಸೂರು-ರಕ್ಸಾಲ್ ವಿಶೇಷ ರೈಲು (ಸಂಖ್ಯೆ-06221) ತನ್ನ ಮೊದಲ ಪ್ರಯಾಣವನ್ನು ಇದೆ ನವೆಂಬರ್ 15ರಂದು ಬುಧವಾರ ಸಂಜೆ 07 ಗಂಟೆಗೆ (17:00) ಮೈಸೂರಿನಿಂದ ಆರಂಭಿಸುತ್ತದೆ. ನಂತರ ನವೆಂಬರ್ 17ರಂದು ಶುಕ್ರವಾರ ರಾತ್ರಿ 23.50 ಗಂಟೆಗೆ ರಕ್ಸಾಲ್‌ಗೆ ತಲುಪುಲಿದೆ.
* ಅಲ್ಲಿಂದ ವಿಶೇಷ ರೈಲು (ಸಂಖ್ಯೆ-06222) ಮರಳಿ ನವೆಂಬರ್ 20ರಂದು ಸೋಮವಾರ ಬೆಳಗ್ಗೆ 08 ಗಂಟೆಗೆ ರಕ್ಸಾಲ್‌ನಿಂದ ಮೊದಲು ಪ್ರಯಾಣ ಆರಂಭಿಸಲಿದೆ. ಅಲ್ಲಿಂದ ಹೊರಟು ಬುಧವಾರ ರಾತ್ರಿ 21.40 ಗಂಟೆಗೆ ಮೈಸೂರು ತಲುಪಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.

ವಿಶೇಷ ರೈಲಿನ ಮಾರ್ಗ-ನಿಲುಗಡೆ ಮಾಹಿತಿ
ಮೈಸೂರಿನಿಂದ ಹೊರಡುವ ರೈಲು ಬೆಂಗಳೂರಿನ KSR ನಿಲ್ದಾಣ,ಬಂಗಾರಪೇಟೆ, ಕಟಪಾಡಿ ಜೆಎನ್, ಪೆರಂಬೂರ್, ಗುಡೂರು ಜಂಕ್ಷನ್, ವಿಜಯವಾಡ ಜಂಕ್ಷನ್, ವಾರಂಗಲ್, ಬಲ್ಹರ್ಷಾ, ನಾಗಪುರ, ಇಟಾರ್ಸಿ ಜಂಕ್ಷನ್, ಜಬಲ್‌ಪುರ, ಕಟ್ನಿ, ಸತ್ನಾ, ಮಾಣಿಕಪುರ, ಡಿಡಿ ಉಪಾಧ್ಯಾಯ ಜಂಕ್ಷನ್, ಬಕ್ಸಾರ್ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ರೈಲುಗಳು ನಿಲುಗಡೆಯಾಗಲಿವೆ.
ಅರಾ ಜಂಕ್ಷನ್, ಪಾಟ್ನಾ ಜಂಕ್ಷನ್, ಭಕ್ತಿಯಾರ್ಪುರ್ ಜಂಕ್ಷನ್, ಮೊಕಾಮೆಹ್ ಜಂಕ್ಷನ್, ಬರೌನಿ ಜಂಕ್ಷನ್, ಸಮಸ್ತಿಪುರ್ ಜಂಕ್ಷನ್, ಮುಜಫರ್ಪುರ್ ಜಂಕ್ಷನ್, ಮತ್ತು ಸೀತಾಮರ್ಹಿ ಮಾರ್ಗವಾಗಿ ರಕ್ಸಾಲ್ ತಲುಲಿದೆ. ಮರಳೆ ಇದೇ ಮಾರ್ಗದಲ್ಲಿ ಸಾಂಸ್ಕೃತಿಕ ರಾಜಾಧಾನಿ ಮೈಸೂರು ಬಂದು ಸೇರಲಿದೆ.
ವಿಶೇಷ ರೈಲುಗಳ ಇತರ ಮಾಹಿತಿ
ಈ ವಿಶೇಷ ರೈಲು 22 ICF ಬೋಗಿಗಳನ್ನು ಒಳಗೊಂಡಿದೆ. ಒಂದು ಎಸಿ ಫಸ್ಟ್ ಕ್ಲಾಸ್ (1A), ಎರಡು ಎಸಿ 2 ಟೈರ್ (2A), ಏಳು ಎಸಿ 3 ಟೈರ್ (3A), ಎಂಟು ಸ್ಲೀಪರ್ ಕ್ಲಾಸ್, ಎರಡು ಜನರಲ್ ಸೆಕೆಂಡ್ ಕ್ಲಾಸ್ ಮತ್ತು ಎರಡು ಗಾರ್ಡ್ಸ್ ಬ್ರೇಕ್ ವ್ಯಾನ್ ಗಳು ಈ ರೈಲಿನಲ್ಲಿರುತ್ತವೆ.
ಟಿಕೆಟ್ ಬುಕ್ಕಿಂಗ್ ಮಾಡುವವರು ಗಾಡಿ ಸಂಖ್ಯೆ ಸಂಖ್ಯೆ 06221/06222 ನೆನಪಲಿ ಇಟ್ಟುಕೊಂಡು ಅಧಿಕೃತ ವೆಬ್‌ಸೈಟ್ www.irctc.co.in ನಲ್ಲಿ ತಮ್ಮ ಆಸನ ಕಾಯ್ದಿರಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಈ ವಿಶೇಷ ರೈಲುಗಳು ವಿವರವಾದ ಸಮಯ, ಪ್ರಯಾಣ (ಟಿಕೆಟ್) ಶುಲ್ಕ ಮತ್ತು ಹೆಚ್ಚುವರಿ ನಿಲುಗಡೆಗಳ ಮಾಹಿತಿಯನ್ನು ನೀವು www.enquiry.indianrail.gov.in ಗೆ ಭೇಟಿ ಪಡೆದುಕೊಳ್ಳಬೇಕು. ಇಲ್ಲವೇ NTES ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಬೇಕು ಎಂದು ರೈಲ್ವೆ ಇಲಾಖೆ ತಿಳಿಸಿದೆ.












Click it and Unblock the Notifications