ರಾಮಮಂದಿರವನ್ನು ಟೀಕಿಸುವ ವೇಳೆ ಕುಸಿದ ವೇದಿಕೆ: ವಿಡಿಯೋ ವೈರಲ್

ಗಯಾ ಜನವರಿ 20: ರಾಮ ಮಂದಿರದ ಬಗ್ಗೆ ಟೀಕಿಸುತ್ತಿದ್ದಾಗ ವೇದಿಕೆ ಕುಸಿದು ಮಾಜಿ ಸಂಸದರು ಸೇರಿದಂತೆ ಹಲವರು ಸ್ಥಳೀಯ ಮುಖಂಡರು ಗಾಯಗೊಂಡ ಅಚ್ಚರಿ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.

ಬಿಹಾರದ ಗಯಾದಲ್ಲಿ ಪಸ್ಮಾಂಡ ವಂಚಿತ್ ಮಹಾಸಂಘಟನ್ ಜನವರಿ 18ರಂದು ಸ್ರಾಂತ್ರ್ಯ ಹೋರಾಟಗಾರ ಅಬ್ದುಲ್ ಕ್ವಾಮ್ ಅನ್ಸಾರಿ ಅವರ 51ನೇ ಪುಣ್ಯಸ್ಮರಣೆ ಸಭೆಯನ್ನು ಆಯೋಜಿಸಿತ್ತು. ಇದಕ್ಕಾಗಿ ವೇದಿಕೆಯನ್ನು ಸಿದ್ದಪಡಿಸಲಾಗಿತ್ತು. ವೇದಿಕೆಯಲ್ಲಿ ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ರಾಮ ಮಂದಿರದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಂತೆ ವೇದಿಕೆಯೇ ಕುಸಿದು ಬಿದ್ದಿದೆ.

'ಜನವರಿ 22 ರಂದು ಶ್ರೀರಾಮ ಮಂದಿರ ಉದ್ಘಾಟನೆ ಮಾಡುವ ಮೂಲಕ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿ ಮತಯಾಚನೆ ಮಾಡಲಾಗುತ್ತಿದೆ. ಇಷ್ಟೆಲ್ಲಾ ಅದ್ಧೂರಿಯಾಗಿ ರಾಮ ಮಂದಿರ ನಿರ್ಮಾಣ ಮಾಡುತ್ತಿರುವ ಇವರು ರಾಮ ಜನ್ಮದಿನವನ್ನು ಏಕೆ ಆಚರಿಸುತ್ತಿಲ್ಲ ಎಂಬುದು ಪ್ರಶ್ನೆ' ಎಂದ ಕೂಡಲೇ ವೇದಿಕೆ ಕುಸಿದುಬಿದ್ದಿದೆ. ಘಟನೆಯಲ್ಲಿ ಅಲಿ ಅನ್ವರ್ ಅನ್ಸಾರಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಅಲಿ ಅನ್ಸಾರಿ ಅವರು ಆರ್‌ಜೆಡಿ ಕೋಟಾದಿಂದ ಬಿಹಾರದಿಂದ ಮಾಜಿ ರಾಜ್ಯಸಭಾ ಸಂಸದರಾಗಿದ್ದಾರೆ.

Platform collapsed while criticizing Ram Mandir: Video goes viral

ಈ ಘಟನೆಯ ವಿಡಿಯೋವನ್ನು ಅಲ್ಲಿದ್ದ ಸ್ಥಳೀಯ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದಾರೆ. ಇದು ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ನಾಯಕರೂ ಹೇಳಿಕೆ ನೀಡಲು ಆರಂಭಿಸಿದ್ದಾರೆ.

'ಶ್ರೀರಾಮನ ಹೆಸರು ರಾಜಕೀಯ ಲಾಭಕ್ಕಾಗಿ ಅಲ್ಲ'

ಬಿಜೆಪಿಯ ಗಯಾ ಜಿಲ್ಲಾ ಮಾಜಿ ಜಿಲ್ಲಾಧ್ಯಕ್ಷ ಧನರಾಜ್ ಶರ್ಮಾ ಮಾತನಾಡಿ, 'ಶ್ರೀರಾಮನ ಹೆಸರು ರಾಜಕೀಯ ಲಾಭಕ್ಕಾಗಿ ಅಲ್ಲ. ಅದು ಹಿಂದೂಗಳು ಸನಾತನ ಧರ್ಮದ ಮತ್ತು ದೇಶದ ಹೆಮ್ಮೆ, ಅವರ ಜನ್ಮಸ್ಥಳವನ್ನು ನಾಶಪಡಿಸಲಾಯಿತು. 526 ವರ್ಷಗಳ ಹೋರಾಟದ ನಂತರ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಭವ್ಯವಾದ ಮತ್ತು ದೈವಿಕ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ದೇಶದ ಚಲನಶೀಲ ಪ್ರಧಾನಿ ನರೇಂದ್ರ ಮೋದಿಯವರು ಜನವರಿ 22ರಂದು ಅಯೋಧ್ಯೆಯಲ್ಲಿ ಶಂಕುಸ್ಥಾಪನೆ ನಡೆಯಲಿದೆ. ಎಲ್ಲಾ ಭಾರತೀಯರು ಆ ಪ್ರಾಣ ಪ್ರತಿಷ್ಠೆಯಲ್ಲಿ ಭಾಗವಹಿಸುವ ಮೂಲಕ ಸಂತೋಷವನ್ನು ವ್ಯಕ್ತಪಡಿಸಬೇಕು, ಟೀಕೆ ಮಾಡಬಾರದು' ಎಂದರು.

Platform collapsed while criticizing Ram Mandir: Video goes viral

ಇನ್ನೂ ಇಂಥಹ ರಾಮ ಮಂದಿರ ಬಗ್ಗೆ ಟೀಕಾ ಪ್ರಹಾರವನ್ನು ವಿರೋಧಿಸಿದವರಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಜಯ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ್ ಪ್ರಸಾದ್ ಯಾದವ್, ಜಿಲ್ಲಾ ಸಚಿವ ಧರ್ಮೇಂದ್ರ ಯಾದವ್ ಸೇರಿದ್ದಾರೆ.

ವೇದಿಕೆ ಬಿದ್ದ ಬಳಿಕ ಮೈದಾನದಲ್ಲಿ ಮೇಜು ಇಟ್ಟು ಸಭೆಯನ್ನು ಮುಂದುವರಿಸಲಾಗಿದೆ. ಘಟನೆಯ ಬಳಿಕ ಮಾತನಾಡಿದ ಅಲಿ ಅನ್ವರ್ ಅನ್ಸಾರಿ, ವೇದಿಕೆ ಕುಸಿದು ಬೀಳುತ್ತದೆಯೇ ಇಲ್ಲವೇ ಎಂದು ನಾನು ಇಲ್ಲಿಗೆ ಬರುವ ಮುನ್ನವೇ ಕೇಳಿದ್ದೆ, ಆದರೆ ಹಾಗೇನು ಸಂಭವಿಸುವುದಿಲ್ಲ ಎಂದು ತುಂಬಾ ಜನ ಹೇಳಿದ್ದರು. ಆದರೆ ಚಳಿಗಾಲ ಏನು ಬೇಕಾಧರೂ ಸಂಭವಿಸಬಹುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+