ಪತ್ನಿಯನ್ನು ಆಕೆಯ ಪ್ರಿಯತಮನೊಂದಿಗೆ ಮದುವೆ ಮಾಡಿಸಿದ ಪತಿ!
ಪಾಟ್ನಾ, ನವೆಂಬರ್ 16: ವ್ಯಕ್ತಿಯೊಬ್ಬ ತನ್ನ ಪತ್ನಿಯು ಆಕೆಯ ಪ್ರೀತಿಸುತ್ತಿದ್ದ ಪ್ರಿಯತಮನೊಂದಿಗೆ ಮದುವೆ ಮಾಡಿಕೊಟ್ಟಿರುವ ಘಟನೆ ಬಿಹಾರದ ಬೇಗುಸರಾಯ್‌ನ ದಹಿಯಾ ಗ್ರಾಮದಲ್ಲಿ ನಡೆದಿದೆ.
ಅಜಯ್ ಕುಮಾರ್ (24) ಮತ್ತು ಕಾಜಲ್ (22) 2018 ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಮೇಲ್ನೋಟಕ್ಕೆ ವೈವಾಹಿಕ ಬದ್ಧತೆಯ ಹೊರತಾಗಿಯೂ ಕಾಜಲ್ ಮನ್ಸೂರ್ಚಕ್ ಪೊಲೀಸ್ ಠಾಣೆ ವ್ಯಾಪ್ತಿಯ ಅಘಾಪುರ್ ಗ್ರಾಮದ ನಿವಾಸಿ ರಾಜ್ ಕುಮಾರ್ ಠಾಕೂರ್ ಅವರೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದರು.

ಮದುವೆಯಾಗಿ ಕಾಜಲ್ ಎರಡು ಮಕ್ಕಳ ತಾಯಿಯಾದ ನಂತರವೂ ಅವರ ಮೊದಲಿನ ಪ್ರೇಮವು ರಹಸ್ಯವಾಗಿ ಮುಂದುವರೆದಿತ್ತು. ರಾಜ್ ಜೊತೆ ಕಾಜಲ್ ಪ್ರೀತಿಸುತ್ತಿರುವ ಬಗ್ಗೆ ಅಜಯ್‌ಗೆ ಗೊತ್ತಾಯಿತು. ಅವರ ಕುಟುಂಬ ಸದಸ್ಯರು ಅವರಿಬ್ಬರು ಒಟ್ಟಿಗೆ ಇರುವುದನ್ನು ಕಂಡ ನಂತರ ಘಟನೆ ಊರಿಗೆಲ್ಲಾ ಗೊತ್ತಾಯಿತು. ಆಗ ಅಜಯ್ ಕೋಪದಿಂದ ಪ್ರತಿಕ್ರಿಯಿಸುವ ಬದಲು ಆಘಾತಕ್ಕೊಳಗಾದರು. ನಂತರ ತನ್ನ ಪತ್ನಿ ಕಾಜಲ್‌ಳೊಂದಿಗೆ ಬೇರೆಯಾಗಲು ನಿರ್ಧರಿಸಿದರು.
ಅಜಯ್ ತನ್ನ ನಿರ್ಧಾರವನ್ನು ವಿವರಿಸಿದನು. ಇನ್ನೊಬ್ಬ ವ್ಯಕ್ತಿಯೊಂದಿಗೆ ತನ್ನ ಪತ್ನಿ ಸಂಬಂಧವನ್ನು ಮುಂದುವರೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಭಾವಿಸಿದನು. ಆಶ್ಚರ್ಯವೆಂಬಂತೆ ಅಜಯ್ ತನ್ನ ಪತ್ನಿ ಕಾಜಲ್ ಮತ್ತು ಆಕೆಯ ಪ್ರಿಯತಮ ರಾಜ್ ಕುಮಾರ್ ಠಾಕೂರ್ ನಡುವೆ ಮದುವೆಯನ್ನು ತಮ್ಮದೆ ಹಳ್ಳಿಯ ದೇವಸ್ಥಾನದಲ್ಲಿ ನಡೆಸಿಕೊಟ್ಟನು.
ಅಜಯ್‌ರ ಈ ನಿರ್ಧಾರದಿಂದ ಕಾಜಲ್ ಮತ್ತು ಆಕೆಯ ಕುಟುಂಬವನ್ನು ಸಮುದಾಯದಿಂದ ರಕ್ಷಿಸಿದ್ದು ಮಾತ್ರವಲ್ಲದೆ ಪರಿಸ್ಥಿತಿ ಬಗೆಹರಿಸುವ ಮಟ್ಟಕ್ಕೆ ಬಂದಿತು. ಪಂಚಾಯತ್‌ನ ಸರಪಂಚ್ ರಾಮ್ ಸಹರ್ ಸಾಹ್ನಿ ಈ ನಿರ್ಧಾರವು ಕಾಜಲ್ ಅವರ ಮದುವೆಗೆ ಸಂಬಂಧಿಸಿದ ಕೌಟುಂಬಿಕ ವಿಷಯವಾಗಿರುವುದರಿಂದ ಗ್ರಾಮಸ್ಥರು ಹೆಚ್ಚಿನ ವಿರೋಧವಿಲ್ಲದೆ ಅದನ್ನು ಒಪ್ಪಿಕೊಂಡರು.
ಪ್ರಿಯಕರನಿಗೆ ಪತ್ನಿ ಬಿಟ್ಟುಕೊಟ್ಟ ಉತ್ತರ ಪ್ರದೇಶದ ವ್ಯಕ್ತಿ
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಬಿಹಾರದ ಆಕಾಶ್ ಶಾ ಎಂಬಾತನ ಜೊತೆ ತನ್ನ ಹೆಂಡತಿಯ ಸಂಬಂಧ ಹೊಂದಿರುವುದನ್ನು ಪತ್ತೆ ಹಚ್ಚಿದನು. ಆಗ ಅನಾವಶ್ಯಕ ಗಲಾಟೆ ಸೃಷ್ಟಿಸುವುದಕ್ಕಿಂತ ಹೆಚ್ಚಾಗಿ ಆಕಾಶ್‌ಗೆ ಮದುವೆಯಾಗಲು ಸಮ್ಮತಿಸಿದನು.
ವಿಷಯ ತಿಳಿದ ಸ್ಥಳೀಯರು ಮಧ್ಯ ಪ್ರವೇಶಿಸಿ ಆಕಾಶ್ ಮೇಲೆ ಹಲ್ಲೆ ನಡೆಸಿದರಉ. ಹಲ್ಲೆಯ ಹೊರತಾಗಿಯೂ ಪತಿವರ್ಯ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ತನ್ನ ಹೆಂಡತಿ ಮತ್ತು ಅವಳ ಗೆಳೆಯನನ್ನು ದೇವಸ್ಥಾನಕ್ಕೆ ಕರೆದೊಯ್ದನು. ಅಲ್ಲಿ ಆಕಾಶ್ ಬಂದ ಅದೇ ಮೋಟಾರ್‌ಸೈಕಲ್‌ನಲ್ಲಿ ಇಬ್ಬರನ್ನೂ ಒಟ್ಟಿಗೆ ಕಳುಹಿಸಿ ಮದುವೆಗೆ ಅವಕಾಶ ಮಾಡಿಕೊಟ್ಟನು.












Click it and Unblock the Notifications