ಭಾರತ & ಬಿಹಾರ: ಲೋಕಸಭೆ ಚುನಾವಣೆಗೆ ಮೊದಲು ಹೀಗೊಂದು ಲೆಕ್ಕಾಚಾರ!
ಭಾರತ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಇಡೀ ಜಗತ್ತಿನಲ್ಲಿ ಸ್ಥಿರತೆಗೆ ಒಂದು ಉದಾಹರಣೆ ಆಗಿದೆ. ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ದಂಗೆ ನಡೆದರೂ, ನಮ್ಮ ಭಾರತದಲ್ಲಿ ಅಂತಹ ಅಶಾಂತ ವಾತಾವರಣ ಇದುವರೆಗೂ ನಿರ್ಮಾಣ ಆಗಿಲ್ಲ. ಹೀಗೆ ಇಡೀ ಜಗತ್ತಿಗೆ ಭಾರತ ಮಾದರಿ ಆಗಿದ್ದು, 2024ರ ಲೋಕಸಭೆ ಚುನಾವಣೆ ಪ್ರಪಂಚದ ಗಮನವನ್ನು ಸೆಳೆಯುತ್ತಿದೆ. ಆದರೆ ಇದೇ ಸಮಯದಲ್ಲಿ ಬಿಹಾರ ರಾಜಕೀಯ ಬದಲಾವಣೆಯು ಸಂಚಲನ ಸೃಷ್ಟಿಸಿದೆ. ಹಾಗಾದರೆ ಇಲ್ಲಿ ಬಿಜೆಪಿ ಮತ್ತೆ ಅಧಿಕಾರ ರಚಿಸುತ್ತಾ?
ಬಿಹಾರದಲ್ಲಿ ಒಟ್ಟು 243 ವಿಧಾನಸಭೆ ಕ್ಷೇತ್ರಗಳು ಇದ್ದು, ಇದರಲ್ಲಿ ಬಿಜೆಪಿಗೆ 78 ಸ್ಥಾನಗಳು ಸಿಕ್ಕಿವೆ. ಹಾಗೇ ಜೆಡಿಯು 45 ಸ್ಥಾನಗಳನ್ನು ಗೆದ್ದಿದ್ದು, ಆರ್‌ಜೆಡಿ 79 ಸ್ಥಾನದಲ್ಲಿ ಗೆಲುವನ್ನು ಸಾಧಿಸಿದೆ. ಕಾಂಗ್ರೆಸ್ ಕೂಡ 19 ಸ್ಥಾನ ಮತ್ತು ಎಡಪಕ್ಷಗಳು 16 ಸ್ಥಾನ ಗೆದ್ದಿವೆ ಹೀಗಾಗಿಯೇ ಬಿಹಾರದಲ್ಲಿ ಈಗ ಸಂಚಲನ ಸೃಷ್ಟಿಯಾಗಿದೆ. ಕಾರಣ ಏನು ಎಂದರೆ, ಒಂದು ಕಡೆ ಹಾಲಿ ಆರ್‌ಜೆಡಿ & ಕಾಂಗ್ರೆಸ್ ಜೊತೆ ಸೇರಿ ನಿತೀಶ್ ಕುಮಾರ್ ಸರ್ಕಾರ ರಚಿಸಿದ್ದಾರೆ. ಆದರೆ ಇದೀಗ, ಬಿಜೆಪಿ ಜೊತೆ ಸೇರಿ ಹೊಸ ಸರ್ಕಾರ ರಚಿಸಲು ನಿತೀಶ್ ಕುಮಾರ್ ಮುಂದಾಗಿದ್ದಾರೆ. ಅರೆರೆ ಹೀಗಾದರೆ ಬಿಹಾರದಲ್ಲಿ ಸರ್ಕಾರ ಬೀಳುತ್ತಾ? ಮುಂದೆ ಓದಿ.

ಬಿಹಾರ ಸರ್ಕಾರದ ಬುಡವೇ ಶೇಕ್!!
ಹೌದು ಮೊದಲೇ ಹೇಳಿದಂತೆ ಬಿಹಾರದಲ್ಲಿ 243 ವಿಧಾನಸಭೆ ಕ್ಷೇತ್ರಗಳು ಇವೆ. ಈ ಕಾರಣಕ್ಕೆ ಬಿಹಾರದಲ್ಲಿ ಸರ್ಕಾರ ರಚಿಸಲು 122 ಸ್ಥಾನಗಳ ಬಹುಮತ ಬೇಕಿದೆ. ಈ ಹಿನ್ನೆಲೆಯಲ್ಲಿ ಅತ್ತ ಬಿಜೆಪಿ ಮತ್ತು ಜೆಡಿಯು ಒಂದಾಗುತ್ತಿರುವ ಸಮಯದಲ್ಲೇ, ಕಾಂಗ್ರೆಸ್ & ಆರ್‌ಜೆಡಿ ಲೀಡರ್ಸ್ ಹೊಸ ರಣತಂತ್ರ ರೂಪಿಸಿದ್ದಾರೆ. ಹೀಗಾಗಿ ಇಬ್ಬರ ನಡುವೆ ಸರ್ಕಾರ ರಚಿಸಲು ಸಿಕ್ಕಾಪಟ್ಟೆ, ಸರ್ಕಸ್ ಕೂಡ ಶುರುವಾಗಿದೆ. ಹಾಗಾದರೆ ಯಾರ ಬಳಿ ಎಷ್ಟು ಸ್ಥಾನಗಳು ಇವೆ? ಆ ಕುರಿತು ಮಾಹಿತಿಗೆ ಮುಂದೆ ಓದಿ.
ಬಿಹಾರ ವಿಧಾನಸಭೆ ಲೆಕ್ಕಾಚಾರ ಹೀಗಿದೆ
ಈಗಿರುವ ಲೆಕ್ಕಾಚಾರದ ಪ್ರಕಾರ ಬಿಜೆಪಿ 78 ಸ್ಥಾನ ಹಾಗೂ ಜೆಡಿಯು 45 ಸ್ಥಾನ ಹೊಂದಿದ್ದರೆ, ಎಚ್‌ಎಎಂ ಪಕ್ಷ 04 ಸ್ಥಾನ ಪಡೆದು ಬಿಜೆಪಿ ಜೊತೆಗೆ ಬರಲಿದೆ ಎನ್ನಲಾಗಿದೆ. ಇದು ಬಿಟ್ಟು 01 ಸ್ಥಾನ ಇತರರಿಂದ ಬಿಜೆಪಿಗೆ ಬರಲಿದೆ. ಈ ಮೂಲಕ 128 ಸ್ಥಾನಗಳನ್ನು ಒಟ್ಟು ಮಾಡಿ ಬಿಜೆಪಿ & ಜೆಡಿಯು ಬಿಹಾರದಲ್ಲಿ ಸರ್ಕಾರ ರಚಿಸುವ ಸಾಧ್ಯತೆ ಇದೆ. ಹೀಗಿದ್ದಾಗ, ಕಾಂಗ್ರೆಸ್ & ಆರ್‌ಜೆಡಿ ನಾಯಕರು ಸುಮ್ಮನೆ ಕೂತಿಲ್ಲ. ಅವರು ಕೂಡ ಒಂದಾಗಿ ಬಿಹಾರದ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ಆರಂಭಿಸಿದ್ದಾರೆ. ಆರ್‌ಜೆಡಿ ಬಳಿ 79 ಸ್ಥಾನ ಇದ್ದರೆ, ಕಾಂಗ್ರೆಸ್‌ಗೆ 19 ಶಾಸಕರ ಬಲ ಇದೆ, ಎಡಪಕ್ಷಗಳು 16 ಸ್ಥಾನ ಹೊಂದಿವೆ. ಈ ಮೂಲಕ ಒಟ್ಟು 110ಕ್ಕೂ ಹೆಚ್ಚು ಶಾಸಕರ ಬಲ ಆರ್‌ಜೆಡಿಗೆ ಸಿಗಲಿದೆ.

ಒಟ್ನಲ್ಲಿ ಹೀಗೆ 2024ರ ಲೋಕಸಭೆ ಚುನಾವಣೆಗೆ ಮೊದಲು ಬಿಹಾರ ಪಾಲಿಟಿಕ್ಸ್ ಸಿಕ್ಕಾಪಟ್ಟೆ ಗಮನ ಸೆಳೆದಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದು ಇನ್ನು ಕೆಲವೇ, ಕೆಲವು ಗಂಟೆಗಳಲ್ಲಿ ಗೊತ್ತಾಗಲಿದೆ. ಒಂದು ಕಡೆ ನಿತೀಶ್ ಕುಮಾರ್ ಬಿಜೆಪಿ ಜೊತೆ ಸೇರಲು ಮುಂದಾಗಿದ್ದರೆ, ಇನ್ನೊಂದು ಕಡೆ ಕಾಂಗ್ರೆಸ್ & ಆರ್‌ಜೆಡಿ ಕೂಡ ರಣತಂತ್ರ ಹೆಣೆಯುತ್ತಿವೆ.












Click it and Unblock the Notifications