Festival Special Trains Bengaluru-Barauni-Muzaffarpur: ಬೆಂಗಳೂರಿನಿಂದ ವಿಶೇಷ ರೈಲು ಕಾರ್ಯಾಚರಣೆ, ವೇಳಾಪಟ್ಟಿ, ದಿನಾಂಕ,
ಬೆಂಗಳೂರು, ನವೆಂಬರ್ 14: ದೀಪಾವಳಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯು ಹೆಚ್ಚನ ಪ್ರಯಾಣಿಕರಿಗೆ ಅನುಕೂಲವಾಗಲೆಂದು ವಿಶೇಷ ರೈಲುಗಳ ಕಾರ್ಯಾಚರಣೆ ಆರಂಭಿಸಲಿದೆ. ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳು (Festival Special Trains) ಬೆಂಗಳೂರಿನಿಂದ ನೆರೆಯ ರಾಜ್ಯಕ್ಕೆ ಸಂಪರ್ಕ ಕಲ್ಪಿಸುತ್ತವೆ.
ಹಬ್ಬಕ್ಕೆ ರಾಜಧಾನಿಯಿಂದ ತೆರಳುವವರು ಇಲ್ಲವೇ ಬೇರೆ ರಾಜ್ಯಗಳಿಂದ ಹಬ್ಬದ ಬಳಿಕ ಬರುವವರಿಗೆ ಈ ಬೆಂಗಳೂರು-ಬರೌನಿ- ಮುಜಾಫರ್‌ಪುರ (Bengaluru-Barauni and Muzaffarpur Spcial trains) ವಿಶೇಷ ರೈಲುಗಳು ಹೆಚ್ಚು ಸಹಾಯವಾಗಲಿವೆ. ಪ್ರಯಾಣಿಕರ ಒಳಹರಿವನ್ನು ನಿಭಾಯಿಸಲಿವೆ.

ಬೆಂಗಳೂರಿಗೆ ಬರೌನಿ ವಿಶೇಷ ಎಕ್ಸ್‌ಪ್ರೆಸ್ (Bengaluru-Barauni express trains) ರೈಲು (ಸಂಖ್ಯೆ 06227/06228)
ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನಿಂದ ನಾಳೆ ಬುಧವಾರ ನವೆಂಬರ್ 15ರಂದು ಸಂಜೆ 4:35 ಗಂಟೆಗೆ ಪ್ರಯಾಣ ಆರಂಭಿಸಲಿದೆ.
ಈ ರೈಲು ನವೆಂಬರ್ 17ರಂದು ಮಧ್ಯಾಹ್ನ 12:45 ಗಂಟೆಗೆ ಬಿಹಾರ ರಾಜ್ಯದ ಬರೌನಿ ಪ್ರದೇಶ ತಲುಪಲಿದೆ. ಮರಳಿ ಬರೌನಿಯಿಂದ ರೈಲು (ಸಂಖ್ಯೆ 06228) ಬರೌನಿಯಿಂದ ನವೆಂಬರ್ 21ರಂದು ಮಧ್ಯಾಹ್ನ 01 ಗಂಟೆಗೆ ಹೊರಟು ಬೆಂಗಳೂರಿಗೆ 23ನೇ ನವೆಂಬರ್ 2023 ರಂದು ಸಂಜೆ 05:15 ಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಆಗಮಿಸಲಿದೆ.

ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ-ಮಾರ್ಗ
ಬೆಂಗಳೂರಿನಿಂದ ಹೊರಟು ಕೃಷ್ಣರಾಜಪುರಂ (kr puram), ವೈಟ್‌ಫೀಲ್ಡ್, ಜೋಲಾರ್‌ಪೆಟ್ಟೈ, ಕಟ್ಪಾಡಿ, ಪೆರಂಬೂರ್, ಗುಡೂರು, ವಾರಂಗಲ್, ವಿಜಯವಾಡ, ನಾಗಪುರ, ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಆಗಲಿದೆ.
ಇದರಲ್ಲಿ ಎಸಿ ಟು-ಟೈರ್ ಕೋಚ್, ಮೂರು ಎಸಿ ತ್ರೀ-ಟೈರ್ ಕೋಚ್‌ಗಳು ಇವೆ. ಎಂಟು ಸ್ಲೀಪರ್ ಕ್ಲಾಸ್ ಕೋಚ್‌ಗಳು, ಎರಡು ಜನರಲ್ ಸೆಕೆಂಡ್ ಕ್ಲಾಸ್ ಕೋಚ್‌ಗಳು ಮತ್ತು ಎರಡು ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್/ಅಂಗವಿಕಲ ಕೋಚ್‌ಗಳನ್ನು ಈ ರೈಲು ಒಳಗೊಂಡಿರಲಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.
ಬೆಂಗಳೂರು-ಮಜಾಪರ್‌ಪುರ ರೈಲಿನ ಮಾಹಿತಿ
ಅದೇ ರೀತಿ ಬೆಂಗಳೂರಿನಿಂದ ರೈಲು ಮತ್ತೊಂದು ರೈಲು (ಸಂಖ್ಯೆ-06225/06226) ಬಿಹಾರ ಮಜಾಪರ್‌ಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಯಶವಂತಪುರದಿಂದ ಹೊರಡಲಿದೆ.
ಯಶವಂತಪುರದಿಂದ 16 ನವೆಂಬರ್ ಬೆಳಗ್ಗೆ 7:30 ಗಂಟೆಗೆ 06225 ಸಂಖ್ಯೆಯ ರೈಲು ಪ್ರಯಾಣ ಆರಂಭಿಸಿದೆ. ಎರಡು ದಿನಗಳ ನಂತರ ಅಂದರೆ ನವೆಂಬರ್ 18 ರಂದು ಮಧ್ಯಾಹ್ನ 12 ಗಂಟೆಗೆ ಮುಜಾಫರ್‌ಪುರ ನಗರ ತಲುಪಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಮುಜಾಫರ್‌ಪುರ ನಗರದಿಂದ ಮರಳಿ ರೈಲು ಸಂಖ್ಯೆ 06226 ಮುಜಾಫರ್‌ಪುರದಿಂದ ನವೆಂಬರ್ 22ರಂದು ಮಧ್ಯಾಹ್ನ 3:30 ಗಂಟೆಗೆ ಹೊರಟು ಬೆಂಗಳೂರಿಗೆ ನವೆಂಬರ್ 24ರಂದು ಸಂಜೆ 7 ಗಂಟೆಗೆ ಯಶವಂತಪುರಕ್ಕೆ ಬರಲಿದೆ.
ಮುಜಾಫರ್‌ಪುರ ರೈಲಿನ ಮಾರ್ಗ-ನಿಲುಗಡೆ
ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಧರ್ಮಾವರಂ, ಅನಂತಪುರ, ಗೂಟಿ, ಧೋನೆ, ಕರ್ನೂಲ್ ಸಿಟಿ, ಗದ್ವಾಲ್, ಮಹಬೂಬ್‌ನಗರ, ಜಡ್‌ಚಾರಿಯಾ, ಶಾದ್‌ನಗರ, ಕಾಚೇಗೌಡ ಮತ್ತು ಇತರ ಹಲವಾರು ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಸಂಚರಿಸಲಿದೆ.
ಈ ರೈಲಿನಲ್ಲಿ ಒಂದು ಎಸಿ ಟು-ಟೈರ್ ಕೋಚ್, ಮೂರು ಎಸಿ ತ್ರೀ-ಟೈರ್ ಕೋಚ್‌ಗಳು ಇವೆ. 12 ಸ್ಲೀಪರ್ ಕ್ಲಾಸ್ ಕೋಚ್, ನಾಲ್ಕು ಜನರಲ್ ಸೆಕೆಂಡ್ ಕ್ಲಾಸ್ ಕೋಚ್‌ಗಳು ಇದ್ದು, 02 ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್‌ಗಳನ್ನು ಹೊಂದಿದೆ.
ರೈಲ್ವೆ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಲು ಹತ್ತಿರದ ರೈಲು ನಿಲ್ದಾಣಗಳನ್ನು ಸಂಪರ್ಕಿಸಬೇಕು. ಇಲ್ಲವೇ ಅಧಿಕೃತ ವೆಬ್‌ಸೈಟ್ www.irctc.co.in ನಲ್ಲಿ ತಮ್ಮ ಆಸನ ಕಾಯ್ದಿರಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ನೀವು www.enquiry.indianrail.gov.in ಗೆ ಭೇಟಿ ಮಾಡಬೇಕು. ಇಲ್ಲವೇ ಸಹಾಯವಾಣಿ 139ಕ್ಕೆ ಸಂಪರ್ಕಿಸಬಹುದಾಗಿದೆ.












Click it and Unblock the Notifications