ಜೋರ್ ಲಗಾಕೆ ಹೈಸಾ....... ನ್ಯಾಯಾಲಯಕ್ಕೆ ಪೊಲೀಸ್ ವಾಹನ ತಳ್ಳಿಕೊಂಡು ಹೋದ ಕೈದಿಗಳು: ವಿಡಿಯೋ
ಕೈದಿಗಳು ನ್ಯಾಯಾಲಯಕ್ಕೆ ಪೊಲೀಸ್ ವಾಹನ ತಳ್ಳಿಕೊಂಡು ಹೋದ ಘಟನೆ ಬಿಹಾರದ ಭಾಗಲ್‌ಪುರ ಜಿಲ್ಲೆಯಲ್ಲಿ ನಡೆದಿದ್ದು ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇಂಧನ ಖಾಲಿಯಾಗಿದ್ದರಿಂದ ನಿಂತು ಹೋಗಿದ್ದ ಪೊಲೀಸ್ ವಾಹನವನ್ನು ಅದೇ ವಾಹನದಲ್ಲಿ ನ್ಯಾಯಾಲಯಕ್ಕೆ ಹೋಗುತ್ತಿದ್ದ ಕೈದಿಗಳೇ ತಳ್ಳಿಕೊಂಡು ಹೋಗಿದ್ದಾರೆ. ಈ ದೃಶ್ಯ ಸ್ಥಳೀಯರ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳಿಂದ ವ್ಯಂಗ್ಯ ಮತ್ತು ತಮಾಷೆಯ ಕಾಮೆಂಟ್‌ಗಳನ್ನು ಸೆಳೆಯುತ್ತಿದೆ.

ವೈರಲ್ ವೀಡಿಯೊದಲ್ಲಿ ನಾಲ್ವರು ಆರೋಪಿಗಳು ತಮ್ಮ ಸೊಂಟಕ್ಕೆ ಬಟ್ಟೆಯನ್ನು ಕಟ್ಟಿಕೊಂಡು, ಬಿಹಾರ ಪೊಲೀಸರ ಎಸ್‌ಯುವಿ ವಾಹನವನ್ನು ತಳ್ಳುತ್ತಿರುವುದನ್ನು ನೋಡಬಹುದು. ಅಧಿಕಾರಿಯೊಬ್ಬರು ಅವರಿಗೆ ಮಾರ್ಗದರ್ಶನ ನೀಡುತ್ತಿರುವುದನ್ನು ಕಾಣಬಹುದು.
ವರದಿಗಳ ಪ್ರಕಾರ, ರಾಜ್ಯದ ಭಾಗಲ್ಪುರ್ ಜಿಲ್ಲೆಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಮದ್ಯ ಸೇವಿಸಿದ ಆರೋಪದ ಮೇಲೆ ಬಂಧಿತರಾದ ನಾಲ್ವರು (ಬಿಹಾರದಲ್ಲಿ ಮದ್ಯ ಸೇವನೆ ಶಿಕ್ಷಾರ್ಹ ಅಪರಾಧವಾಗಿದೆ) ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
Inmates were pushing the Bihar Police vehicle while being taken to court because it ran out of petrol. 🤣pic.twitter.com/nji0cVAFD0
— Divya Gandotra Tandon (@divya_gandotra) February 4, 2024
ಈ ವೇಳೆ ಪೊಲೀಸ್ ವಾಹನದಲ್ಲಿ ಇಂಧನ ಖಾಲಿಯಾಗಿ ಕಚಹರಿ ಚೌಕ್ ಬಳಿ ಬಂದು ನಿಂತಿದೆ. ಆಗ ನಾಲ್ವರು ಕೈದಿಗಳಿಗೆ ವ್ಯಾನ್ ಅನ್ನು ರಸ್ತೆ ಬದಿಗೆ ತಳ್ಳಲು ಪೊಲೀಸರು ಆದೇಶಿಸಿದ್ದಾರೆ. ಈ ಘಟನೆಯನ್ನು ಕೆಲವು ನೆರೆಹೊರೆಯವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ಕ್ಲಿಪ್ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ.
ಆರೋಪಿಗಳು ಪೊಲೀಸ್ ವಾಹನವನ್ನು ಸುಮಾರು ಅರ್ಧ ಕಿಲೋಮೀಟರ್ ದೂರ ತಳ್ಳಿದ್ದಾರೆ ಎಂದು ವರದಿಗಳು ತಿಳಿಸಿವೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಘಟನೆಯ ಬಗ್ಗೆ ಆಂತರಿಕ ತನಿಖೆಯನ್ನು ಪ್ರಾರಂಭಿಸಿದರು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಘಟನೆಯ ಬಗ್ಗೆ ನಮಗೆ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ನಿಷೇಧಾಜ್ಞೆ ಸಹಾಯಕ ಆಯುಕ್ತ ಪ್ರಮೋದಿತ್ ನಾರಾಯಣ್ ಸಿಂಗ್ ಹೇಳಿದ್ದಾರೆ. ಯಾವುದೇ ಅಧಿಕಾರಿ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸಿಪಿ ಸಿಂಗ್ ಹೇಳಿದ್ದಾರೆ, ಮುಂದಿನ ತನಿಖೆ ಮುಂದುವರೆದಿದೆ.
ಶಾಲೆಗೆ ಬಂದ ಟೈಟ್ ಮಾಸ್ಟರ್
ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಶಾಲೆಗೆ ಕುಡಿದು ಬಂದ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ರಾಜೇಂದ್ರ ನೇತಮ್ ಎಂದು ಗುರುತಿಸಲಾದ ಶಿಕ್ಷಕ ಮದ್ಯಪಾನದ ಸ್ಥಿತಿಯಲ್ಲಿ ಶಾಲೆಗೆ ಆಗಮಿಸಿದ್ದಾರೆ. ಇದನ್ನು ಮಕ್ಕಳು ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೇಲಾಧಿಕಾರಿಗಳು ಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ.












Click it and Unblock the Notifications