India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರ ಗ್ರಹಣ ವೇಳೆ ಏನು ಮಾಡಬಾರದು ಎಂದು ಪುರಾಣಗಳು ಹೇಳುತ್ತವೆ

|
Google Oneindia Kannada News

ನವದೆಹಲಿ, ನವೆಂಬರ್ 18: ಆರು ಗಂಟೆಗಳ ಕಾಲ ಸಂಭವಿಸುವ ಶತಮಾನದ ಕೊನೆಯ ಭಾಗಶಃ ಚಂದ್ರ ಗ್ರಹಣ ಇದೇ ನವೆಂಬರ್ 19ರ ಶುಕ್ರವಾರದಂದು ನಡೆಯಲಿದೆ.

ಹಿಂದೂ ಧರ್ಮ ಗ್ರಂಥಗಳ ಪ್ರಕಾರ, ರಾಹು ದೇವರು ಸೂರ್ಯ ಮತ್ತು ಚಂದ್ರನನ್ನು ಬಾಯಿಯಿಂದ ಹಿಡಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇದು ರಾಕ್ಷಸ ದೇವರನ್ನು ಒಳಗೊಂಡಿರುವುದರಿಂದ, ಗ್ರಹಣ ವೇಳೆ ಬಹಳಷ್ಟು ನಕಾರಾತ್ಮಕತೆಯನ್ನು ಹೊರಸೂಸುತ್ತದೆ ಎನ್ನಲಾಗಿದೆ.

ಚಂದ್ರ ಗ್ರಹಣದ ಬಗ್ಗೆ ಕೆಲವು ಜನಪ್ರಿಯ ಪುರಾಣಗಳು ಹೇಳುವುದೇನು?
* ನೀವು ಚಂದ್ರ ಗ್ರಹಣದ ನಂತರ ಸ್ನಾನ ಮಾಡಬೇಕು.
* ಚಂದ್ರ ಗ್ರಹಣದ ನಂತರ ನೀವು ತಣ್ಣೀರಿನಿಂದ ಸ್ನಾನ ಮಾಡಬೇಕು ಎಂದು ಕೆಲವು ಧಾರ್ಮಿಕ ಸಂಸ್ಥೆಗಳು ಸೂಚಿಸುತ್ತವೆ.
* ಚಂದ್ರ ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸಬಾರದು.
* ಚಂದ್ರ ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಯಿಂದ ದೇಹವು ಅಪಾಯದಲ್ಲಿರುತ್ತದೆ, ಅದೇ ರೀತಿ ಆಹಾರವೂ ಸಹ.
* ಇದಲ್ಲದೆ ಪುರಾಣಗಳು ಚಂದ್ರ ಗ್ರಹಣದ ಸಮಯದಲ್ಲಿ ಮಲಗಬಾರದು ಎಂದು ಹೇಳುತ್ತವೆ.
* ಪ್ರಾಣಿಗಳ ಮೇಲೆ ಕುಳಿತುಕೊಳ್ಳುವುದನ್ನು ತಪ್ಪಿಸಿ ಎಂದೂ ಹೇಳಲಾಗುತ್ತದೆ.

ಚಂದ್ರ ಗ್ರಹಣದ ಸಮಯ ಮತ್ತು ದಿನ
ಈ ತಿಂಗಳ ಕಾರ್ತಿಕ ಪೂರ್ಣಿಮೆ ವಿಶೇಷವಾಗಿರಲಿದ್ದು, ನವೆಂಬರ್ 19 ಕಾರ್ತಿಕ ಪೂರ್ಣಿಮೆಯ ದಿನ ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರ ಗ್ರಹಣ ನಡೆಯಲಿದೆ.

ಭಾಗಶಃ ಚಂದ್ರಗ್ರಹಣ ಇದೇ ನವೆಂಬರ್ 19 ರಂದು ಸಂಭವಿಸಲಿದೆ. ವಿಶೇಷವಾಗಿ ಚಂದ್ರ ಮತ್ತು ಭೂಮಿಯ ನಡುವಿನ ಹೆಚ್ಚಿನ ಅಂತರದಿಂದಾಗಿ, ಈ ಗ್ರಹಣವು ದೀರ್ಘಾವಧಿಯವರೆಗೆ ಇರುತ್ತದೆ.

ಈ ಭಾಗಶಃ ಚಂದ್ರಗ್ರಹಣದ ಅವಧಿ 3 ಗಂಟೆ 28 ನಿಮಿಷ 24 ಸೆಕೆಂಡುಗಳು. ಇದಕ್ಕೂ ಮೊದಲು 18 ಫೆಬ್ರವರಿ 1440 ರಂದು ಅಂತಹ ದೀರ್ಘ ಚಂದ್ರಗ್ರಹಣ ಸಂಭವಿಸಿತ್ತು. ಅಂದರೆ, ಇಷ್ಟು ದೀರ್ಘಾವಧಿಯ ಈ ಭಾಗಶಃ ಚಂದ್ರಗ್ರಹಣವು 580 ವರ್ಷಗಳ ನಂತರ ಸಂಭವಿಸುತ್ತಿದೆ.

ಈ ವೇಳೆ, ಸುಮಾರು 1:30 ಮಧ್ಯಾಹ್ನ ನಂತರ ಪೂರ್ಣ ಚಂದ್ರಗ್ರಹಣವು ಪೂರ್ಣ ಪ್ರಮಾಣದಲ್ಲಿರಲಿದೆ. ಈ ಸಂದರ್ಭದಲ್ಲಿ ಭೂಮಿಯು 97 ಪ್ರತಿಶತದಷ್ಟು ಪೂರ್ಣ ಚಂದ್ರನನ್ನು ಸೂರ್ಯನ ಕಿರಣಗಳಿಂದ ಮರೆಮಾಡುತ್ತದೆ ಎಂದು ನಾಸಾ ಹೇಳಿದೆ.

ಈ ಚಂದ್ರ ಗ್ರಹಣವು 3 ಗಂಟೆ 28 ನಿಮಿಷ ಹಾಗೂ 23 ಸೆಕೆಂಡುಗಳ ಕಾಲ ಇರಲಿದೆ. ಹಾಗಾಗಿಯೇ ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ ಎನಿಸಿಕೊಳ್ಳಲಿದೆ. 2001ರಿಂದ 2100ವರೆಗಿನ ಅವಧಿಯಲ್ಲಿ ಇಷ್ಟು ಸುದೀರ್ಘವಾದ ಯಾವುದೇ ಚಂದ್ರ ಗ್ರಹಣ ಇರುವುದಿಲ್ಲ. ಹಾಗಾಗಿಯೇ ಇದನ್ನು ಶತಮಾನದ ಸುದೀರ್ಘ ಚಂದ್ರ ಗ್ರಹಣ ಎಂದು ಕರೆಯಲಾಗುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.

ಭಾರತದಲ್ಲಿ ಈ ಭಾಗಶಃ ಚಂದ್ರಗ್ರಹಣ ನವೆಂಬರ್ 19 ರಂದು ಮಧ್ಯಾಹ್ನ 12:48ಕ್ಕೆ ಪ್ರಾರಂಭವಾಗಲಿದ್ದು, ಸಂಜೆ 4:17ರವರೆಗೆ ಗೋಚರಿಸುತ್ತದೆ.

English summary
You should bathe after a lunar eclipse. Some religious entities suggest that you should have a bath with cold water after a lunar eclipse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X