Lunar Eclipse 2023: ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ, ಸಮಗಳ ವಿವರ ತಿಳಿಯಿರಿ
ಮೈಸೂರು, ಅಕ್ಟೋಬರ್, 28: ಭಾರತದಲ್ಲಿ ಚಂದ್ರ ಗ್ರಹಣ ಮಧ್ಯರಾತ್ರಿ 11:31 ಕ್ಕೆ ಪ್ರಾರಂಭವಾಗಿ ಭಾನುವಾರ ಮುಂಜಾನೆ 3:36ಕ್ಕೆ ಕೊನೆಗೊಳ್ಳುತ್ತದೆ. ಈ ಹಿನ್ನೆಲೆ ಮೈಸೂರಿನ ಚಾಮುಂಡೇಶ್ವರಿ ದೇಗುಲದಲ್ಲೂ ಸಂಜೆಯ ನಂತರ ದೇವರ ದರ್ಶಕ್ಕೆ ಅವಕಾಶ ಇಲ್ಲ ಎಂದು ದೇವಾಲಯದ ಸಮಿತಿ ತಿಳಿಸಿದೆ.
ಭಾರತ ಸೇರಿದಂತೆ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಅಮೆರಿಕ, ಉತ್ತರ ಅಮೆರಿಕ, ಉತ್ತರ/ಪೂರ್ವ ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕಾದ ಕೆಲವು ಭಾಗಗಳಲ್ಲಿಯೂ ಚಂದ್ರಗ್ರಹಣ ಗೋಚರಿಸುತ್ತದೆ. ರಾಜ್ಯದ ಹಲವು ಪ್ರಮುಖ ದೇಗುಲಗಳಲ್ಲಿ ಸಂಜೆಯಿಂದ ದೇವರ ದರ್ಶನ ವ್ಯವಸ್ಥೆ ನಿಲ್ಲಿಸಲಾಗಿದೆ. ಹಾಗೆಯೇ ಮೈಸೂರಿನ ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇಂದು ಸಂಜೆ 6 ಗಂಟೆಯ ನಂತರ ಭಕ್ತಾದಿಗಳಿಗೆ ದರ್ಶನ ವ್ಯವಸ್ಥೆ ಇರುವುದಿಲ್ಲ.

ಶನಿವಾರ ಸಂಜೆ ಮಾತ್ರ ದರ್ಶನ ವ್ಯವಸ್ಥೆ ಇರುವುದಿಲ್ಲ. ಅಕ್ಟೋಬರ್ 29ರ ಭಾನುವಾರ ಬೆಳಗ್ಗೆ 7:30ರಿಂದ ಮತ್ತೆ ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಕಾರ್ಯಾಲಯವು ಪ್ರಕಟಣೆ ಹೊರಡಿಸಿದೆ.
ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಹನುಮಂತನ ದರ್ಶನಕ್ಕೆ ಅವಕಾಶ
ಧಾರವಾಡ, ಅಕ್ಟೋಬರ್, 28: ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ನುಗ್ಗಿಕೇರಿ ಹನುಮಂತ ದೇವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದ್ದು, ಭಕ್ತಾದಿಗಳಿಗೆ ಮದ್ಯಾಹ್ನ 2 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮದ್ಯಾಹ್ನದ ನಂತರ ದೇವಸ್ಥಾನ ಬಂದ್ ಮಾಡಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ವರ್ಷದ ಕೊನೆಯ ಚಂದ್ರಗ್ರಹಣ ಬೆಳಗಿನ ನಸುಕಿನ ಜಾವ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದ್ದು, ಇದರ ಲೈವ್ ಸಹ ದೇವಸ್ಥಾನದ ಆಡಳಿತ ಮಂಡಳಿ ಭಕ್ತಾದಿಗಳಿಗೆ ಯೂಟ್ಯೂಬ್ ಮೂಲಕ ಒದಗಿಸಿದೆ. ಶರದ್ ಪೂರ್ಣಿಮೆಯ ಗಜಕೇಸರಿ ಯೋಗದಲ್ಲಿ ಚಂದ್ರಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲೂ ಸಹ ಈ ಚಂದ್ರಗ್ರಹಣ ಬಹಳಷ್ಟು ಪ್ರಾಮುಖ್ಯತೆ ಹೊಂದಿದೆ.
ಶನಿವಾರ ಹನುಮಂತ ದೇವರ ದೇವರ ದರ್ಶನಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಧಾರವಾಡ ನುಗ್ಗಿಕೇರಿ ಹನುಮಂತ ದೇವರ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಇಂದು ಮದ್ಯಾಹ್ನ 2 ಗಂಟೆವರೆಗೆ ಮಾತ್ರ ಭಕ್ತಾದಿಗಳು ನುಗ್ಗಿಕೇರಿ ಹನುಮಂತ ದೇವರ ದರ್ಶನ ಪಡೆದು ಸಹಕರಿಸಬೇಕು. ಗ್ರಹಣಕ್ಕೂ ಮುಂಚಿತವಾಗಿ ಸಂಪೂರ್ಣ ದೇವಸ್ಥಾನ ಬಂದ್ ಮಾಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.












Click it and Unblock the Notifications