ಕಾಂಗ್ರೆಸ್ ಬಂದಿದೆ ಕರ್ನಾಟಕಕ್ಕೆ ಗ್ರಹಣ ಹಿಡಿದಿದೆ!
ಬೆಂಗಳೂರು, ಅಕ್ಟೋಬರ್ 29: ರಾಹು ಗ್ರಸ್ತ ಚಂದ್ರ ಗ್ರಹಣ ಎಂದು ಕರೆಯುವ 2023ನೇ ವರ್ಷದ ಕೊನೆಯ ಚಂದ್ರ ಗ್ರಹಣವು ಅಕ್ಟೋಬರ್ 28 ರಂದು ಸಂಭವಿಸಿದೆ. ಗ್ರಹಣ ಹಿಡಿದು ಬಿಟ್ಟಾಗಿದೆ. ಇದೇ ಗ್ರಹಣ ಮುಂದಿಟ್ಟುಕೊಂಡು ಕರ್ನಾಟಕ ಬಿಜೆಪಿ ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಟೀಕೆಗಳನ್ನು ಮಾಡಿದೆ.
ಭಾನುವಾರ ಬಿಜೆಪಿ ಕಾಂಗ್ರೆಸ್ ಸರ್ಕಾರ ಮತ್ತು ಆಡಳಿತದ ವಿರುದ್ಧ ಸರಣಿ ಟ್ವೀಟ್‌ಗಳನ್ನು ಮಾಡಿದೆ. ಇದಕ್ಕೆ ATMSarkara, CongressInFight ಮತ್ತು ಕೈಕಚ್ಚಾಟ ಎಂಬ ಹ್ಯಾಷ್ ಟ್ಯಾಗ್‌ಗಳನ್ನು ಬಳಕೆ ಮಾಡಿದೆ.

ಬಿಜೆಪಿ, 'ಚಂದ್ರನಿಗೆ ಹಿಡಿದ ಗ್ರಹಣ ಬಿಡಬಹುದು!!! ಆದರೆ ರಾಜ್ಯಕ್ಕೆ 5 ತಿಂಗಳಿನಿಂದ ಹಿಡಿದಿರುವ ಗ್ರಹಣ ಸದ್ಯಕ್ಕೆ ಬಿಡುವ ಲಕ್ಷಣಗಳು ಕಾಣುತ್ತಿಲ್ಲ!!' ಎಂದು ಆಡಳಿತ ಪಕ್ಷದ ಕಾರ್ಯ ವೈಖರಿಯನ್ನು ಟೀಕಿಸಿದೆ.
ಬಿಜೆಪಿ ಟ್ವೀಟ್ ವಿವರಗಳು; 'ರಾಜ್ಯದಲ್ಲಿ ಕಾಂಗ್ರೆಸ್ ಬಂದಿದೆ ಕರ್ನಾಟಕಕ್ಕೆ ಗ್ರಹಣ ಹಿಡಿದಿದೆ' ಎಂದು ಹೇಳಿರುವ ಬಿಜೆಪಿ ಪಟ್ಟಿಯೊಂದನ್ನು ನೀಡಿದೆ. ಅದರಲ್ಲಿ
* ಕಾವೇರಿಗೆ ಗ್ರಹಣ
* ವಿದ್ಯುತ್‌ಗೆ ಗ್ರಹಣ
* ಅಭಿವೃದ್ಧಿಗೆ ಗ್ರಹಣ
* ಅನ್ನಭಾಗ್ಯಕ್ಕೆ ಗ್ರಹಣ
* ಕೈಗಾರಿಕೆಗಳಿಗೆ ಗ್ರಹಣ
* ಕುಡಿಯುವ ನೀರಿಗೆ ಗ್ರಹಣ
* ಕೃಷಿ ಉತ್ಪನ್ನಗಳಿಗೆ ಗ್ರಹಣ
* ಬ್ರ್ಯಾಂಡ್ ಬೆಂಗಳೂರಿಗೆ ಗ್ರಹಣ
'30 ವರ್ಷಗಳ ಹಿಂದಿನ "ಆ ದಿನಗಳ ಗ್ರಹಣ" ಇದೀಗ ಸಿದ್ದರಾಮಯ್ಯರವರ ಸರ್ಕಾರದ ಕೃಪೆಯಿಂದ ಕರ್ನಾಟಕಕ್ಕೆ ಮತ್ತೊಮ್ಮೆ ವಕ್ಕರಿಸಿದೆ..!' ಎಂದು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರವನ್ನು ಬಿಜೆಪಿ ನಡೆಸಿದೆ.
ಕರ್ನಾಟಕ ಬಿಜೆಪಿ ಕೈಕಚ್ಚಾಟ ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿದೆ. ಅಲ್ಲದೇ ಕಾಂಗ್ರೆಸ್‌ನ ಗುಂಪುಗಾರಿಕೆ ಬಗ್ಗೆ ಶನಿವಾರ ಹಲವು ಟ್ವೀಟ್‌ಗಳನ್ನು ಮಾಡಿದೆ. 'ಸಿಎಂ ಬದಲಾವಣೆಯ ಸತ್ಯವನ್ನು ಡಿ. ಕೆ. ಶಿವಕುಮಾರ್ ಅವರ ಬಣ ಹೊರಹಾಕುತ್ತಿದ್ದಂತೆಯೇ ಕರ್ನಾಟಕ ಕಾಂಗ್ರೆಸ್‌ದಲ್ಲಿ ರಾತ್ರಿ ಕಾರ್ಯಾಚರಣೆ ಶುರುವಾಗಿದೆ. ಡಾ. ಜಿ. ಪರಮೇಶ್ವರ ಅವರ ನಿವಾಸದಲ್ಲಿ ನಡೆದ ಈ ದಿಢೀರ್ ಭೇಟಿಯಲ್ಲಿ ಚರ್ಚೆಗೆ ಬಂದ ವಿಚಾರಗಳು' ಎಂದು ಟ್ವೀಟ್ ವೊಂದನ್ನು ಮಾಡಿದೆ.
ರಾಜ್ಯದಲ್ಲಿ @INCKarnataka ಬಂದಿದೆ ಕರ್ನಾಟಕಕ್ಕೆ ಗ್ರಹಣ ಹಿಡಿದಿದೆ:
— BJP Karnataka (@BJP4Karnataka) October 29, 2023
🌗 ಕಾವೇರಿಗೆ ಗ್ರಹಣ
🌗 ವಿದ್ಯುತ್‌ಗೆ ಗ್ರಹಣ
🌗 ಅಭಿವೃದ್ಧಿಗೆ ಗ್ರಹಣ
🌗 ಅನ್ನಭಾಗ್ಯಕ್ಕೆ ಗ್ರಹಣ
🌗 ಕೈಗಾರಿಕೆಗಳಿಗೆ ಗ್ರಹಣ
🌗 ಕುಡಿಯುವ ನೀರಿಗೆ ಗ್ರಹಣ
🌗 ಕೃಷಿ ಉತ್ಪನ್ನಗಳಿಗೆ ಗ್ರಹಣ
🌗 ಬ್ರ್ಯಾಂಡ್ ಬೆಂಗಳೂರಿಗೆ ಗ್ರಹಣ
30 ವರ್ಷಗಳ ಹಿಂದಿನ "ಆ ದಿನಗಳ… pic.twitter.com/xYOlVKRSbd
* ಸಿಎಂ ಕುರ್ಚಿಯ ಕನಸು ಕಾಣುವ ಡಿಸಿಎಂ ಕಿವಿಗೆ ಹೂ ಇಡುವುದು.
* ಹಳೆ ಮೈಸೂರು ಮತ್ತು ಬೆಳಗಾವಿಯಲ್ಲಿ ಡಿ. ಕೆ. ಶಿವಕುಮಾರ್ ಅವರ ಹಸ್ತಕ್ಷೇಪ ನಿಯಂತ್ರಿಸುವುದು.
* ನಿಗಮ ಮಂಡಳಿ ವಿಚಾರದಲ್ಲಿ ಡಿಸಿಎಂ ಬಣದ ಹಸ್ತಕ್ಷೇಪಕ್ಕೆ ಬ್ರೇಕ್ ಹಾಕುವುದು.
* ತಮ್ಮ ತಮ್ಮ ಬಣದ "ಸಂಪನ್ಮೂಲ"ದ ಲೆಕ್ಕಾಚಾರ.
* ಸತೀಶ್ ಜಾರಕಿಹೊಳಿ ಅವರ ತಂಡ ದುಬೈಗೆ ಹಾರುವುದನ್ನು ತಡೆ ಹಿಡಿಯುವುದು.
* ಹೈಕಮಾಂಡ್‌ಗೆ ಯಾರಿಂದ ಎಷ್ಟು ಕಲೆಕ್ಷನ್ ಸಂದಾಯವಾಗಬೇಕು ಎಂಬ ಮರುವಿಮರ್ಶೆ.
* ಲಕ್ಷ್ಮಿ ಕಂಟಕದಿಂದ ಕಾಂಗ್ರೆಸ್ಸನ್ನು ಬಚಾವ್ ಮಾಡುವುದು.
'ರಾಜ್ಯಾಭಿವೃದ್ಧಿ ವಿಚಾರಕ್ಕೆ ಬಂದಾಗ ನಿದ್ದೆ ಮಾಡುವ ಕಲೆಕ್ಷನ್ ಮಾಸ್ಟರ್, ದ್ರವ್ಯ ಸಂಗ್ರಹದ ವಿಚಾರ ಬಂದಾಗ ಹೈಕಮಾಂಡ್ ಮೆಚ್ಚಿಸಿ ತಮ್ಮ ಜೇಬೂ ಬೆಚ್ಚಗಾಗಿಸಲು ನಿದ್ದೆಗೆಟ್ಟು ಕೆಲಸಕ್ಕಿಳಿಯುತ್ತಾರೆ' ಎಂದು ಬಿಜೆಪಿ ಆರೋಪ ಮಾಡಿದೆ.
ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ, 'ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತುʼ ಎಂಬ ಗಾದೆ ಕರ್ನಾಟಕದ ಈಗಿನ ಪರಿಸ್ಥಿತಿಗೆ ಅಕ್ಷರಶಃ ಸೂಕ್ತ. ಕರ್ನಾಟಕ ಕಾಂಗ್ರೆಸ್‌ದ ಬಣಗಳ ಜಗಳದಲ್ಲಿ ಸಮೃದ್ಧಿಯ ಬೀಡಾಗಿದ್ದ ಕರ್ನಾಟಕ ಇಂದು ಅಕ್ಷರಶಃ ಬಡವಾಗಿದೆ' ಎಂದು ಹೇಳಿದೆ.
'ತಮ್ಮ ಕುರ್ಚಿ ಉಳಿಸಿಕೊಳ್ಳುವ ಸರ್ಕಸ್‌ನಲ್ಲಿ ರಾಜ್ಯದ ಅಭಿವೃದ್ಧಿಯನ್ನು 10 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿ ರಿವರ್ಸ್ ಗೇರ್‌ನಲ್ಲಿರಿಸಿರುವುದೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಸಮ್ಮಿಶ್ರ ಕಾಂಗ್ರೆಸ್ ಸರ್ಕಾರದ ಸಾಧನೆ!!' ಎಂದು ಟೀಕಿಸಿದೆ.
'ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಬರ ಆವರಿಸಿದೆ. 103 ವರ್ಷಗಳ ಬಳಿಕ ಈ ಪರಿಯಾದ ಭೀಕರ ಬರ ಬಂದಿದೆ ಎಂದು ಸರ್ಕಾರ ಹೇಳುತ್ತಿದೆ. ಸಾಲದ್ದಕ್ಕೆ 240 ತಾಲೂಕುಗಳ ಪೈಕಿ 210 ತಾಲೂಕುಗಳು ಬರಪೀಡಿತ ಎಂದು ಸರ್ಕಾರವೇ ಅಧಿಕೃತವಾಗಿ ಘೋಷಿಸಿದೆ. ಬರ ಬಂದಿರುವ ಕಾರಣ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಿದ್ದಲ್ಲದೆ, ಹಂಪಿ ಉತ್ಸವ ಸೇರಿದಂತೆ ಅನೇಕ ಉತ್ಸವಗಳನ್ನು ರದ್ದುಗೊಳಿಸಿದೆ. ಆದರೆ ಇದೆಲ್ಲದರ ನಡುವೆ ಸಚಿವರುಗಳಿಗೆ ಹೊಸ ದುಬಾರಿ, ಐಷಾರಾಮಿ ಕಾರುಗಳನ್ನು ಖರೀದಿಸುತ್ತದೆ. ಇದು ಕಾಂಗ್ರೆಸ್ ಸರ್ಕಾರ ಬರವನ್ನು ನಿರ್ವಹಿಸುವ ನೀತಿ!!' ಎಂದು ಹೇಳಿದೆ.
'ಸಿಎಂ ಸಿದ್ದರಾಮಯ್ಯರವರ ಸಿಎಂ ಕುರ್ಚಿ ಅವಧಿ ಕೇವಲ 2.5 ವರ್ಷ ಎಂದು ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ ತತ್‌ಕ್ಷಣವೇ ಕಾಂಗ್ರೆಸ್ ನ ಹಿರಿಯ ನಾಯಕರೆನ್ನೆಲ್ಲಾ ಕರೆದು ಮೀಟಿಂಗ್ ಮಾಡುವ ಸಿಎಂ ಸಿದ್ದರಾಮಯ್ಯ ಇದುವರೆಗೂ ರಾಜ್ಯದ ಬರಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಸಭೆ ನಡೆಸಿಲ್ಲ!!' ಎಂದು ಪ್ರತಿಪಕ್ಷ ಬಿಜೆಪಿ ಆರೋಪ ಮಾಡಿದೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಉಜ್ವಲ ಯೋಜನೆ ಬದಲು ಸೌದೆ ಒಲೆ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ -
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಬಿ.ಎಸ್.ಯಡಿಯೂರಪ್ಪ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್‌ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ












Click it and Unblock the Notifications