India weather: ಮಳೆಗಾಗಿ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ
ನವದೆಹಲಿ, ಏಪ್ರಿಲ್. 24: ಆರು ಪೂರ್ವ ಮತ್ತು ದಕ್ಷಿಣ ರಾಜ್ಯಗಳು ಸೇರಿದಂತೆ 13 ರಾಜ್ಯಗಳ 89 ಕ್ಷೇತ್ರಗಳಲ್ಲಿ ಶುಕ್ರವಾರ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದೆ. ಇದೇ ವೇಳೆ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗುತ್ತಿದೆ. ಇದೆ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಕೂಡ ನೀಡಿದೆ.
ಪೂರ್ವ ಮತ್ತು ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ಬಿಸಿಗಾಳಿಯು ಇನ್ನೂ ಐದು ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಎಚ್ಚರಿಸಿದೆ. ಎರಡನೇ ಹಂತದಲ್ಲಿ ಲೋಕಸಭೆ ಚುನಾವಣೆಯ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕರ್ನಾಟಕ, ಕೇರಳ ಮತ್ತು ಬಿಹಾರ ಚುನಾವಣೆಗಳು ನಡೆಯಲಿವೆ.

ಭಾರೀ ಬಿಸಿಲು ಐಎಂಡಿ ಎಚ್ಚರಿಕೆ
ಏಪ್ರಿಲ್-ಜೂನ್‌ನಲ್ಲಿ ದೇಶದ ಹೆಚ್ಚಿನ ಪ್ರದೇಶಗಳಲ್ಲಿ ಭಾರೀ ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ಈ ತಿಂಗಳ ಆರಂಭದಲ್ಲಿ ಎಚ್ಚರಿಕೆ ನೀಡಿತು, ಹೀಟ್‌ವೇವ್ 10 ರಿಂದ 20 ದಿನಗಳವರೆಗೆ ಇರುತ್ತದೆ. ಮತದಾನಕ್ಕೆ ತೊಂದರೆಯಾಗದಂತೆ ಏನೇನು ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ವಿವಿಧ ಸಚಿವಾಲಯಗಳೊಂದಿಗೆ ಹವಾಮಾನ ಇಲಾಖೆ ಸಬೆ ನಡೆಸಿದೆ.
ಹವಾಮಾನ ಇಲಾಖೆಯು ಒಡಿಶಾ, ಬಿಹಾರ ಮತ್ತು ಗಂಗಾನದಿ ಪಶ್ಚಿಮ ಬಂಗಾಳಕ್ಕೆ ಆರೆಂಜ್ ಆಲರ್ಟ್ ನೀಡಿದೆ. ಎಳೆಯ ಮಕ್ಕಳು, ವೃದ್ಧರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಮುಂದಿನ ಐದು ದಿನಗಳವರೆಗೆ ಗಂಗಾನದಿ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಮತ್ತು ಒಡಿಶಾದ ಪ್ರತ್ಯೇಕ ಭಾಗಗಳಲ್ಲಿ ಶಾಖದ ಅಲೆಯಿಂದ ತೀವ್ರ ಬಿಸಿಲು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.
ಕರ್ನಾಟಕದಲ್ಲಿ ಶನಿವಾರದವರೆಗೆ ಭಾರಿ ಬಿಸಿಲು
ಕರ್ನಾಟಕದ ಒಳನಾಡು, ರಾಯಲಸೀಮಾದ ಪ್ರತ್ಯೇಕ ಭಾಗಗಳಲ್ಲಿ ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಶನಿವಾರದವರೆಗೆ ಶಾಖದ ಅಲೆಯನ್ನು ಎದುರಿಸಬಹುದು. ತಮಿಳುನಾಡಿನಲ್ಲಿ ಬುಧವಾರದವರೆಗೆ ಇರಲಿದೆ. ಜಾರ್ಖಂಡ್, ಬಿಹಾರ, ತೆಲಂಗಾಣ, ಪೂರ್ವ ಉತ್ತರ ಪ್ರದೇಶಗಳಲ್ಲಿ ಬುಧವಾರದಿಂದ ಶನಿವಾರದವರೆಗೂ ಬಿಸಿಕು ಹೆಚ್ಚಿರಲಿದೆ. ಪಶ್ಚಿಮ ಉತ್ತರ ಪ್ರದೇಶ, ಕರಾವಳಿ ಆಂಧ್ರ ಪ್ರದೇಶ ಮತ್ತು ಯಾನಂ ಗುರುವಾರದಿಂದ ಶನಿವಾರದವರೆಗೆ ಶಾಖದ ಅಲೆಗಳನ್ನು ಎದುರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸೋಮವಾರ, ಉತ್ತರ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ, ಉತ್ತರ ಒಡಿಶಾ, ಗಂಗಾನದಿ ಪಶ್ಚಿಮ ಬಂಗಾಳ ಮತ್ತು ರಾಯಲಸೀಮಾದ ಹಲವು ಭಾಗಗಳಲ್ಲಿ ತಾಪಮಾನವು 43 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಕೇರಳ , ತಮಿಳುನಾಡು, ಪುದುಚೇರಿ, ಕರಾವಳಿ ಕರ್ನಾಟಕದಲ್ಲಿ ಶನಿವಾರದವರೆಗೆ ಬಿಸಿ ಮತ್ತು ಆರ್ದ್ರ ವಾತಾವರಣ ಇರುವ ನಿರೀಕ್ಷೆಯಿದೆ.
ಕೊಂಕಣ ಮತ್ತು ಗೋವಾ, ಅಸ್ಸಾಂ, ಮೇಘಾಲಯ ಮತ್ತು ತ್ರಿಪುರಾ ಶುಕ್ರವಾರದವರೆಗೆ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಾಂ ಮತ್ತು ರಾಯಲಸೀಮಾ ಮುಂದಿನ ಎರಡು ದಿನಗಳು ಇದೆ ರೀಯಿಯ ವಾತಾವರಣ ಎದುರಿಸಲಿವೆ. ಈ ಹವಾಮಾನ ಪರಿಸ್ಥಿತಿಯು ಕರಾವಳಿ ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ, ಕರ್ನಾಟಕ, ಗೋವಾ, ಕೇರಳ, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಜನರ ಅನಾನುಕೂಲತೆಯನ್ನು ಹೆಚ್ಚಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಭಾರತದ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ
ಸೋನಿಪತ್, ರೋಹ್ಟಕ್, ಖಾರ್ಖೋಡಾ, ಹರಿಯಾಣದ ಝಜ್ಜರ್, ಮತ್ತು ಬಾಗ್ಪತ್, ಮೀರತ್, ಖೇಕ್ರಾ, ಮೋದಿನಗರ ಸೇರಿದಂತೆ ಇಡೀ ದೆಹಲಿ ಮತ್ತು ಎನ್‌ಸಿಆರ್‌ನ ಪಕ್ಕದ ಪ್ರದೇಶಗಳು, ಉತ್ತರ ಪ್ರದೇಶದ ಗಢಮುಕ್ತೇಶ್ವರ, ಪಿಲಾಖುವಾ, ಹಾಪುರ್, ಗುಲಾವೋಟಿ, ಸಿಕಂದರಾಬಾದ್, ಬುಲಂದ್‌ಶಹರ್, ಜಹಾಂಗೀರಾಬಾದ್‌ನಲ್ಲಿ ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಬಹುತೇಕ ಭಾಗಗಳಲ್ಲಿ ಲಘು ಮಳೆ ಅಥವಾ ತುಂತುರು ಮಳೆಯಾಗಬಹುದು. ಕೆಲವು ಭಾಗಗಳಲ್ಲಿ ಚಂಡಮಾರುತ ಅಥವಾ ಗುಡುಗು ಸಹಿತ ಮಳೆ ಮತ್ತು 40-70 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.
ಫರಿದಾಬಾದ್, ಛಪ್ರೌಲಾ, ದಾದ್ರಿ ಮತ್ತು ಯುಪಿಯ ಸಿಕಂದರಾಬಾದ್ ಮತ್ತು ಬುಲಂದ್‌ಶಹರ್‌ನಲ್ಲಿ ಆಲಿಕಲ್ಲು ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿ ತೋಟಗಾರಿಕೆ ಮತ್ತು ಫಲಸಲಿಗೆ ಬಂದಿರುವ ಬೆಳೆಗಳು ಹಾನಿಯಾಗುವ ಸಾಧ್ಯತೆಯಿದೆ. ಕುಸಿಯುವ ಹಂತದಲ್ಲಿರುವ ಮನೆಗಳು ಅಥವಾ ಗೋಡೆಗಳು ಮತ್ತು ಗುಡಿಸಲುಗಳಿಗೆ ಸಣ್ಣ ಹಾನಿಯಾಗಬಹುದು.












Click it and Unblock the Notifications