ನಗರದಲ್ಲಿ ಕಸ ಸಂಗ್ರಹಿಸುವ ಆಟೋಗಳ ಮೇಲೆ ನಿಗಾ ಇರಿಸಲು MATRA ಆ್ಯಪ್ ಬಳಕೆ, ಏನಿದು

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದಲ್ಲಿರುವ ಕಸ ರಸ ಘಟಕಕ್ಕೆ ಜೂನ್ 23ರ ಮಂಗಳವಾರ ಪಾಲಿಕೆಯ ಆಯುಕ್ತರಾದ ಕೆ. ಎನ್. ರಮೇಶ್ ಅವರು ಭೇಟಿ ನೀಡಿ ಕಸ ಸಂಗ್ರಹಣ ಆಟೋ ಚಾಲಕರ ಮೇಲೆ ನಿಗಾ ಇರಿಸುವ ಸಂಬಂಧ ಪ್ರಾಯೋಗಿಕವಾಗಿ ಪರಿಚಯಿಸಿರುವ MATRA ಅಪ್ಲಿಕೇಶನ್ ಬಳಕೆ ಕುರಿತಂತೆ ಪರಿಶೀಲನೆ ನಡೆಸಿದರು.

ಆಟೋಗಳ ಲೈವ್ ಟ್ರ್ಯಾಕಿಂಗ್ ಮಾಹಿತಿ ಸಂಗ್ರಹ

ಈ ಅಪ್ಲಿಕೇಶನ್ ಮೂಲಕ ಕಸ ಸಂಗ್ರಹಣಾ ಆಟೋಗಳು ನಿಗದಿತ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿವೆಯೇ? ಯಾವ ಮಾರ್ಗದಲ್ಲಿ ಸಂಚರಿಸುತ್ತಿವೆ? ಎಷ್ಟು ದೂರ ಕ್ರಮಿಸಿವೆ ಹಾಗೂ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಿದೆ ಎನ್ನುವುದು ಸೇರಿದಂತೆ ಹಲವು ವಿಷಯಗಳ ಕುರಿತ ಸಮಗ್ರ ಮಾಹಿತಿ ಈ ಅಪ್ಲಿಕೇಶನ್ ಮೂಲಕ ಲಭ್ಯವಾಗುತ್ತದೆ. ಜಿಪಿಎಸ್ ಟ್ರ್ಯಾಕಿಂಗ್ ತಂತ್ರಜ್ಞಾನ ಹೊಂದಿರುವ ಈ ಅಪ್ಲಿಕೇಶನ್ ಅನ್ನು ಪ್ರಸ್ತುತ 25 ಕಸ ಸಂಗ್ರಹಣಾ ಆಟೋ ಚಾಲಕರ ಮೊಬೈಲ್‌ಗಳಿಗೆ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಆಯುಕ್ತರಿಗೆ ವಿವರಿಸಿದ್ದಾರೆ.

MATRA

ಕೋರಮಂಗಲ ವಾರ್ಡ್‌ನಲ್ಲಿ MATRA app ಬಳಕೆಗೆ ಪ್ರಾಯೋಗಿಕ ಚಾಲನೆ

ಕೋರಮಂಗಲ ವಾರ್ಡ್ ವ್ಯಾಪ್ತಿಯಲ್ಲಿ ಕಸ ಸಂಗ್ರಹಣಾ ಆಟೋಗಳ ಕಾರ್ಯನಿರ್ವಾಹಣಾ ಸಂಖ್ಯೆ ಹಾಗೂ ಸಮಯ ನಿಗದಿ ಕುರಿತಂತೆ ಸಾರ್ವಜನಿಕರಿಂದ ಪ್ರತಿನಿತ್ಯ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕಸ ಸಂಗ್ರಹಣೆ ಹಾಗೂ ವಿಲೇವಾರಿ ವ್ಯವಸ್ಥೆಯನ್ನು ಸರಿಪಡಿಸಲು ಕೋರಮಂಗಲ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ MATRA ಅಪ್ಲಿಕೇಶನ್ ಬಳಸಲಾಗುತ್ತಿದೆ ಇದರಿಂದ ಕಸ ಸಂಗ್ರಹಣೆಯಲ್ಲಿ ಉಂಟಾಗುತ್ತಿದ್ದ ಸಮಸ್ಯೆ ಕಡಿಮೆಯಾಗುವುದು ಎಂದು ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದಾರ್ಥ ಕಾಲೋನಿ ಬ್ಲಾಕ್ ಸ್ಪಾಟ್‌ಗಳ ನಿರ್ಮೂಲನೆಗೆ ಸೂಚನೆ

ಸಿದ್ದಾರ್ಥ ಕಾಲೋನಿ ವ್ಯಾಪ್ತಿಯಲ್ಲಿ 2 ಬ್ಲಾಕ್ ಸ್ಪಾಟ್‌ಗಳನ್ನು ತಕ್ಷಣವೇ ಸ್ವಚ್ಛಗೊಳಿಸಿ ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸ್ಥಳದಲ್ಲಿಂದ ಅಧಿಕಾರಿಗಳಿಗೆ ಸೂಚಿಸಿದರು. ಮುಂದುವರೆದು ಆ ಜಾಗಕ್ಕೆ ಕಸ ಹಾಕುವ ವ್ಯಕ್ತಿಗಳಿಗೆ ದಂಡ ವಿಧಿಸುವಂತೆ ತಿಳಿಸಿದರು.

MATRA: ಅನೈತಿಕ ಚಟುವಟಿಕೆ ತಡೆಗೆ ಕಠಿಣ ಕ್ರಮ

ಕಸ ರಸ ಕೇಂದ್ರದ ಆವರಣದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಘಟಕದ ಒಳಗೆ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಗೂ ಗುರುತಿನ ಚೀಟಿ ನೀಡಬೇಕು ಹಾಗೂ ಸಿಸಿಕ್ಯಾಮರಾ ಅಳವಡಿಸಲು ಸೂಚನೆ ನೀಡಿದರು. ಕೇಂದ್ರದ ಆವರಣಕ್ಕೆ ಯಾರಾದರೂ ಅನಧಿಕೃತ ವ್ಯಕ್ತಿಗಳು ಪ್ರವೇಶಿಸಿದರೆ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತುರ್ತು ನಿರ್ವಹಣಾ ತರಬೇತಿ ಕೇಂದ್ರ ಪರಿಶೀಲನೆ

ಕಸ ರಸ ಕೇಂದ್ರದಲ್ಲಿ ಪ್ರವಾಹ ಮತ್ತು ವಿಪತ್ತು ಪರಿಸ್ಥಿತಿಗಳಲ್ಲಿ ತುರ್ತು ಸ್ಪಂದನಾ ತರಬೇತಿಗಾಗಿ ನಿರ್ಮಿಸಿರುವ ಕಚೇರಿ ಸ್ಥಳವನ್ನು ಆಯುಕ್ತರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳ ಕೋರಿಕೆ ಮೇರೆಗೆ ಈ ಕಛೇರಿಗೆ ಅವಶ್ಯವಿರುವ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.

‘ಮಾತ್ರಾ’ (MATRA) ಮೊಬೈಲ್ ಅಪ್ಲಿಕೇಶನ್‌ನ ಮುಖ್ಯ ಉದ್ದೇಶ ಏನು?
ನಗರದ ಮೂಲೆಮೂಲೆಗಳಲ್ಲಿ ಸಂಚರಿಸುವ ಕಸದ ಆಟೋ ಟಿಪ್ಪರ್‌ಗಳು ಮತ್ತು ಕಂಪ್ಯಾಕ್ಟರ್‌ಗಳನ್ನು ಜಿಪಿಎಸ್ ಮೂಲಕ ನಿರಂತರವಾಗಿ ಟ್ರ್ಯಾಕ್ ಮಾಡುವುದು ಇದರ ಮುಖ್ಯ ಉದ್ದೇಶ.
ಮಾತ್ರಾ ಆಪ್ ಸಾಮಾನ್ಯ ಜಿಪಿಎಸ್ ಟ್ರ್ಯಾಕಿಂಗ್‌ಗಿಂತಲೂ ಹೆಚ್ಚಾಗಿ ಯಾವ ವೈಶಿಷ್ಟ್ಯ ಹೊಂದಿದೆ?
ಇದರಲ್ಲಿ ಅತ್ಯಾಧುನಿಕ ಜಿಯೋ-ಫೆನ್ಸಿಂಗ್ ವ್ಯವಸ್ಥೆ ಇದೆ. ಪ್ರತಿ ವಾಹನಕ್ಕೆ ನಿರ್ದಿಷ್ಟ ಭೌಗೋಳಿಕ ಗಡಿ ಹಾಗೂ ರಸ್ತೆ ಮಾರ್ಗಗಳನ್ನು ನಿಗದಿಪಡಿಸಲಾಗುತ್ತದೆ, ವಾಹನವು ಆ ಮಾರ್ಗ ಬಿಟ್ಟು ಹೋದರೆ ನಿಯಂತ್ರಣ ಕೊಠಡಿಯ ಡ್ಯಾಶ್‌ಬೋರ್ಡ್‌ನಲ್ಲಿ ಎಚ್ಚರಿಕೆ ಸಿಗುತ್ತದೆ.
ನಿಯಂತ್ರಣ ಕೊಠಡಿಯಲ್ಲಿ ಅಧಿಕಾರಿಗಳಿಗೆ ಮಾತ್ರಾ ಆಪ್ ಯಾವ ರೀತಿಯ ಮಾಹಿತಿಯನ್ನು ನೀಡುತ್ತದೆ?
ಪ್ರತಿ ವಾಹನದ ಲೈವ್ ಮ್ಯಾಪ್ ಲಭ್ಯವಾಗುತ್ತದೆ. ವಾಹನವು ಯಾವ ಗಂಟೆಗೆ ಆರಂಭಿಸಿತು, ಯಾವ ಬೀದಿಯಲ್ಲಿ ಎಷ್ಟು ಸಮಯ ನಿಂತಿತು ಮತ್ತು ದಿನವಿಡೀ ಎಷ್ಟು ಕಿಲೋಮೀಟರ್ ಕ್ರಮಿಸಿತು ಎಂಬ ವಿವರಗಳನ್ನು ಒಂದು ಕ್ಲಿಕ್‌ನಲ್ಲಿ ನೋಡಬಹುದು.
ಕಸ ವಿಲೇವಾರಿಗೆ ಸಂಬಂಧಿಸಿದಂತೆ ಮಾತ್ರಾ ಆಪ್ ಹೇಗೆ ಸಹಾಯ ಮಾಡುತ್ತದೆ?
ಸಂಗ್ರಹಿಸಿದ ತ್ಯಾಜ್ಯವನ್ನು ನಿಗದಿತ ಸಂಸ್ಕರಣಾ ಘಟಕಗಳು ಅಥವಾ ಕಸ ವಿಲೇವಾರಿ ಕೇಂದ್ರಗಳಿಗೆ ತಲುಪಿಸುವ ಪ್ರಕ್ರಿಯೆಯಲ್ಲಿಯೂ ವಾಹನದ ಚಲನೆಯನ್ನು ದಾಖಲಿಸುತ್ತದೆ. ಇದರ ಮೂಲಕ ವಾಹನಗಳು ರಸ್ತೆ ಬದಿಯಲ್ಲೇ ಅಕ್ರಮವಾಗಿ ಕಸ ಸುರಿಯುವುದನ್ನು ತಡೆಯುವ ಉದ್ದೇಶವಿದೆ.
ಸುಳ್ಳು ಬಿಲ್ಲು ಮತ್ತು ಗೈರುಹಾಜರಿ ಸಮಸ್ಯೆಗಳನ್ನು ನಿಯಂತ್ರಿಸಲು ಮಾತ್ರಾ ವ್ಯವಸ್ಥೆಯಲ್ಲಿ ಏನು ಸೇರಿಸಲಾಗಿದೆ?
ಪ್ರತಿ ವಾಹನದ ಕೆಲಸದ ದಿನಗಳು ಮತ್ತು ಕ್ರಮಿಸಿದ ದೂರದ ಆಧಾರದ ಮೇಲೆ ಡಿಜಿಟಲ್ ಐಡಿಯ ಮೂಲಕ ಮಾಹಿತಿ ಅಪ್‌ಲೋಡ್ ಆಗುವುದರಿಂದ ಸುಳ್ಳು ಬಿಲ್ಲು ಸೃಷ್ಟಿಸುವುದು ನಿಲ್ಲುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಚಾಲಕರು/ಪೌರಕಾರ್ಮಿಕರ ಬಯೋಮೆಟ್ರಿಕ್ ಹಾಜರಾತಿಯನ್ನೂ ಜೋಡಿಸಲಾಗಿದೆ, ಯಾರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+