ಕಚ್ ಭಾಗದ ಆರ್ಥಿಕತೆಗೆ ಹೊಸ ಬಲ: ಅದಾನಿ ಮುಂದ್ರಾ ಏರ್‌ಪೋರ್ಟ್‌ನಿಂದ ವಾಣಿಜ್ಯ ವಿಮಾನಗಳ ಹಾರಾಟ ಶುರು

ಗುಜರಾತ್‌ನ ಕಚ್ (Kutch) ಭಾಗದ ಸಾರಿಗೆ ಸಂಪರ್ಕಕ್ಕೆ ಹೊಸ ಬಲ ಬಂದಿದೆ. ಅದಾನಿ ಮುಂದ್ರಾ ವಿಮಾನ ನಿಲ್ದಾಣವು (Adani Mundra Airport) ಮಂಗಳವಾರದಿಂದ ತನ್ನ ವಾಣಿಜ್ಯ ವಿಮಾನಗಳ ಸಂಚಾರವನ್ನು ಅಧಿಕೃತವಾಗಿ ಆರಂಭಿಸಿದೆ. ಮುಂದ್ರಾದಿಂದ ಮುಂಬೈ ಮತ್ತು ಗೋವಾ ನಗರಗಳಿಗೆ ಹೊಸ ವಿಮಾನ ಸೇವೆಗಳನ್ನು ಆರಂಭಿಸುವ ಮೂಲಕ ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.

ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾದ 'ಸ್ಟಾರ್ ಏರ್' (Star Air) ಸಹಭಾಗಿತ್ವದಲ್ಲಿ ಈ ಹೊಸ ವಿಮಾನ ಸೇವೆ ನಡೆಸಲಾಗುತ್ತಿದೆ. ಇದು ಭಾರತದ ಪ್ರಮುಖ ನಗರಗಳಿಗೆ ವೇಗವಾಗಿ ಮತ್ತು ಸುಲಭವಾಗಿ ಪ್ರಯಾಣಿಸಲು ನೆರವಾಗಲಿದ್ದು, ಈ ಭಾಗದ ವ್ಯಾಪಾರ, ವಾಣಿಜ್ಯ, ಪ್ರವಾಸೋದ್ಯಮ ಮತ್ತು ಸರಕು ಸಾಗಣೆ ವಲಯಕ್ಕೆ ದೊಡ್ಡ ಉತ್ತೇಜನ ನೀಡುವ ನಿರೀಕ್ಷೆಯಿದೆ.

Adani Mundra Airport

ಈ ವಿಮಾನ ಸೇವೆಗಳ ಆರಂಭದಿಂದ ಪ್ರಯಾಣದ ಸಮಯ ಉಳಿತಾಯವಾಗಲಿದೆ. ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಬಂದರು ಮತ್ತು ದೇಶದ ಅತಿ ದೊಡ್ಡ ಬಹು-ಉತ್ಪನ್ನ ವಿಶೇಷ ಆರ್ಥಿಕ ವಲಯವನ್ನು (SEZ) ಹೊಂದಿರುವ ಮುಂದ್ರಾ ಹಾಗೂ ಅದರ ಸುತ್ತಮುತ್ತಲಿನ ಉದ್ಯಮಗಳಿಗೆ ಇದು ಅತ್ಯುತ್ತಮ ಸಾರಿಗೆ ಸಂಪರ್ಕವನ್ನು ಕಲ್ಪಿಸಲಿದೆ.

ಈ ವಿಮಾನ ನಿಲ್ದಾಣವನ್ನು ಕೇವಲ ಪ್ರಯಾಣಕ್ಕಾಗಿ ಅಷ್ಟೇ ಅಲ್ಲದೆ, ಸಂಪೂರ್ಣ ಸಂಯೋಜಿತ ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಮತ್ತು ಬಿಸಿನೆಸ್ ಹಬ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಇಲ್ಲಿನ ವಾಯು ಸಾರಿಗೆಯನ್ನು ಈಗಾಗಲೇ ಇರುವ ಬಂದರು ಮತ್ತು ಕೈಗಾರಿಕಾ ಮೂಲಸೌಕರ್ಯಗಳೊಂದಿಗೆ ಜೋಡಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ ಮತ್ತು ಗೋವಾ ಮಾತ್ರವಲ್ಲದೆ, ಸ್ಟಾರ್ ಏರ್ ಸಂಸ್ಥೆಯು ಮುಂದ್ರಾದಿಂದ ಹಿಂದನ್, ಸೂರತ್, ಬೆಳಗಾವಿ, ಬೆಂಗಳೂರು, ಕೊಲ್ಹಾಪುರ ಮತ್ತು ನಾಂದೇಡ್ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಲಿದೆ. ಈ ಮೂಲಕ ಮುಂದ್ರಾ ವಿಮಾನ ನಿಲ್ದಾಣದಿಂದ ಒಟ್ಟು ಎಂಟು ಪ್ರಮುಖ ನಗರಗಳಿಗೆ ನೇರ ಸಂಪರ್ಕ ಸಿಗಲಿದೆ.

Adani Mundra Airport

ಈ ವಿಮಾನ ನಿಲ್ದಾಣವು 1,900 ಮೀಟರ್ ಉದ್ದದ ರನ್‌ವೇ ಹೊಂದಿದ್ದು, ವಿವಿಧ ರೀತಿಯ ಪ್ರಯಾಣಿಕ ಹಾಗೂ ಸರಕು ಸಾಗಣೆ ವಿಮಾನಗಳ ಕಾರ್ಯಾಚರಣೆಗೆ ಸೂಕ್ತವಾಗಿದೆ. ಇಲ್ಲಿನ ಟರ್ಮಿನಲ್ ಕಟ್ಟಡದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಚೆಕ್-ಇನ್ ಕೌಂಟರ್‌ಗಳು, ಕಾಯುವ ಕೋಣೆಗಳು, ಪಾರ್ಕಿಂಗ್ ವ್ಯವಸ್ಥೆ, ಫುಡ್ ಕೋರ್ಟ್, ವೀಲ್‌ಚೇರ್ ಸೌಲಭ್ಯ ಮತ್ತು ಡ್ರಾಪ್-ಆಫ್ ಜೋನ್‌ಗಳನ್ನು ಕಲ್ಪಿಸಲಾಗಿದೆ.

ಈ ಸುಧಾರಿತ ವಿಮಾನ ಸಂಪರ್ಕವು ಮುಂದ್ರಾ ಬಂದರು ಮತ್ತು ಮುಂದ್ರಾ ವಿಶೇಷ ಆರ್ಥಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳಿಗೆ ಭಾರಿ ನೆರವಾಗಲಿದ್ದು, ಉದ್ಯಮಿಗಳ ಹಾಗೂ ಸರಕುಗಳ ಸುಲಭ ಸಂಚಾರಕ್ಕೆ ಹಾದಿ ಮಾಡಿಕೊಡಲಿದೆ. ಈ ಹೊಸ ವಾಯು ಸಂಪರ್ಕವು ದೇಶೀಯ ಮತ್ತು ಅಂತರರಾಷ್ಟ್ರೀಯ ಪೂರೈಕೆಯಲ್ಲಿ ಈ ಪ್ರದೇಶದ ಪಾತ್ರವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಉದ್ಯಮದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಹೊಸ ಬೆಳವಣಿಗೆಯು ಅದಾನಿ ಗ್ರೂಪ್‌ನ ವಾಯುಯಾನ ವಲಯದ ವಿಸ್ತರಣಾ ಯೋಜನೆಗೆ ಮತ್ತಷ್ಟು ಬಲ ನೀಡಿದೆ. ಪ್ರಸ್ತುತ ಈ ಉದ್ಯಮ ಸಮೂಹವು ಮುಂಬೈ, ಅಹಮದಾಬಾದ್, ಜೈಪುರ, ಲಕ್ನೋ, ತಿರುವನಂತಪುರಂ, ಮಂಗಳೂರು, ಗುವಾಹಟಿ ವಿಮಾನ ನಿಲ್ದಾಣಗಳನ್ನು ಹಾಗೂ ಶೀಘ್ರದಲ್ಲೇ ಆರಂಭವಾಗಲಿರುವ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿದೆ. ಈಗ ಮುಂದ್ರಾದಿಂದಲೂ ನಿಗದಿತ ವಿಮಾನಗಳ ಸಂಚಾರ ಆರಂಭವಾಗಿರುವುದರಿಂದ, ಇದು ಕಚ್ ಭಾಗದ ಪ್ರಮುಖ ವಾಯುಯಾನ ಹೆಬ್ಬಾಗಿಲಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಜೊತೆಗೆ ಪಶ್ಚಿಮ ಗುಜರಾತ್‌ನ ಪ್ರಾದೇಶಿಕ ಆರ್ಥಿಕ ಪ್ರಗತಿ, ಕೈಗಾರಿಕಾ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಇದು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+