ಇದು ಐಪಿಎಲ್ ಅಲ್ಲ ಗುರುವೇ.. ಸ್ಕೋರ್ ಬೋರ್ಡ್ ನಿರ್ವಹಿಸುವವರ ಗತಿ ಏನಾಗ್ಬೇಕು? ವೈಭವ್‌ಗೆ ಆರ್‌ಸಿಬಿ ಪ್ರಶ್ನೆ

Vaibhav Sooryavanshi: ಶ್ರೀಲಂಕಾದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯ ಫೈನಲ್‌ ಪಂದ್ಯದಲ್ಲಿ ಟೀಮ್ ಇಂಡಿಯಾವು ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಟ್ರೋಫಿ ಎತ್ತಿಹಿಡಿಯಿತು. ಇದರ ಬೆನ್ನಲ್ಲೇ ವೈಭವ್ ಆಟದ ಕುರಿತು ಆರ್‌ಸಿಬಿ, ರಾಜಸ್ಥಾನ್ ರಾಯಲ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಮಾಡಿರುವ ಹಾಸ್ಯಭರಿತ ಟ್ವಿಟ್‌ಗಳು ಇದೀಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿವೆ.

ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಶ್ರೀಲಂಕಾ 'ಎ' ವಿರುದ್ಧದ ಏಕದಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಮಾಡಿದರು. ಇವರ ಈ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಇಡೀ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ್ದು, ಐಪಿಎಲ್‌ನ ಫ್ರಾಂಚೈಸಿಗಳಾದ ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹಾಸ್ಯಭರಿತ ಟ್ವೀಟ್‌ ಮೂಲಕ ಯುವ ಆಟಗಾರನಿಗೆ ಅಭಿನಂದನೆ ಸಲ್ಲಿಸಿವೆ.

Vaibhav Sooryavanshi Shines RCB RR And Delhi Capitals Troll Young Star After Record Breaking Knock

ಲಂಕಾ ಬೌಲರ್‌ಗಳ ಬೆವರಿಳಿಸಿದ ವೈಭವ್

ಶ್ರೀಲಂಕಾ 'ಎ' ವಿರುದ್ಧ ನಡೆದ ಟೂರ್ನಿಯ ಪ್ರಶಸ್ತಿ ಸುತ್ತಿನ ಫೈನಲ್ ಪಂದ್ಯದಲ್ಲಿ ಭಾರತ 'ಎ' ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ 15 ವರ್ಷದ ವೈಭವ್ ಸೂರ್ಯವಂಶಿ ಮೊದಲ ಎಸೆತದಿಂದಲೇ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 11 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ ಅವರು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್, ಬೌಂಡರಿಗಳ ಮಳೆ ಹರಿಸಿದ ಈ ಬಾಲಕನ ಆಟಕ್ಕೆ ಲಂಕಾ ಬೌಲರ್‌ಗಳು ತತ್ತರಿಸಿದರು.

ವೈಭವ್ ಸೂರ್ಯವಂಶಿ ಕಾಲೆಳೆದ ಫ್ರಾಂಚೈಸಿಗಳು

ವೈಭವ್ ಸೂರ್ಯವಂಶಿ ಅವರ ಈ ಆಕ್ರಮಣಕಾರಿ ಆಟದ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಫ್ರಾಂಚೈಸಿಗಳು ಪ್ರತಿಕ್ರಿಯಿಸಲು ಆರಂಭಿಸಿದವು. ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ, 'ವೈಭವ್ ದಯವಿಟ್ಟು ಸ್ವಲ್ಪ ನಿಧಾನಿಸಿ... ಇದು ಐಪಿಎಲ್ ಅಲ್ಲ, ಇಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವೂ ಇಲ್ಲ,' ಎಂದು ತಮಾಷೆಯಾಗಿ ಬರೆದುಕೊಂಡು ಅಭಿನಂದನೆ ಸಲ್ಲಿಸಿದೆ.

ಆರ್‌ಸಿಬಿ ಟ್ವಿಟ್‌ನಲ್ಲಿ ಏನಿದೆ?

ಮತ್ತೊಂದೆಡೆ ಆರ್​​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸಹ ವೈಭವ್ ಬ್ಯಾಟಿಂಗ್ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿವೆ. 'ಇಷ್ಟು ವೇಗವಾಗಿ ರನ್ ಗಳಿಸಿದರೆ ಸ್ಕೋರ್ ಬೋರ್ಡ್ ನಿರ್ವಹಿಸುವವರು ಹೇಗೆ ಕೆಲಸ ಮಾಡಬೇಕು? ಮುಂಬರುವ ಹರಾಜಿನಲ್ಲಿ ಈತನ ಮೇಲೆ ಎಲ್ಲರ ಕಣ್ಣು ಬೀಳುವುದಂತೂ ಗ್ಯಾರಂಟಿ,' ಎಂಬ ಅರ್ಥದಲ್ಲಿ ತಮಾಷೆಯ ಪೋಸ್ಟ್‌ಗಳನ್ನು ಹಂಚಿಕೊಂಡು ಅಭಿನಂದನೆ ಸಲ್ಲಿಸಿವೆ.

ಹರಾಜಿಗೂ ಮುನ್ನ ಭಾರಿ ಬೇಡಿಕೆ

ವೈಭವ್ ಸೂರ್ಯವಂಶಿ ಅವರ ಈ ಪ್ರದರ್ಶನವು ಮುಂಬರುವ ಐಪಿಎಲ್ ಹರಾಜಿನ ಮೇಲೆಯೂ ಭಾರಿ ಪ್ರಭಾವ ಬೀರುವ ಸಾಧ್ಯತೆಯಿದೆ. ಈಗಾಗಲೇ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ನೋಡಿರುವ ಫ್ರಾಂಚೈಸಿಗಳು ಮುಂದಿನ ಸೀಸನ್‌ಗಾಗಿ ಖರೀದಿ ಮಾಡಲು ದೊಡ್ಡ ಮಟ್ಟದ ಪೈಪೋಟಿ ನಡೆಸುವ ಸಾಧ್ಯತೆ ಹೆಚ್ಚಿದೆ. ಟಿ20 ಕ್ರಿಕೆಟ್‌ಗೆ ಬೇಕಾದ ಆಟದ ಸಾಮರ್ಥ್ಯ ಇವರಲ್ಲಿ ಇರುವುದರಿಂದ ಹರಾಜಿನಲ್ಲಿ ಇವರು ಕೋಟಿ ಕೋಟಿ ಹಣ ಬಾಚಿಕೊಳ್ಳಬಹುದು ಎನ್ನುವ ಮಾತಗಳು ಕೇಳಿಬರುತ್ತಿವೆ.

ವೈಭವ್ ಸೂರ್ಯವಂಶಿ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಭಾರತದ ದೇಶಿ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಒತ್ತಡದ ಫೈನಲ್ ಪಂದ್ಯದಲ್ಲಿ ಅವರು ತೋರಿದ ಈ ಅಪ್ರತಿಮ ಧೈರ್ಯ ಮತ್ತು ಭಯವಿಲ್ಲದ ಬ್ಯಾಟಿಂಗ್ ಶೈಲಿಯು ಭಾರತೀಯ ಕ್ರಿಕೆಟ್‌ಗೆ ಭವಿಷ್ಯದ ಸೂಪರ್ ಸ್ಟಾರ್ ಸಿಕ್ಕಿರುವುದನ್ನು ಸಾಬೀತುಪಡಿಸಿದೆ. ಲಂಕಾ ನೆಲದಲ್ಲಿ ಭಾರತಕ್ಕೆ ಕೀರ್ತಿ ತಂದ ಈ ಯುವ ಬ್ಯಾಟರ್‌ನ ದಂಡಯಾತ್ರೆ ಹಾಗೂ ಐಪಿಎಲ್ ಫ್ರಾಂಚೈಸಿಗಳು ಇವರನ್ನು ಟ್ರೋಲ್ ಮಾಡುತ್ತಾ ಕೊಂಡಾಡಿರುವ ರೀತಿ ಸದ್ಯ ಎಲ್ಲಡೆ ಭಾರಿ ಸದ್ದು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+