ಬೆಂಗಳೂರಿನ ಮೂಲಕ ಹಾದುಹೋಗಿರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್‌ಪ್ರೆಸ್ ವೇಗಳು
National Highway, Expressway: ರಾಜ್ಯ ರಾಜಧಾನಿ ಬೆಂಗಳೂರು ದೇಶದ ಪ್ರಮುಖ ಆರ್ಥಿಕ ಕೇಂದ್ರಗಳಲ್ಲಿ ಒಂದಾಗಿದೆ. ಆದ್ದರಿಂದ ಇದು ಅತ್ಯುತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ನಗರದ ಮೂಲಕ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳು ಹಾದು ಹೋಗಿವೆ. ಹಾಗಾದ್ರೆ ಅವುಗಳು ಯಾವುವು ಹಾಗೂ ಏನೆಲ್ಲಾ ಪ್ರಯೋಜನೆಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರು ಕೇವಲ ಕರ್ನಾಟಕದ ರಾಜಧಾನಿಯಷ್ಟೇ ಅಲ್ಲ, ಇಡೀ ದೇಶದ ತಂತ್ರಜ್ಞಾನ ಮತ್ತು ಆರ್ಥಿಕತೆಯ ಪ್ರಮುಖ ಕೇಂದ್ರ ಬಿಂದು. ಇಂತಹ ಬೃಹತ್ ಮಹಾನಗರದ ಯಶಸ್ಸಿನ ಹಿಂದೆ ಇಲ್ಲಿನ ಅತ್ಯುತ್ತಮ ರಸ್ತೆ ಸಂಪರ್ಕದ ಪಾತ್ರ ದೊಡ್ಡದಿದೆ. ಬೆಂಗಳೂರಿನ ಮೂಲಕ ಹಾದುಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳು ನಗರದ ಆರ್ಥಿಕ ಮತ್ತು ಸಾಮಾಜಿಕ ಚಿತ್ರಣವನ್ನೇ ಬದಲಾಯಿಸುತ್ತಿವೆ.

ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು
ರಾಷ್ಟ್ರೀಯ ಹೆದ್ದಾರಿ 44 (ಹಳೆಯ NH 7): ಇದು ಭಾರತದ ಅತ್ಯಂತ ಉದ್ದದ ಹೆದ್ದಾರಿಯಾಗಿದ್ದು, ಬೆಂಗಳೂರಿನ ಮೂಲಕ ಹಾದು ಹೋಗುತ್ತದೆ. ಇದು ಉತ್ತರದಲ್ಲಿ ಕಾಶ್ಮೀರದಿಂದ ಆರಂಭವಾಗಿ ಬೆಂಗಳೂರಿನ ಮೂಲಕ ದಕ್ಷಿಣದ ಕನ್ಯಾಕುಮಾರಿಯವರೆಗೆ ಸಂಪರ್ಕ ಕಲ್ಪಿಸುತ್ತದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ, ಹೈದರಾಬಾದ್ ಕಡೆಗೆ ಹಾಗೂ ಮತ್ತೊಂದೆಡೆ ಹೊಸೂರು, ಸೇಲಂ ಕಡೆಗೆ ಹೋಗಲು ಈ ರಸ್ತೆಯನ್ನು ಬಳಸಲಾಗುತ್ತದೆ.
ಕರ್ನಾಟಕದ ಯಾವೆಲ್ಲಾ ಭಾಗಗಳಲ್ಲಿ ಹಾದುಹೋಗುತ್ತದೆ?
* ಬೆಂಗಳೂರು
* ಚಿಕ್ಕಬಳ್ಳಾಪುರ
* ಬಾಗೇಪಲ್ಲಿ
* ದೇವನಹಳ್ಳಿ
* ಯಲಹಂಕ
* ಹೆಬ್ಬಾಳ
* ಎಲೆಕ್ಟ್ರಾನಿಕ್ ಸಿಟಿ
* ಅತ್ತಿಬೆಲೆ
ರಾಷ್ಟ್ರೀಯ ಹೆದ್ದಾರಿ 48 (ಹಳೆಯ NH 4): ಈ ಹೆದ್ದಾರಿಯು ದೆಹಲಿ ಮತ್ತು ಚೆನ್ನೈ ಅನ್ನು ಸಂಪರ್ಕಿಸುತ್ತದೆ. ಬೆಂಗಳೂರಿನಿಂದ ಮುಂಬೈ, ಪುಣೆ, ಬೆಳಗಾವಿ, ಹುಬ್ಬಳ್ಳಿ, ಚಿತ್ರದುರ್ಗ ಹಾಗೂ ತುಮಕೂರಿನ ಕಡೆಗೆ ಸಾಗುವ ಹೆದ್ದಾರಿ ಇದಾಗಿದೆ. ಬೆಂಗಳೂರಿನ ಮತ್ತೊಂದು ಕಡೆಯಿಂದ ಇದು ಕೋಲಾರ ಹಾಗೂ ಮುಳಬಾಗಿಲು ಮೂಲಕ ಚೆನ್ನೈಗೆ ಸಂಪರ್ಕ ಕಲ್ಪಿಸುತ್ತದೆ.
ಕರ್ನಾಟಕದ ಯಾವೆಲ್ಲಾ ಭಾಗಗಳಲ್ಲಿ ಹಾದುಹೋಗುತ್ತದೆ?
* ನಿಪ್ಪಾಣಿ
* ಬೆಳಗಾವಿ
* ಕಿತ್ತೂರು
* ಧಾರವಾಡ
* ಹುಬ್ಬಳ್ಳಿ
* ಹಾವೇರಿ
* ರಾಣೆಬೆನ್ನೂರು
* ಹರಿಹರ
* ದಾವಣಗೆರೆ
* ಚಿತ್ರದುರ್ಗ
* ಹಿರಿಯೂರು
* ಬೆಂಗಳೂರು
* ಸಿರಾ
* ತುಮಕೂರು
* ನೆಲಮಂಗಲ
ರಾಷ್ಟ್ರೀಯ ಹೆದ್ದಾರಿ 75: ಇದು ಕರ್ನಾಟಕದ ಕರಾವಳಿ ನಗರಿ ಮಂಗಳೂರು ಹಾಗೂ ತಮಿಳುನಾಡಿನ ವೆಲ್ಲೂರ್‌ಗೆ ಸಂಪರ್ಕ ಕಲ್ಪಿಸುತ್ತದೆ. ಬೆಂಗಳೂರಿನಿಂದ ಹಾಸನ, ಸಕಲೇಶಪುರ ಮಾರ್ಗವಾಗಿ ಮಂಗಳೂರಿಗೆ ಹಾದುಹೋಗುವ ಪ್ರಮುಖ ಹೆದ್ದಾರಿ ಇದಾಗಿದೆ.
ಕರ್ನಾಟಕದ ಯಾವೆಲ್ಲಾ ಭಾಗಗಳಲ್ಲಿ ಹಾದುಹೋಗುತ್ತದೆ?
* ಮಂಗಳೂರು
* ಬಂಟ್ವಾಳ
* ಉಪ್ಪಿನಂಗಡಿ ಮತ್ತು ನೆಲ್ಯಾಡಿ
* ಸಕಲೇಶಪುರ
* ಹಾಸನ
* ಚನ್ನರಾಯಪಟ್ಟಣ
* ಕುಣಿಗಲ್
* ನೆಲಮಂಗಲ
* ಬೆಂಗಳೂರು
* ಹೊಸಕೋಟೆ
* ಕೋಲಾರ
* ಮುಳಬಾಗಿಲು
ರಾಷ್ಟ್ರೀಯ ಹೆದ್ದಾರಿ 209 (ಈಗ NH 948): ಇದು ಬೆಂಗಳೂರಿನಿಂದ ಕನಕಪುರ, ಮಳವಳ್ಳಿ, ಚಾಮರಾಜನಗರ ಮೂಲಕ ತಮಿಳುನಾಡಿನ ದಿಂಡಿಗಲ್ ಮತ್ತು ಕೊಯಮತ್ತೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾಗಿದೆ. ಇದು ಯಾವೆಲ್ಲಾ ಜಿಲ್ಲೆಗಳ ಮೂಲಕ ಹಾದುಹೋಗಲಿದೆ ಎಂದು ಇಲ್ಲಿ ತಿಳಿಯಿರಿ.
ಕರ್ನಾಟಕದ ಯಾವೆಲ್ಲಾ ಭಾಗಗಳಲ್ಲಿ ಹಾದುಹೋಗುತ್ತದೆ?
* ಬೆಂಗಳೂರು
* ಕಗ್ಗಲಿಪುರ
* ಹರೋಹಳ್ಳಿ
* ರಾಮನಗರ
* ಕನಕಪುರ
* ಸಾತನೂರು
* ಹಲಗೂರು
* ಮಳವಳ್ಳಿ
* ಕೊಳ್ಳೇಗಾಲ
* ಯಳಂದೂರು
* ಚಾಮರಾಜನಗರ
* ಪುಣಜನೂರು
ರಾಷ್ಟ್ರೀಯ ಹೆದ್ದಾರಿ 648: ಇದು ಬೆಂಗಳೂರು ನಗರದ ದಟ್ಟಣೆಯನ್ನು ತಪ್ಪಿಸಲು ಇರುವ ಬೈಪಾಸ್ ಹೆದ್ದಾರಿಯಾಗಿದೆ. ಇದು ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ಹೊಸಕೋಟೆಯನ್ನು ಸಂಪರ್ಕಿಸುತ್ತದೆ.
ಯಾವೆಲ್ಲಾ ಭಾಗಗಳಲ್ಲಿ ಹಾದುಹೋಗಿದೆ?
* ಸರ್ಜಾಪುರ
* ಹೊಸಕೋಟೆ
* ದೇವನಹಳ್ಳಿ
* ದೊಡ್ಡಬಳ್ಳಾಪುರ
* ನೆಲಮಂಗಲ
ಬೆಂಗಳೂರು ಮೇಲೆ ಹಾದುಹೋಗಿರುವ ಪ್ರಮುಖ ಎಕ್ಸ್‌ಪ್ರೆಸ್‌ವೇಗಳು
ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ (NH 275): ಇದು 118 ಕಿ.ಮೀ ಉದ್ದದ 10 ಪಥಗಳ ಅತ್ಯಾಧುನಿಕ ಎಕ್ಸ್‌ಪ್ರೆಸ್‌ವೇ ಆಗಿದೆ. ಇದು ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಕೇವಲ 75 ರಿಂದ 90 ನಿಮಿಷಗಳಿಗೆ ಕಡಿತಗೊಳಿಸಿದೆ.
ಯಾವೆಲ್ಲಾ ನಗರಗಳಲ್ಲಿ ಹಾದುಹೋಗುತ್ತದೆ?
* ಬಿಡದಿ
* ರಾಮನಗರ
* ಚನ್ನಪಟ್ಟಣ
* ಮಂಡ್ಯ
* ಮದ್ದೂರು
* ಶ್ರೀರಂಗಪಟ್ಟಣ
* ಮೈಸೂರು
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (NE 7): ಇದು ಹೊಸದಾಗಿ ನಿರ್ಮಾಣವಾಗುತ್ತಿರುವ ಪ್ರಮುಖ ಎಕ್ಸ್‌ಪ್ರೆಸ್‌ವೇ ಆಗಿದ್ದು, ಬೆಂಗಳೂರಿನ ಹೊಸಕೋಟೆ ಮತ್ತು ಚೆನ್ನೈ ನಡುವಿನ ದೂರ ಹಾಗೂ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇದು ಸಂಪೂರ್ಣ ನಿಯಂತ್ರಿತ ಚತುಷ್ಪಥ ರಸ್ತೆಯಾಗಿದೆ.
ಯಾವೆಲ್ಲಾ ಪ್ರಮುಖ ನಗರಗಳ ಮೇಲೆ ಹಾದುಹೋಗುತ್ತದೆ?
* ಹೊಸಕೋಟೆ
* ಮಾಲೂರು
* ಬಂಗಾರಪೇಟೆ
* ಬೇಡಮಂಗಲ
ಬೆಂಗಳೂರು ಉಪನಗರ ವರ್ತುಲ ರಸ್ತೆ (STRR - NH 948A): ನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ನಿರ್ಮಿಸಲಾಗುತ್ತಿರುವ ಬೃಹತ್ ಎಕ್ಸ್‌ಪ್ರೆಸ್‌ವೇ ಇದಾಗಿದೆ. ಇದು ಬೆಂಗಳೂರಿನ ಸುತ್ತಮುತ್ತಲಿನ ಉಪನಗರಗಳಾದ ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಅತ್ತಿಬೆಲೆ ಮತ್ತು ರಾಮನಗರವನ್ನು ಸಂಪರ್ಕಿಸುತ್ತದೆ. ಇದರ ಕೆಲವು ಹಂತಗಳು ಈಗಾಗಲೇ ಸಂಚಾರಕ್ಕೆ ಮುಕ್ತವಾಗಿವೆ.












Click it and Unblock the Notifications