Lunar Eclipse 2023: ಮಲೆ ಮಹದೇಶ್ವರ ದೇವರ ದರ್ಶನ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ
ಚಾಮರಾಜನಗರ, ಅಕ್ಟೋಬರ್, 28: ಇಂದು (ಶನಿವಾರ) ಇಂದು ಚಂದ್ರ ಗ್ರಹಣ ಹಿನ್ನೆಲೆ ಹಲವೆಡೆ ದೇವಸ್ಥಾನಗಳಲ್ಲಿ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ ಹನೂರು ತಾಲೂಕಿನ ಮಲೆ ಮಹದೇಶ್ವರ ದರ್ಶನದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಳಗ್ಗೆಯಿಂದ ರಾತ್ರಿಯವರೆಗೂ ಮಲೆ ಮಹದೇಶ್ವರ ದೇವಸ್ಥಾನ ಎಂದಿನಂತೆ ತೆರಯಲಿದ್ದು, ಮಾದಪ್ಪನ ದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಇನ್ನು ದೇವಸ್ಥಾನದ ಅರ್ಚಕರು ಮಧ್ಯ ರಾತ್ರಿ ಚಂದ್ರ ಗ್ರಹಣ ಬಳಿಕ ದೇವಸ್ಥಾನ ಶುಚಿ ಮಾಡಲಿದ್ದಾರೆ ಎಂದು ದೇವಸ್ಥಾನದ ಪ್ರದಾನ ಆಗಮಿಕ ಕರವೀರಸ್ವಾಮಿ ಮಾಹಿತಿ ನೀಡಿದ್ದಾರೆ.

ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ
ಭಾರತದಲ್ಲಿ ಚಂದ್ರ ಗ್ರಹಣ ಮಧ್ಯರಾತ್ರಿ 11:31 ಕ್ಕೆ ಪ್ರಾರಂಭವಾಗಿ ಭಾನುವಾರ ಮುಂಜಾನೆ 3:36ಕ್ಕೆ ಕೊನೆಗೊಳ್ಳುತ್ತದೆ. ಈ ಹಿನ್ನೆಲೆ ಮೈಸೂರಿನ ಚಾಮುಂಡೇಶ್ವರಿ ದೇಗುಲದಲ್ಲೂ ಸಂಜೆಯ ನಂತರ ದೇವರ ದರ್ಶಕ್ಕೆ ಅವಕಾಶ ಇಲ್ಲ ಎಂದು ದೇವಾಲಯದ ಸಮಿತಿ ತಿಳಿಸಿದೆ.
ಭಾರತ ಸೇರಿದಂತೆ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಅಮೆರಿಕ, ಉತ್ತರ ಅಮೆರಿಕ, ಉತ್ತರ/ಪೂರ್ವ ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕಾದ ಕೆಲವು ಭಾಗಗಳಲ್ಲಿಯೂ ಚಂದ್ರಗ್ರಹಣ ಗೋಚರಿಸುತ್ತದೆ. ರಾಜ್ಯದ ಹಲವು ಪ್ರಮುಖ ದೇಗುಲಗಳಲ್ಲಿ ಸಂಜೆಯಿಂದ ದೇವರ ದರ್ಶನ ವ್ಯವಸ್ಥೆ ನಿಲ್ಲಿಸಲಾಗಿದೆ. ಹಾಗೆಯೇ ಮೈಸೂರಿನ ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇಂದು ಸಂಜೆ 6 ಗಂಟೆಯ ನಂತರ ಭಕ್ತಾದಿಗಳಿಗೆ ದರ್ಶನ ವ್ಯವಸ್ಥೆ ಇರುವುದಿಲ್ಲ.
ಶನಿವಾರ ಸಂಜೆ ಮಾತ್ರ ದರ್ಶನ ವ್ಯವಸ್ಥೆ ಇರುವುದಿಲ್ಲ. ಅಕ್ಟೋಬರ್ 29ರ ಭಾನುವಾರ ಬೆಳಗ್ಗೆ 7:30ರಿಂದ ಮತ್ತೆ ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಕಾರ್ಯಾಲಯವು ಪ್ರಕಟಣೆ ಹೊರಡಿಸಿದೆ.












Click it and Unblock the Notifications