Lunar Eclipse 2023: ಉಜ್ಜಯಿನಿಯಲ್ಲಿ ಚಂದ್ರಗ್ರಹಣದ ವಿಶೇಷತೆ ಏನು?
ವರ್ಷದ ಮೊದಲ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಈ ಚಂದ್ರಗ್ರಹಣ ಹಿಂದೂ ಸಂಪ್ರದಾಯದಲ್ಲಿ ಭಾರೀ ಮಹತ್ವವನ್ನು ಪಡೆದುಕೊಂಡಿದೆ. ಧಾರ್ಮಿಕ ನಗರಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಚಂದ್ರಗ್ರಹಣ ವಿಶೇಷವಾಗಿ ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಹೆಚ್ಚಿನ ದೇವಸ್ಥಾನಗಳನ್ನು ಮುಚ್ಚಲಾಗುತ್ತದೆ. ಗ್ರಹಣ ನಡೆಯುವಾಗ ದೇವಸ್ಥಾನಗಳನ್ನು ತೆರೆದಿರುವುದಿಲ್ಲ. ಕೆಲವೆಡೆ ಪವಿತ್ರ ನದಿಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ, ಬಳಿಕ ಸ್ನಾನ ಮಾಡುವ ಪದ್ಧತಿ ಇದೆ. ಉಜ್ಜಯಿನಿಯಲ್ಲಿ ಚಂದ್ರಗ್ರಹಣ ವಿಶೇಷತೆಯನ್ನು ಪಡೆದುಕೊಂಡಿದೆ.
ವರ್ಷದ ಮೊದಲ ಚಂದ್ರಗ್ರಹಣ ಮೇ5 ರಂದು ರಾತ್ರಿ 08.45 ಕ್ಕೆ ಸಂಭವಿಸಲಿದೆ. ಇದು ಮೇ 6 ರಂದು ರಾತ್ರಿ 1.00 ಗಂಟೆಗೆ ಕೊನೆಗೊಳ್ಳುತ್ತದೆ. ಭಾರತದಲ್ಲಿ ಚಂದ್ರಗ್ರಹಣ ಗೋಚರಿಸುವುದಿಲ್ಲವಾದ್ದರಿಂದ ಇಲ್ಲಿ ಸೂತಕವೂ ಇರುವುದಿಲ್ಲ. ವಿಜ್ಞಾನದ ಪ್ರಕಾರ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ರೇಖೆಯಲ್ಲಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ. ವೈಶಾಖ ಪೂರ್ಣಿಮೆಯಂದು ಸಂಭವಿಸುವ ಚಂದ್ರಗ್ರಹಣ ನೆರಳು ಚಂದ್ರಗ್ರಹಣವಾಗಿರುತ್ತದೆ. ಈ ಬಾರಿ ಸಂಭವಿಸುವ ಪೆನಂಬ್ರಲ್ ಚಂದ್ರಗ್ರಹಣವಾಗಿದೆ.

ವರ್ಷದ ಮೊದಲ ಚಂದ್ರಗ್ರಹಣ ಮುಗಿದ ಕೂಡಲೇ ಧಾರ್ಮಿಕ ನಗರಿ ಉಜ್ಜಯಿನಿಯ ಮೋಕ್ಷದಾಯಿನಿ ಶಿಪ್ರಾ ನದಿಯ ದಡದಲ್ಲಿ ಭಕ್ತರ ಮಹಾಪೂರವೇ ಹರಿದು ಬರುತ್ತದೆ. ಮೋಕ್ಷದಾಯಿನಿ ಕ್ಷಿಪ್ರ ನದಿಯಲ್ಲಿ ಸ್ನಾನ ಮಾಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ರಾಮ್ ಘಾಟ್ ಮತ್ತು ತ್ರಿವೇಣಿ ಘಾಟ್ ಜೊತೆಗೆ, ಎಲ್ಲಾ ಘಾಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸ್ನಾನಕ್ಕಾಗಿ ಆಗಮಿಸುತ್ತಾರೆ.
ಮೋಕ್ಷದಾಯಿನಿ ಕ್ಷಿಪ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳೆಲ್ಲವೂ ದೂರವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ವಿಶೇಷವಾಗಿ ಗ್ರಹಣ ಮುಗಿದ ನಂತರ ಮಾಡುವ ಸ್ನಾನ ತುಂಬಾ ಪ್ರಮುಖವಾಗಿದೆ. ಹೀಗಾಗಿ ವರ್ಷದ ಮೊದಲ ಚಂದ್ರಗ್ರಹಣ ಮುಗಿದ ಕೂಡಲೆ ಹೆಚ್ಚಿನ ಸಂಖ್ಯೆಯ ಜನರು ಮೋಕ್ಷದಾಯಿನಿ ಕ್ಷಿಪ್ರ ನದಿಯಲ್ಲಿ ಸ್ನಾನ ಮಾಡಲು ಬೆಳಿಗ್ಗೆಯಿಂದಲೇ ಕಾಯುತ್ತಾರೆ. ಗ್ರಹಣ ಮುಗಿದ ಕೆಲವೇ ಸಮಯದಲ್ಲಿ ಭಕ್ತರ ದಿಂಡೇ ಪವಿತ್ರ ನದಿಯತ್ತ ಆಗಮಿಸುತ್ತದೆ. ಈ ವೇಳೆ ನದಿಗೂ ಪೂಜೆ ಸಲ್ಲಿಸಲಾಗುತ್ತದೆ.
ದಿನವಿಡೀ ಸ್ನಾನ
ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ನಾನಕ್ಕಾಗಿ ರಾಮಘಾಟ್ ಮತ್ತು ಇತರ ಸ್ಥಳಗಳಿಂದ ಆಗಮಿಸುತ್ತಾರೆ. ದಿನವಿಡೀ ಭಕ್ತರು ಆಗಮಿಸಿ ಇಲ್ಲಿ ಸ್ನಾನ ಪೂಜಾ ಕಾರ್ಯಗಳನ್ನು ಮುಗಿಸುತ್ತಾರೆ. ನರ್ಮದಾ ನದಿಯ ದಡದಲ್ಲೂ ಇದೇ ಚಿತ್ರಣ ಕಂಡು ಬರುತ್ತದೆ. ವರ್ಷದ ಮೊದಲ ಚಂದ್ರಗ್ರಹಣ ರಾತ್ರಿ ಮುಗಿಯುತ್ತದೆ. ಬೆಳಿಗ್ಗೆ ಜನ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಾರೆ. ಓಂಕಾರೇಶ್ವರ ಮತ್ತು ಖಾಲ್ ಘಾಟ್ ಸೇರಿದಂತೆ ಎಲ್ಲಾ ಘಾಟ್‌ಗಳಲ್ಲಿ ಭಕ್ತರು ಆಗಮಿಸಿ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.

ಮಹಾಕಾಲ ದೇವಸ್ಥಾನದಲ್ಲಿ ಶುದ್ಧೀಕರಣ
ಧಾರ್ಮಿಕ ನಗರಿ ಉಜ್ಜಯಿನಿಯಲ್ಲಿರುವ ವಿಶ್ವವಿಖ್ಯಾತ ಬಾಬಾ ಮಹಾಕಾಳೇಶ್ವರ ದೇವಾಲಯದಲ್ಲಿ ಗ್ರಹಣದ ಅಂತ್ಯದಲ್ಲಿ ದೇವಾಲಯದ ಆವರಣದ ಶುದ್ಧೀಕರಣ ನಡೆಸಲಾಗುತ್ತದೆ. ಅಲ್ಲಿ ದೇವಾಲಯದ ಆಡಳಿತ ಮಂಡಳಿಯ ನೌಕರರು ದೇವಾಲಯದ ಆವರಣವನ್ನು ನೀರಿನಿಂದ ತೊಳೆಯುತ್ತಾರೆ. ಇದೇ ವೇಳೆ ಗ್ರಹಣ ಮುಗಿದ ಕೂಡಲೇ ಅರ್ಚಕರು ಬಾಬಾ ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸುತ್ತಾರೆ. ಸೂರ್ಯಗ್ರಹಣವಾಗಲಿ, ಚಂದ್ರಗ್ರಹಣವಾಗಲಿ ಮಹಾಕಾಳೇಶ್ವರ ದೇವಸ್ಥಾನದ ಬಾಗಿಲು ಮುಚ್ಚುವುದಿಲ್ಲ. ಆದರೆ ಅಲ್ಲಿ ಗರ್ಭ ಸ್ಪರ್ಶ ನಿಲ್ಲುತ್ತದೆ. ನಂತರ ಸಾಮಾನ್ಯ ಭಕ್ತರಿಗೆ ದರ್ಶನ ಮುಂದುವರಿಯುತ್ತದೆ. ಗ್ರಹಣ ಮುಗಿದ ನಂತರ, ದೇವಾಲಯದ ಆವರಣವನ್ನು ಶುದ್ಧೀಕರಿಸಲಾಗುತ್ತದೆ. ನಂತರ ಅರ್ಚಕರು ಮಹಾಕಾಳೇಶ್ವರನನ್ನು ಪೂಜಿಸುತ್ತಾರೆ.












Click it and Unblock the Notifications