ಭಾನುವಾರ ಸೂರ್ಯೋದಯದವರೆಗೂ ಬೆಂಗಳೂರಿನ ಪ್ರಮುಖ ದೇವಾಲಯಗಳು ಕ್ಲೋಸ್, ಯಾಕೆ ಗೊತ್ತಾ?
ಬೆಂಗಳೂರು, ಅಕ್ಟೋಬರ್, 28: ಇಂದು (ಶನಿವಾರ) ಈ ವರ್ಷದ ಕೊನೆಯ ಚಂದ್ರ ಗ್ರಹಣ ಸಂಭವಿಸಲಿದ್ದು, ಖಗೋಳ ವಿಸ್ಮಯಕ್ಕೆ ಜನರೆಲ್ಲಾ ಕೌತುಕದಿ ಕಾಯುತ್ತಿದ್ದಾರೆ. ಇತ್ತ ದೇವಾಲಯಗಳಲ್ಲಿ ಕೂಡ ದೇವರಿಗೆ ವಿಶೇಷ ಪೂಜೆ ಮಾಡಿ ವಿವಿಧ ಅಭಿಷೇಕ ನಡೆಸಿ ದೇವರನ್ನು ದರ್ಬೆರ್ಯಲ್ಲಿ ಬಂಧಿಸಿ ಇಡಲಾಗಿದೆ. ನಗರದ ಪ್ರಮುಖ ದೇವಾಲಯಗಳು ಇಂದು ಸಂಜೆ 6 ಗಂಟೆಯ ಬಳಿಕ ಕ್ಲೋಸ್ ಇರಲಿದೆ. ವಿಶೇಷ ಪೂಜೆ ಮಾಡಲು ಭಕ್ತ ಬಾಂಧವರು ನಾಳೆ ಸೂರ್ಯೋದಯದ ಬಳಿಕ ದೇವಾಲಯಕ್ಕೆ ಎಂಟ್ರಿ ಕೊಡಬೇಕು.
ಸೂರ್ಯೋದಯ ಆಗುವ ಮುನ್ನ ದೇವಾಲಯಗಳು ಕ್ಲೀನ್ ಮಾಡಲಿದ್ದು, ವಿಶೇಷ ಪೂಜೆ ಕೂಡ ನಾಳೆ ದೇವಾಲಯದಲ್ಲಿ ನಡೆಯಲಿದೆ. ಇನ್ನು ಇವತ್ತಿನ ಚಂದ್ರಗ್ರಹಣ ಲೈವ್ ಆಗಿ ನೋಡಲು ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ವಿಶೇಷ ವ್ಯವಸ್ಥೆ ಕೂಡ ಮಾಡಲಾಗಿದೆ.
ಇತ್ತಾ ಜವಾಹರ್ ಲಾಲ್ ನೆಹರು ತಾರಲಾಯದಲ್ಲಿ ಕೂಡ ಚಂದ್ರಗ್ರಹಣ ಲೈವ್ ವೀಕ್ಷಣೆಗೆ ಅವಕಾಶ ಮಾಡಿ ಕೊಡಲಾಗುತ್ತದೆ. ರಾತ್ರಿ 11 ಗಂಟೆಯಿಂದ ತಾರಾಲಯ ಓಪನ್ ಇದ್ದು, 11:31ರಿಂದ ಗ್ರಹಣ ಆರಂಭವಾಗಲಿದೆ. ತಡರಾತ್ರಿ 1 ಗಂಟೆ 5 ನಿಮಿಷದಿಂದ 2 ಗಂಟೆ 24 ನಿಮಿಷದರವರೆಗೆ ಚಂದ್ರ ಗ್ರಹಣ ಗೋಚರವಾಗಲಿದ್ದು, ಹಿರಿಯ ಕಿರಿಯ ಎಲ್ಲಾ ವಯೋಮಾನದವರು ಗ್ರಹಣ ನೋಡಲು ಅನುಮತಿಯಿದೆ. ಯಾವುದೇ ಅನುಮಾನಗಳು ಇದ್ದರೂ ಹಿರಿಯ ವಿಜ್ಞಾನಿಗಳು ಬಗೆ ಹರಿಸಲಿದ್ದಾರೆ. ಗ್ರಹಣ ಆಗೋದ್ರಿಂದ ಆಗುವ ಬದಲಾವಣೆ ಬಗ್ಗೆ ವಿವರಿಸುತ್ತಾರೆ. ಸಂವಾದ ಕಾರ್ಯಕ್ರಮ ಕೂಡ ನಡೆಯಲಿದೆ.

ಸಾಮಾನ್ಯವಾಗಿ ತಾರಾಲಾಯದಲ್ಲಿ ಗ್ರಹಣ ವೀಕ್ಷಣೆಗೆ ಪ್ರತ್ಯೇಕ ವೀಡಿಯೋ ವಾಲ್ ನಿರ್ಮಾಣ ಮಾಡಿ ಇಡುತ್ತಾರೆ. ಜನರಿಗೆ ನೋಡಲು ಅನುಕೂಲ ಆಗುವ ನಿಟ್ಟಿನಲ್ಲಿ 2/3 ವೀಡಿಯೋ ವಾಲ್ ಹಾಕ್ತಾರೆ. ಆದರೆ ಈ ಸಲ ನೇರವಾಗಿ ಕಣ್ಣಿಗೆ ಕಾಣುವ ಗ್ರಹಣ ಆಗಿರುವುದರಿಂದ ಅದರ ಜೊತೆಗೆ ತಡರಾತ್ರಿ ಹೊತ್ತಲ್ಲಿ ಗ್ರಹಣ ಗೋಚರ ಆಗಿರುವುದರಿಂದ ಬಹುತೇಕ ಮಂದಿ ನಿದ್ರೆಗೆ ಜಾರಿರುತ್ತಾರೆ. ಈ ಹಿನ್ನಲೆ ಹೊರಗಡೆ ವೀಡಿಯೋ ವಾಲ್ ವ್ಯವಸ್ಥೆ ಇಲ್ಲ.
ಇನ್ನೂ ಗ್ರಹಣವನ್ನು ಬರಿಯ ಕಣ್ಣಿಂದ ಕೂಡ ನೋಡಲು ಅವಕಾಶ ಇದೆ. ಚಿಕ್ಕ ಮಕ್ಕಳು ದೊಡ್ಡವರು ಎಲ್ಲಾ ವಯೋಮಾನದವರು ಕೂಡ ಈ ಗ್ರಹಣ ನೋಡಬಹುದು.












Click it and Unblock the Notifications