Lunar Eclipse on Holi 2024: 100 ವರ್ಷಗಳ ನಂತರ ಹೋಳಿಯಂದು ಚಂದ್ರಗ್ರಹಣ: ಈ 3 ರಾಶಿಯವರು ಎಚ್ಚರದಿಂದಿರಿ..!
ಈ ವರ್ಷ ಹೋಳಿಯಂದು ಚಂದ್ರಗ್ರಹಣ ನಡೆಯಲಿದೆ. ಇದು 100 ವರ್ಷಗಳ ನಂತರ ಸಂಭವಿಸಲಿದ್ದು ಕೆಲ ರಾಶಿಯವರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಜ್ಯೋತಿಷ್ಯದ ಪ್ರಕಾರ ಗ್ರಹಣಗಳು ಮಾನವ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ.
ಒಂದು ವರ್ಷದಲ್ಲಿ ಒಟ್ಟು 4 ಗ್ರಹಣಗಳು ಸಂಭವಿಸುತ್ತವೆ. ಅದರಲ್ಲಿ 2 ಚಂದ್ರಗ್ರಹಣಗಳು ಮತ್ತು 2 ಸೂರ್ಯಗ್ರಹಣಗಳು. ಅದರಂತೆ 2024ರ ಮೊದಲ ಚಂದ್ರಗ್ರಹಣ ಮಾರ್ಚ್ 25ರಂದು ಸಂಭವಿಸಲಿದೆ. ಈ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಚಂದ್ರಗ್ರಹಣವು ಬೆಳಗ್ಗೆ 10.23 ರಿಂದ ಮಧ್ಯಾಹ್ನ 3.20 ರವರೆಗೆ ಇರುತ್ತದೆ.
ಈ ಚಂದ್ರಗ್ರಹಣದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ 3 ರಾಶಿಯವರಿಗೆ ಈ ಅವಧಿಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ಆರ್ಥಿಕ ನಷ್ಟ ಮತ್ತು ಆರೋಗ್ಯ ಸಮಸ್ಯೆಗಳ ಸಾಧ್ಯತೆಯೂ ಇದೆ. ಹಾಗಾದರೆ ಚಂದ್ರಗ್ರಹಣದಿಂದಾಗಿ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯೋಣ.

ಕರ್ಕಾಟಕ ರಾಶಿ
ಹೋಳಿಯ ದಿನ ಸಂಭವಿಸುವ ಚಂದ್ರಗ್ರಹಣ ಕರ್ಕಾಟಕ ರಾಶಿಯವರಿಗೆ ತೊಂದರೆಗಳನ್ನು ತರುತ್ತದೆ. ವಿಶೇಷವಾಗಿ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲಬಹುದು. ಕೆಲವರು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಈ ಅವಧಿಯಲ್ಲಿ ಯಾವುದೇ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ನೀವು ಬಹಳಷ್ಟು ಅನಗತ್ಯ ಖರ್ಚುಗಳನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಹೃದ್ರೋಗ ಇರುವವರು ಈ ಅವಧಿಯಲ್ಲಿ ಜಾಗರೂಕರಾಗಿರಬೇಕು.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಚಂದ್ರಗ್ರಹಣ ಹಾನಿಕಾರಕವಾಗಿದೆ. ಈ ಸಮಯದಲ್ಲಿ ನಿಮಗೆ ಕೆಲಸ ಮಾಡದಂತ ಸಂದರ್ಭ ಎದುರಾಗಬಹುದು. ಕುಟುಂಬಸ್ಥರ ಹಿರಿಯರ ಆರೋಗ್ಯ ಹದಗೆಡಬಹುದು. ನಿಮ್ಮ ಆರೋಗ್ಯದಲ್ಲಿ ಸಹ ನೀವು ಸಮಸ್ಯೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ.
ನಗದು ವಹಿವಾಟುಗಳನ್ನು ಸಹ ತಪ್ಪಿಸಿ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಜಂಟಿ ಉದ್ಯಮಿಗಳು ಜಾಗರೂಕರಾಗಿರಬೇಕು. ನೌಕರರು ಕಚೇರಿಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಿರುವುದರಿಂದ ಅಜಾಗರೂಕತೆಯಿಂದ ದೂರವಿರಲು ಸಲಹೆ ನೀಡಲಾಗುತ್ತದೆ.

ಮೀನ ರಾಶಿ
ಮೀನ ರಾಶಿಯವರಿಗೆ ಹೋಳಿಯಂದು ಸಂಭವಿಸುವ ಚಂದ್ರಗ್ರಹಣ ಪ್ರತಿಕೂಲವಾಗಿರುತ್ತದೆ. ಆರೋಗ್ಯ ಹದಗೆಡಲಿದೆ. ಚಾಲನೆ ಮಾಡುವಾಗ ಜಾಗರೂಕರಾಗಿರುವುದು ಒಳ್ಳೆಯದು. ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು. ಕೆಲವರು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಕಷ್ಟವಾಗಬಹುದು. ಈ ಸಮಯದಲ್ಲಿ ಯಾವುದೇ ಹೊಸ ವ್ಯಾಪಾರ ವ್ಯವಹಾರಗಳನ್ನು ಮಾಡಬೇಡಿ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿರುವ ಸಾಧ್ಯತೆಯಿರುವುದರಿಂದ ಮಾತನಾಡುವಾಗ ಜಾಗರೂಕರಾಗಿರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications