Samsung: ಮಾರುಕಟ್ಟೆ ಗ್ರ್ಯಾಂಡ್ ಎಂಟ್ರಿ ನೀಡಿದೆ ನ್ಯೂ ಫೋನ್
ಮಾರುಕಟ್ಟೆಯಲ್ಲಿ ಹಲವು ಕಂಪನಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ಈ ಸಾಲಿಗೆ ಸ್ಯಾಮ್‌ಸಾಂಗ್ ಮತ್ತೊಂದು ಫೋನ್ ಲಾಂಚ್ ಮಾಡಿದೆ. ಈ ಫೋನ್ ಪವರ್ ಫುಲ್ ಬ್ಯಾಟರ್ ಹೊಂದಿದೆ ಎಂದು ತಿಳಿಸಿದೆ.
ಸ್ಯಾಮ್‌ಸಾಂಗ್ ಸಹ ಇತರ ಕಂಪನಿಗಳಂತೆ ತಂತ್ರಜ್ಞಾನವನ್ನು ಅಪ್‌ಡೇಟ್ ಮಾಡುತ್ತಾ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಲೆ ಇರುತ್ತದೆ. ಈ ಸಾಲಿಗೆ ಹೊಸ ಎಂಟ್ರಿ Galaxy C55. ಈ ಫೋನ್‌ನಲ್ಲಿ ಕ್ವಾಲ್ಕಮ್ ಪ್ರೋಸೆಸರ್ ಹೊಂದಿರಲಿದೆ. ಮಾರುಕಟ್ಟೆಯಲ್ಲಿರುವ ಮೊಬೈಲ್‌ಗೆ ಪೈಪೋಟಿ ನೀಡಲು ಬೇಕಾದ ಎಲ್ಲ ಲಕ್ಷಣಗಳು ಈ ಮೊಬೈಲ್‌ನಲ್ಲಿವೆ. ಈ ನೂತನ ಮೊಬೈಲ್ ಕಪ್ಪು ಹಾಗೂ ಕೇಸರಿ ಬಣ್ಣದಲ್ಲಿ ಲಭ್ಯವಿದೆ.

ಸ್ಯಾಮಸಾಂಗ್ ಗ್ಯಾಲಕ್ಸಿ ಸಿ 55 ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮ್ಲೋಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್‌ನ ರಿಫ್ರೇಶ್ ರೇಟ್ 120Hz ಇದೆ. ಈ ನೂತನ ಸ್ಮಾರ್ಟ್‌ಫೋನ್ 1080x2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಅಲ್ಲದೆ 1000 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ. ಇನ್ನು ಈಫೋನ್ ವಿಶೇಷತೆ ಅಂದರೆ ಈ ಫೋನ್‌ನಲ್ಲಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ. ಈ ಸ್ಮಾರ್ಟ್‌ಫೋನ್ ತೂಕ ಸುಮಾರು 180 ಗ್ರಾಮ್.
ಸ್ಯಾಮ್ಸಂಗ್ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರ್ಯಾಗನ್ 7 Gen 1 ಚಿಪ್‌ಸೆಟ್ ಅನ್ನು ಹೊಂದಿದೆ. ಅಲ್ಲದೆ ಈ ಫೋನ್ 12 ಜಿಬಿ ರ್ಯಾಮ್ ಹೊಂದಿರಲಿದ್ದು, 256 ಜಿಬಿ ಇಂಟರ್ನಲ್ ಸ್ಟೋರೆಜ್ ಹೊಂದಿರಲಿದೆ. ಸ್ಯಾಮ್ ಸಂಗ್ ಫೋನ್ ಮೈಕ್ರೊ ಎಸ್ ಡಿ ಕಾರ್ಡ್ ಸ್ಲಾಟ್ ಸಹ ಹೊಂದಿದೆ. ಇನ್ನು ಈ ಹೊಸ ಫೋನ್ ಆಂಡ್ರಯಡ್ 14 ಅನ್ನು ಬೆಂಬಲಿಸುತ್ತದೆ.

ಕ್ಯಾಮೆರಾ ಹೇಗಿದೆ?
ಸ್ಯಾಮ್‌ಸಾಂಗ್ ಸಿ55 ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನ್ ಒಂದೇ ಲೈನ್‌ನಲ್ಲಿ ಕ್ಯಾಮೇರಾಗಳನ್ನು ಜೊಡಿಸಿದೆ. ಸ್ಮಾರ್ಟ್‌ಫೋನ್ ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಇದೆ. ಇನ್ನು ಅಲ್ಟ್ರಾ ವೈಡ್ ಪಿಚ್ಶರ್ ಕ್ಯಾಪ್ಚರ್ ಮಾಡಲು 8 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಅಲ್ಲದೆ ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸಲ್ ಹೊಂದಿದೆ. ಸೆಲ್ಫಿ ಹಾಗೂ ವಿಡಿಯೋ ಕಾಲ್‌ಗಾಗಿ 50 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ.
ಬ್ಯಾಟರಿ ಎಷ್ಟು ವ್ಯಾಟ್?
ಸ್ಯಾಮ್‌ಸಂಗ್ ಗ್ಯಾಲಕ್ಸಿ ಸಿ 55 ಸ್ಮಾರ್ಟ್‌ಫೋನ್ 5000 ಎಂಎಎಚ್ ಬ್ಯಾಟರಿಯನ್ನು ಹೊಂದಿರಲಿದೆ. ಅಲ್ಲದೆ 45 ವ್ಯಾಟ್ ವೇಗದ ಚಾರ್ಜಿಂಗ್‌ಗೆ ಈ ಫೋನ್ ಸಪೋರ್ಟ್ ಮಾಡುತ್ತದೆ.ಈ ಸ್ಯಾಮ್ಸಂಗ್ ಫೋನ್ ಅನ್ನು ಚೀನಾದಲ್ಲಿ 1999 ಯುವಾನ್ (ಸುಮಾರು ರೂ. 23,010) ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿದೆ.
ಈಗಾಗಲೇ ಸ್ಯಾಮ್ ಸ್ಯಾಂಗ್ ಕಂಪನಿಯ ವಿವಿಧ ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು ಈ ಸಾಲಿಗೆ ಈಗ ಲೆಟೆಸ್ಟ್ ಆಗಿ ಇನ್ನೊಂದು ಫೋನ್ ಸೇರಿದೆ.












Click it and Unblock the Notifications