Lunar Eclipse Start: ಚಂದ್ರಗ್ರಹಣ ನಗರವಾರು ಗೋಚರಿಸುವ ಸಮಯ ತಿಳಿಯಿರಿ...
2023ನೇ ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣ ಆರಂಭವಾಗಿದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ನೇರವಾಗಿ ಹಾದುಹೋಗುವ ಆಕಾಶದ ವಿದ್ಯಾಮಾನವನ್ನು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ.
ಈ ವೇಳೆ ಸೂರ್ಯ, ಭೂಮಿ ಮತ್ತು ಚಂದ್ರರು ನೇರ ರೇಖೆಯಲ್ಲಿ ಇರುತ್ತವೆ. ಭೂಮಿ ಇವೆರಡರ ಮಧ್ಯ ಸಂಪೂರ್ಣವಾಗಿ ಬಂದಾಗ ಮಾತ್ರ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರಗ್ರಹಣ ಹುಣ್ಣಿಮೆಯ ದಿನ ಸಂಭವಿಸಲಿದ್ದು, ಈ ಬಾರಿಯ ಗ್ರಹಣ ಭಾರತದಲ್ಲಿ ಗೋಚರಿಸುತ್ತದೆ.

ಚಂದ್ರಗ್ರಹಣ ಸಮಯ
ಭಾಗಶಃ ಚಂದ್ರಗ್ರಹಣ ಅಕ್ಟೋಬರ್ 28 ರ ಶನಿವಾರದಂದು ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 29 ರ ಭಾನುವಾರದವರೆಗೆ ಮುಂದುವರಿಯುತ್ತದೆ. ಅಕ್ಟೋಬರ್ 28 ರಂದು ಚಂದ್ರನು ಭೂಮಿಯ ನೆರಳಿನಲ್ಲಿ ಬೀಳುತ್ತಾನೆ. ಭಾನುವಾರದ ಮುಂಜಾನೆ ಅದು ಅಂಬ್ರಾ ನೆರಳು ಪ್ರದೇಶವನ್ನು ಪ್ರವೇಶಿಸುತ್ತದೆ.
ಭಾರತದಲ್ಲಿ ಚಂದ್ರಗ್ರಹಣ ಅಕ್ಟೋಬರ್ 28ರ ಶನಿವಾರದಂದು ರಾತ್ರಿ 11:31ಕ್ಕೆ ಪ್ರಾರಂಭವಾಗುತ್ತದೆ. ಭಾನುವಾರದಂದು ಬೆಳಗ್ಗೆ 1:05ಕ್ಕೆ, ಭೂಮಿಯ ನೆರಳು ಚಂದ್ರನನ್ನು ಆವರಿಸುತ್ತದೆ. ಭಾನುವಾರ ಅಕ್ಟೋಬರ್ 29 ರಂದು ಬೆಳಿಗ್ಗೆ 1:05ಕ್ಕೆ ಭೂಮಿಯ ನೆರಳು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿ ಬೆಳಿಗ್ಗೆ 2:24ಕ್ಕೆ ಬಿಡುತ್ತದೆ. ಇದರ ಒಟ್ಟು ಅವಧಿ ಸುಮಾರು 1 ಗಂಟೆ ಮತ್ತು 19 ನಿಮಿಷಗಳವರೆಗೆ ಇರುತ್ತದೆ.
ಅಕ್ಟೋಬರ್ 28ರ ಶನಿವಾರದಂದು ಭಾರತ ಮತ್ತು ಏಷ್ಯಾ ಖಂಡದಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಾರ, ಚಂದ್ರಗ್ರಹಣವು ಭಾರತದ ಎಲ್ಲಾ ಭಾಗಗಳಲ್ಲಿ ಗೋಚರಿಸುತ್ತದೆ.
ಚಂದ್ರಗ್ರಹಣ 2023: ನಗರವಾರು ಸಮಯಗಳು:-
*ದೆಹಲಿ: ಅಕ್ಟೋಬರ್ 29, 2023 ರಂದು 1:06 AM ಕ್ಕೆ ಪ್ರಾರಂಭವಾಗುತ್ತದೆ ಮತ್ತು 2:22 AM ಕ್ಕೆ ಮುಕ್ತಾಯಗೊಳ್ಳುತ್ತದೆ.
*ಉತ್ತರ ಪ್ರದೇಶ: ಅಕ್ಟೋಬರ್ 29, 2023 ರಂದು 1:06 AM ಮತ್ತು 2:22 AM ಕ್ಕೆ ಮುಕ್ತಾಯಗೊಳ್ಳುತ್ತದೆ.
*ಅಸ್ಸಾಂ: ಅಕ್ಟೋಬರ್ 29, 2023 ರಂದು 1:06 AM ಕ್ಕೆ ಪ್ರಾರಂಭವಾಗುತ್ತದೆ ಮತ್ತು 2:22 AM ಕ್ಕೆ ಮುಕ್ತಾಯಗೊಳ್ಳುತ್ತದೆ.
*ಬೆಂಗಳೂರು: ಅಕ್ಟೋಬರ್ 29, 2023 ರಂದು 1:06 AM ಕ್ಕೆ ಪ್ರಾರಂಭವಾಗುತ್ತದೆ ಮತ್ತು 2:22 AM ಕ್ಕೆ ಮುಕ್ತಾಯವಾಗುತ್ತದೆ.
*ಮುಂಬೈ: ಅಕ್ಟೋಬರ್ 29, 2023 ರಂದು 1:06 AM ಕ್ಕೆ ಪ್ರಾರಂಭವಾಗಿ 2:22 AM ಕ್ಕೆ ಕೊನೆಗೊಳ್ಳುತ್ತದೆ.
*ಹೈದರಾಬಾದ್: ಅಕ್ಟೋಬರ್ 29, 2023 ರಂದು 1:06 AM ಕ್ಕೆ ಪ್ರಾರಂಭಗೊಂಡು 2:22 AM ಕ್ಕೆ ಮುಕ್ತಾಯಗೊಳ್ಳುತ್ತದೆ.
*ಇಂದೋರ್: ಅಕ್ಟೋಬರ್ 29, 2023 ರಂದು 1:06 AM ಕ್ಕೆ ಪ್ರಾರಂಭವಾಗಿ 2:22 AM ಕ್ಕೆ ಮುಕ್ತಾಯವಾಗುತ್ತದೆ.
*ಚೆನ್ನೈ: ಅಕ್ಟೋಬರ್ 29, 2023 ರಂದು 1:06 AM ಮತ್ತು 2:22 AM ಕ್ಕೆ ಮುಕ್ತಾಯಗೊಳ್ಳುತ್ತದೆ.
*ಲಕ್ನೋ: ಅಕ್ಟೋಬರ್ 29, 2023 ರಂದು 1:06 AM ಕ್ಕೆ ಪ್ರಾರಂಭವಾಗುತ್ತದೆ ಮತ್ತು 2:22 AM ಕ್ಕೆ ಮುಕ್ತಾಯಗೊಳ್ಳುತ್ತದೆ.
*ಪಾಟ್ನಾ: ಅಕ್ಟೋಬರ್ 29, 2023 ರಂದು 1:06 AM ಕ್ಕೆ ಪ್ರಾರಂಭವಾಗುತ್ತದೆ ಮತ್ತು 2:22 AM ಕ್ಕೆ ಮುಕ್ತಾಯಗೊಳ್ಳುತ್ತದೆ.
*ಮಧ್ಯಪ್ರದೇಶ: ಅಕ್ಟೋಬರ್ 29, 2023 ರಂದು 1:06 AM ಕ್ಕೆ ಪ್ರಾರಂಭವಾಗಿ 2:22 AM ಕ್ಕೆ ಮುಕ್ತಾಯಗೊಳ್ಳುತ್ತದೆ.
ಚಂದ್ರಗ್ರಹಣ 2023: ಎಲ್ಲಿ ನೋಡಲಾಗುವುದಿಲ್ಲ
ಚಂದ್ರಗ್ರಹಣ ಅಮೇರಿಕಾದಲ್ಲಿ ಕಾಣಿಸುವುದಿಲ್ಲ. ದಕ್ಷಿಣ ಅಮೆರಿಕಾದ ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಬ್ರೆಜಿಲ್‌ನಲ್ಲಿರುವವರು ಚಂದ್ರಗ್ರಹಣವನ್ನು ವೀಕ್ಷಿಸಬಹುದು.












Click it and Unblock the Notifications