ಉತ್ತರಪ್ರದೇಶ ಚುನಾವಣಾ ಸಮೀಕ್ಷೆ: ಜಾತಿ ಲೆಕ್ಕಾಚಾರದಲ್ಲಿ ಯಾರು ಮುಂದೆ?

Written By:
Subscribe to Oneindia Kannada

ನವದೆಹಲಿ, ಫೆ 8: ಇನ್ನೇನು ಮೂರು ದಿನದಲ್ಲಿ (ಫೆ 11) ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಖಾಸಗಿ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಅಲ್ಲಿ ಅನುಕೂಲಕರವಾದ ವಾತಾವರಣವಿದೆ.

ಫೋರ್ತ್ ಲಯನ್ ಟೆಕ್ನಾಲಜೀಸ್ ಸಂಸ್ಥೆ ದೂರವಾಣಿ ಮೂಲಕ ನಡೆಸಿದ ಸಮೀಕ್ಷೆಯಲ್ಲಿ, ಬಿಜೆಪಿ ತನ್ನ ಸಮೀಪದ ಎದುರಾಳಿಗಳಾದ ಎಸ್ಪಿ- ಕಾಂಗ್ರೆಸ್ ಮೈತ್ರಿಕೂಟಕ್ಕಿಂತ ಮುಂದಿದೆ ಎಂದು ಸರ್ವೇಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಆದರೆ ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ. 40ರಷ್ಟು ಜನ, ಚುನಾವಣೆ ಹತ್ತಿರದಲ್ಲಿದ್ದರೂ ಯಾವ ಪಕ್ಷಕ್ಕೆ ಮತ ನೀಡಬೇಕು ಎನ್ನುವ ಗೊಂದಲದಲ್ಲಿದ್ದಾರೆ.

Uttar Pradesh polls 2017: 40 per cent voters undecided, BJP in lead, claims survey

ಒಟ್ಟಾರೆ ಫಲಿತಾಂಶದ ಪ್ರಕಾರ, ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಬಿಜೆಪಿ ಪರವಾಗಿ ಶೇ. 28, ಎಸ್ಪಿ ಪರವಾಗಿ ಶೇ. 18, ಬಿಎಸ್ಪಿ ಪರವಾಗಿ ಶೇ. 4 ಮತ್ತು ಕಾಂಗ್ರೆಸ್ ಪರವಾಗಿ ಶೇ. 1ರಷ್ಟು ಮಂದಿ ಜೈ ಎಂದಿದ್ದಾರೆ.

ಜಾತಿ ಲೆಕ್ಕಾಚಾರದ ಪ್ರಕಾರ ಸಮೀಕ್ಷೆಯಲ್ಲಿ ದಲಿತರು ಶೇ. 22, ಹಿಂದುಳಿದ ವರ್ಗ ಶೇ. 33 ಮತ್ತು ಮುಸ್ಲಿಂ ಸಮುದಾಯ ಶೇ. 11 ಬಿಜೆಪಿ ಪರವಾಗಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಇನ್ನು ಸಮಾಜವಾದಿ ಪಕ್ಷದ ಪರ ಮುಸ್ಲಿಮರು ಶೇ. 29, ದಲಿತರು ಶೇ. 14, ಬಹುಜನ ಸಮಾಜಪಕ್ಷದ ಪರ ದಲಿತರು ಶೇ. 40, ಹಿಂದುಳಿದ ವರ್ಗ ಶೇ. 22 ಮತ್ತು ಮುಸ್ಲಿಮರು ಶೇ.16ರಷ್ಟು ಒಲವು ತೋರಿದ್ದಾರೆ.

ಏಳು ಹಂತದಲ್ಲಿ ನಡೆಯುವ, 403 ಸದಸ್ಯ ಬಲದ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಮಾರ್ಚ್ ಹನ್ನೊಂದರಂದು ಹೊರಬೀಳಲಿದೆ. (ಚಿತ್ರ:ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Uttar Pradesh polls 2017 poll survey: Bharatiya Janata Party has taken the lead with 28 per cent of the voters vouching for it.
Please Wait while comments are loading...