ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: 3 ತಿಂಗಳ ಹಿಂದೆಯೇ 2000 ರೂ. ನೋಟಿನ ಮುದ್ರಣ ಬಂದ್!

|
Google Oneindia Kannada News

ನವದೆಹಲಿ, ಡಿಸೆಂಬರ್ 12: ಭಾರತದಲ್ಲಿ 2000 ಮುಖಬೆಲೆ ನೋಟುಗಳ ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ 3 ವರ್ಷಗಳ ಹಿಂದೆಯೇ ನಿಲ್ಲಿಸಿದೆ ಎಂದು ಬಿಜೆಪಿ ಸಂಸದ ಸುಶೀಲ್ ಮೋದಿ ಹೇಳಿದ್ದಾರೆ.

ದೇಶದಲ್ಲಿ 2000 ರೂಪಾಯಿ ನೋಟುಗಳನ್ನು ಜನರು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ. ಅದೇ ನೋಟುಗಳನ್ನು ಭಯೋತ್ಪಾದಕ ನಿಧಿ ಮತ್ತು ಮಾದಕವಸ್ತುಗಳ ಕಳ್ಳಸಾಗಾಣಿಕೆ ಮತ್ತು ಕಪ್ಪುಹಣಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ನೋಟ್‌ ಬ್ಯಾನ್‌ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಪಿ.ಚಿದಂಬರಂ ಮಂಡಿಸಿದ ವಾದಗಳೇನು?ನೋಟ್‌ ಬ್ಯಾನ್‌ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಪಿ.ಚಿದಂಬರಂ ಮಂಡಿಸಿದ ವಾದಗಳೇನು?

500 ರೂಪಾಯಿ ಮತ್ತು 1000 ರೂಪಾಯಿ ಮೌಲ್ಯದ ನೋಟುಗಳನ್ನು ಬ್ಯಾನ್ ಮಾಡಿದ ನಂತರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತು. ಇದೀಗ 2000 ರೂಪಾಯಿ ಮುಖಬೆಲೆ ನೋಟುಗಳ ಮುದ್ರಣವನ್ನು 3 ತಿಂಗಳ ಹಿಂದೆಯೇ ನಿಲ್ಲಿಸಲಾಗಿದೆ ಎಂಬುದನ್ನು ಸಂಸದ ಸುಶೀಲ್ ಮೋದಿ ಹೇಳಿದ್ದಾರೆ.

RBI stopped printing the 2,000 rupee currency notes 3 years back says BJP MP Sushil Modi

ನೋಟ್ ಬ್ಯಾನ್ ಕ್ರಮದ ಬಗ್ಗೆ ಚಿದಂಬರಂ ವಾದ:

"ನನ್ನ ಲೆಕ್ಕಾಚಾರದಲ್ಲಿ ಈ ಸಂಪೂರ್ಣ ಪ್ರಯೋಗವನ್ನು ಸುಮಾರು 26 ಗಂಟೆಗಳಲ್ಲಿ ಮಾಡಲಾಗಿದೆ ಎಂದು ತೋರಿಸುತ್ತದೆ. ನವೆಂಬರ್ 7ರ ಮಧ್ಯಾಹ್ನದ ನಂತರ ರಿಸರ್ವ್ ಬ್ಯಾಂಕಿಗೆ ಪತ್ರವನ್ನು ತಲುಪಿಸಲಾಗಿದ್ದು, ನಂತರ ನವೆಂಬರ್ 8ರಂದು ದೆಹಲಿಯಲ್ಲಿ ಭೇಟಿಯಾಗಲು ದೂರವಾಣಿ ಮೂಲಕ ಕೇಂದ್ರೀಯ ಮಂಡಳಿ ಸಭೆ ಕರೆಯಲಾಯಿತು. ಸಂಜೆ 5:30ಕ್ಕೆ ಸಭೆ ನಡೆದಿದ್ದು, ಒಂದು ಅಥವಾ ಒಂದೂವರೆ ಗಂಟೆಯೊಳಗೆ ಶಿಫಾರಸುಗಳನ್ನು ಕೈಯಿಂದ ಸಂಪುಟಕ್ಕೆ ತೆಗೆದುಕೊಂಡು ಹೋಗಲಾಯಿತು.

ಪ್ರಧಾನಿ ನರೇಂದ್ರ ಮೋದಿ ರಾತ್ರಿ 8 ಗಂಟೆಗೆ ದೂರದರ್ಶನದ ಮೂಲಕ ನೋಟ್ ಬ್ಯಾನ್ ನಿರ್ಧಾರವನ್ನು ಪ್ರಕಟಿಸಿದರು. ಇದರದ ಬಗ್ಗೆ ಅಸಮ್ಮತಿಯನ್ನು ವ್ಯಕ್ತಪಡಿಸಿದ ಹಿರಿಯ ವಕೀಲರು, "ಇದು ಅತ್ಯಂತ ಅತಿರೇಕದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದ್ದು, ಕಾನೂನಿನ ನಿಯಮವನ್ನು ಅಪಹಾಸ್ಯ ಮಾಡುತ್ತದೆ," ಎಂದು ಹೇಳಿದರು.

English summary
RBI stopped printing the 2,000 rupee currency notes 3 years back says BJP MP Sushil Modi. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X