ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊರ್ಬಿ ದುರಂತ: ಸೇತುವೆ ಅಲುಗಾಡಿ ಕುಸಿದುಬಿದ್ದ ಭಯಾನಕ ದೃಶ್ಯ ಹೇಗಿದೆ ನೋಡಿ..

|
Google Oneindia Kannada News

ಗುಜರಾತ್‌ನ ಮೊರ್ಬಿಯಲ್ಲಿ ಮಚ್ಚು ನದಿಯ ತೂಗು ಸೇತುವೆ ಭಾನುವಾರ ಸಂಜೆ ಕುಸಿದು 133 ಜನರು ಸಾವನ್ನಪ್ಪಿದ್ದಾರೆ. ಸದ್ಯ ಈ ಸೇತುವೆ ಅಲುಗಾಡಿದ ಹಾಗೂ ಕುಸಿದು ಬಿದ್ದಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ದೃಶ್ಯ ನಿಜಕ್ಕೂ ಭಯಾನಕವಾಗಿದೆ. ಸೇತುವೆ ಮೇಲಿದ್ದ ಜನ ಯಾರೂ ಕೂಡ ಇಂತಹದೊಂದು ಘಟನೆಯನ್ನು ಊಹಿಸರಲಿಲ್ಲ. ಕುಸಿಯುವ ಮುನ್ನ ಕೊಂಚ ಅಲುಗಾಡಿದ ಸೇತುವೆ ಇದ್ದಕ್ಕಿದ್ದಂತೆ ಕುಸಿದಿದೆ. ಸೇತುವೆ ಮೇಲಿದ್ದ ನೂರಾರು ಜನ ಸೇತುವೆ ಕುಸಿಯುತ್ತದೆ ಎಂದು ಊಹಿಸದೇ ಸಾಮಾನ್ಯವಾಗಿರುವದನ್ನು ಸಿಸಿಟಿವಿ ದೃಶ್ಯಗಳು ತೋರಿಸುತ್ತವೆ.

ಮತ್ತೊಂದು ವಿಚಾರ ಅಂದರೆ ವಿಡಿಯೊದಲ್ಲಿ ಜನರು ಸೇತುವೆಯನ್ನು ಹಿಡಿದುಕೊಂಡು ಅದರ ಕೇಬಲ್‌ಗಳನ್ನು ಬಳಸಿ ಅದನ್ನು ಸ್ವಿಂಗ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸೇತುವೆ ಜನರಿಂದ ಕಿಕ್ಕಿರಿದು ತುಂಬಿತ್ತು. ಕೆಲ ಪುಂಡರು ಸೇತುವೆಯಲ್ಲಿ ಸ್ವಿಂಗ್ ಮಾಡುವ ಮೂಲಕ ಅಲುಗಾಡಿಸಿದಾಗ, ಅದು ತೂಗಾಡತೊಡಗಿದೆ. ಬಳಿಕ ಇದ್ದಕ್ಕಿದ್ದಂತೆ ಕುಸಿದಿದೆ. ಸೇತುವೆಯ ಮೇಲೆ ನಿಂತಿದ್ದ ಹಲವಾರು ಜನರು ನದಿಗೆ ಬಿದ್ದಿದ್ದಾರೆ.

Morbi Tragedy: See the horrifying scene of the bridge shaking and collapsing

ಬ್ರಿಟಿಷರ ಕಾಲದ ಸೇತುವೆ ಏಳು ತಿಂಗಳ ಕಾಲ ನವೀಕರಣ ಕಾಮಗಾರಿಗಾಗಿ ಮುಚ್ಚಿತ್ತು. ನಾಲ್ಕು ದಿನಗಳ ಹಿಂದಷ್ಟೇ ಸಾರ್ವಜನಿಕರಿಗೆ ತೆರೆಯಲಾಗಿತ್ತು. ಭಾನುವಾರ ರಜೆ ದಿನವಾಗಿದ್ದರಿಂದ ನೂರಾರು ಸಂಖ್ಯೆಯಲ್ಲಿ ಜನ ಇಲ್ಲಿ ಸೇರಿದ್ದರು. ಹಠಾತ್ ದುರಂತದಿಂದಾಗಿ ನದಿಯಲ್ಲಿ 133 ಜನ ಸಾವನ್ನಪ್ಪಿದ್ದು ಹಲವಾರು ನಾಪತ್ತೆಯಾಗಿದ್ದಾರೆ. ನೂರಾರು ಜನರನ್ನು ರಕ್ಷಣೆ ಮಾಡಲಾಗಿದೆ.

ರಾತ್ರಿಯಿಡೀ ಮುಂದುವರಿದ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್‌ನ ಐದು ತಂಡಗಳು, ಎಸ್‌ಡಿಆರ್‌ಎಫ್‌ನ ಆರು ತುಕಡಿಗಳು, ವಾಯುಪಡೆಯ ತಂಡ, ಸೇನೆಯ ಎರಡು ತಂಡ ಮತ್ತು ಭಾರತೀಯ ನೌಕಾಪಡೆಯ ಎರಡು ತಂಡಗಳು ಸ್ಥಳೀಯ ರಕ್ಷಣಾ ತಂಡಗಳನ್ನು ಒಳಗೊಂಡಂತೆ ಕಾರ್ಯಚರಣೆಯನ್ನು ಮುಂದುವರೆಸಿದೆ ಎಂದು ರಾಜ್ಯ ಮಾಹಿತಿ ಇಲಾಖೆ ತಿಳಿಸಿದೆ.

ಘಟನೆ ನಡೆದ ನಂತರ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ರಕ್ಷಣಾ ಕಾರ್ಯಾಚರಣೆಗಳು ಮತ್ತು ವೈದ್ಯಕೀಯ ಸೇವೆಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ಮೊರ್ಬಿಗೆ ಧಾವಿಸಿದರು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಧನಸಹಾಯವನ್ನೂ ಘೋಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಗಿಯುವವರೆಗೂ ಮುಖ್ಯಮಂತ್ರಿಗಳು ಮೊರ್ಬಿಯಲ್ಲಿಯೇ ಬಿಡಾರ ಹೂಡುವ ಸಾಧ್ಯತೆ ಇದೆ.

English summary
Machu river suspension bridge collapse video captured on CCTV in Morbi, Gujarat. See the horrifying scene..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X