ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಪ್ರವಾಹ: ಮೃತರ ಸಂಖ್ಯೆ 170 ಕ್ಕೇರಿಕೆ, ಇಂದು ಮೋದಿ ಆಗಮನ

|
Google Oneindia Kannada News

ತಿರುವನಂತಪುರಂ, ಆಗಸ್ಟ್ 17: ಕಳೆದ ಹಲವು ದಿನಗಳಿಂದ ಕೇರಳ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಇನ್ನೂ ನಿಂತಿಲ್ಲ. ರಾಜ್ಯದಲ್ಲಿ ಎದ್ದ ಪ್ರವಾಹ ಸ್ಥಿತಿಗೆ ಸಾವಿಗೀಡಾದವರ ಸಂಖ್ಯೆ 170 ಕ್ಕೇರಿದೆ.

ಕೃಳ ಪ್ರವಾಹದ ಕುರಿತು ಈಗಾಗಲೇ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬಳಿ ಮಾಹಿತಿ ಕಲೆಹಾಕಿದ್ದಾರೆ. ಇಂದು ಅವರು ಕೇರಳಕ್ಕೆ ಭೇಟಿ ನೀಡಲಿದ್ದು, ಪ್ರವಾಹ ಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯ ಕ್ರಿಯೆಯ ನಂತರ ಅವರು ಕೇರಳಕ್ಕೆ ಆಗಮಿಸುವ ಸಾಧ್ಯತೆ ಇದೆ.

ಕೇರಳದಲ್ಲಿ ತಗ್ಗದ ವರುಣನ ಮುನಿಸು: ಹೆಚ್ಚುವರಿ ರಕ್ಷಣಾ ಪಡೆ ರವಾನೆಕೇರಳದಲ್ಲಿ ತಗ್ಗದ ವರುಣನ ಮುನಿಸು: ಹೆಚ್ಚುವರಿ ರಕ್ಷಣಾ ಪಡೆ ರವಾನೆ

ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಮತ್ತು ಭಾರತೀಯ ಸೇನಾ ಸಿಬ್ಬಂದಿಗಳ ನಿರಂತರ ಪರಿಶ್ರಮದಿಂದಾಗಿ ಎಷ್ಟೋ ಪ್ರಾಣಹಾನಿಯನ್ನು ತಪ್ಪಿಸಲಾಗಿದೆ. ನಿರಂತರ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ. ಆದರೆ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಇದುವರೆಗೂ 170 ಮಂದಿ ಮೃತಪಟ್ಟಿದ್ದಾರೆ.

Kerala floods: PM Modi to visit state today

ರಾಜ್ಯದ 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇಂದು ರಾಷ್ಟ್ರೀಯ ವಿಪತ್ತು ದಳದ 35 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಲಿವೆ.

English summary
Heavy rains and floods in Kerala, death toll rises to 170. Prime minister Narendra Modi will travel to Kerala this evening to review state's tragic condition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X