ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮತ್ತು ಅಪೌಷ್ಠಿಕತೆಯಿಂದ ಕ್ಷಯ ರೋಗದ ಅಪಾಯ!

|
Google Oneindia Kannada News

ನವದೆಹಲಿ, ಫೆಬ್ರವರಿ.18: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವುದಕ್ಕಾಗಿ ಭಾರತದಲ್ಲಿ ಲಾಕ್ ಡೌನ್ ಘೋಷಿಸಲಾಯಿತು. ಅಂದು ಹೊತ್ತಿನ ಊಟಕ್ಕಾಗಿ ದುಡಿಯುತ್ತಿದ್ದ ದಿನಗೂಲಿ ಕಾರ್ಮಿಕರು ಹಸಿವು ನೀಗಿಸಿಕೊಳ್ಳುವುದೇ ದೊಡ್ಡ ಸವಾಲಾಯಿತು.

ಭಾರತ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲರ ಎದೆಯಲ್ಲಿ ಕೊರೊನಾವೈರಸ್ ಭಯ ಹುಟ್ಟಿಸಿತ್ತು. ಅದೇ ಭಯದಲ್ಲಿ ಹಸಿವನ್ನೂ ಜನ ಮರೆತರು. ದೇಹದ ತೂಕ ಇಳಿಯುವುದು ಬಡತನದ ಒಂದು ಲಕ್ಷಣವಾಗಿತ್ತು. ಲಾಕ್ ಡೌನ್ ವೇಳೆ ಹಸಿವು ಮತ್ತು ಆತಂಕದಲ್ಲಿ ಬಹಳಷ್ಟು ಜನರ ತೂಕವೇ ಇಳಿದು ಹೋಯಿತು.

ಗಮನಿಸಿ: ಟಿಬಿ-ಕೋವಿಡ್ ಪರೀಕ್ಷೆ ಕುರಿತು ಆರೋಗ್ಯ ಸಚಿವಾಲಯದ ಮಹತ್ವದ ಸೂಚನೆಗಮನಿಸಿ: ಟಿಬಿ-ಕೋವಿಡ್ ಪರೀಕ್ಷೆ ಕುರಿತು ಆರೋಗ್ಯ ಸಚಿವಾಲಯದ ಮಹತ್ವದ ಸೂಚನೆ

ಭಾರತದಲ್ಲೇ ಅತಿಹೆಚ್ಚು ಜನರ ತೂಕ ಇಳಿಯುವುದಕ್ಕೆ ಅಪೌಷ್ಠಿಕತೆ, ಆಹಾರ ಕೊರತೆ ಮತ್ತು ಆದಾಯ ಅಭಾವ ಕಾರಣವಾಯಿತು. ಆದರೆ ತೂಕ ಇಳಿಕೆಗೆ ಊಟ ಇಲ್ಲದಿರುವುದು ಎಷ್ಟು ಕಾರಣವೋ, ಅದೇ ರೀತಿ ಮಹಾಮಾರಿ ಕ್ಷಯ ರೋಗ ಕೂಡಾ ಒಂದು ಕಾರಣ ಎಂಬ ಸತ್ಯವನ್ನು ಜನರು ಮರೆತು ಬಿಟ್ಟಿದ್ದರು. ದೇಹದ ತೂಕ ಇಳಿಕೆಯಿಂದ ಕ್ಷಯ ರೋಗಿಗಳಲ್ಲಿ ಸಾವಿನ ಅಪಾಯ ಮತ್ತು ಭೀತಿ ಎರಡೂ ಹೆಚ್ಚಾಯಿತು.

ಕ್ಷಯ ರೋಗ ಮತ್ತು ಅಡ್ಡ ಪರಿಣಾಮದ ಆತಂಕ

ಕ್ಷಯ ರೋಗ ಮತ್ತು ಅಡ್ಡ ಪರಿಣಾಮದ ಆತಂಕ

ಬಡತನದಿಂದಾಗಿ ಹಸಿವಿನ ಸಮಸ್ಯೆ ಎದುರಾಗುತ್ತದೆ. ಆಹಾರ ಕೊರತೆ ಮತ್ತು ಅಪೌಷ್ಠಿಕತೆಯ ಕಾರಣದಿಂದ ದೇಹದ ತೂಕ ಕಡಿಮೆಯಾಗುವುದರ ಜೊತೆಗೆ ಕ್ಷಯ ರೋಗಕ್ಕೆ ತುತ್ತಾಗುವ ಅಪಾಯವೂ ಹೆಚ್ಚಾಗಿರುತ್ತದೆ. ಕ್ಷಯ ರೋಗಕ್ಕೆ ತುತ್ತಾಗಿರುವ ರೋಗಿಗಳಲ್ಲಿ ಅಪೌಷ್ಠಿಕತೆಯಿಂದ ಚೇತರಿಕೆ ವೇಗವನ್ನು ಕುಗ್ಗತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೊದಮೊದಲು ಕ್ಷಯ ರೋಗದ ಲಕ್ಷಣ

ಮೊದಮೊದಲು ಕ್ಷಯ ರೋಗದ ಲಕ್ಷಣ

ಅಪೌಷ್ಠಿಕತೆ ಮತ್ತು ದೇಹದ ತೂಕದಲ್ಲಿನ ಇಳಿಕೆಯಿಂದ ಕ್ಷಯ ರೋಗ ಕಾಣಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಮೊದಲಿಗೆ ಕ್ಷಯ ರೋಗದಿಂದ ಹಸಿವು ಕಡಿಮೆಯಾಗುತ್ತದೆ. ಆಹಾರ ಸೇವನೆ ಪ್ರಮಾಣವು ಇಳಿಕೆಯಾಗುತ್ತದೆ. ಎರಡನೇಯದಾಗಿ ಜ್ವರದ ಲಕ್ಷಣ ಕಾಣಿಸಿಕೊಳ್ಳುತ್ತದೆ. ತದನಂತರ ದೇಹದಲ್ಲಿ ಪ್ರೋಟಿನ್ ಪ್ರಮಾಣ ಇಳಿಕೆಯಾಗುವುದರ ಜೊತೆಗೆ ಸ್ನಾಯು ಸೆಳೆತ ಬಾಧಿಸುತ್ತದೆ. ಚಿಕಿತ್ಸೆ ಪಡೆದ ನಂತರದಲ್ಲೂ ಕೂಡಾ ಅಪೌಷ್ಠಿಕತೆಯು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಅಪೌಷ್ಠಿಕತೆಯಿಂದ ಸಾವಿನ ಅಪಾಯ

ಅಪೌಷ್ಠಿಕತೆಯಿಂದ ಸಾವಿನ ಅಪಾಯ

ಕ್ಷಯ ರೋಗಿಗಳಿಗೆ ಅಪೌಷ್ಠಿಕತೆ ಸಮಸ್ಯೆ ಎದುರಾದಲ್ಲಿ ಸಾವಿನ ಅಪಾಯ ಹೆಚ್ಚಾಗಿರುತ್ತದೆ. ಉತ್ತಮವಾಗಿ ಪೋಷಿಸಲ್ಪಟ್ಟಿರುವ ಕ್ಷಯ ರೋಗದಿಂದ ಗುಣಮುಖರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ, ಅಪೌಷ್ಠಿಕತೆಯಿಂದ ಬಳಲುವ ರೋಗಿಯು ಸಾಮಾನ್ಯ ರೋಗಿಗಳಿಂದ ನಾಲ್ಕು ಪಟ್ಟು ಹೆಚ್ಚು ಸಾವಿನ ಅಪಾಯವನ್ನು ಎದುರಿಸುತ್ತಾರೆ. "ಕೊವಿಡ್-19 ಸಂದರ್ಭದಲ್ಲಿ ಕ್ಷಯ ರೋಗಿದ ವಿರುದ್ಧದ ಹೋರಾಟ" ಎಂಬ ವರದಿಯಲ್ಲಿ "ಪೌಷ್ಠಿಕಾಂಶ" ಬಗ್ಗೆ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಕ್ಷಯ ರೋಗಿಗಳು ಯಾವ ರೀತಿ ಆಹಾರ ಸೇವನೆ ಮಾಡಬೇಕು ಎನ್ನುವುದರ ಬಗ್ಗೆ ಕೂಡ ತಿಳಿಸಲಾಗಿದೆ.

ಕ್ಷಯ ರೋಗಿಗಳಿಗೆ 500 ರೂ. ಆರ್ಥಿಕ ಸಹಾಯ

ಕ್ಷಯ ರೋಗಿಗಳಿಗೆ 500 ರೂ. ಆರ್ಥಿಕ ಸಹಾಯ

ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ ಕ್ಷಯ ರೋಗಿಗಳು ಪೌಷ್ಠಿಕಾಂಶವುಳ್ಳ ಆಹಾರವನ್ನು ಪಡೆದುಕೊಳ್ಳುವುದಕ್ಕಾಗಿ ಪ್ರತಿ ತಿಂಗಳು 500 ರೂಪಾಯಿ ಸಹಾಯಧನವನ್ನು ನೀಡಲಾಗುತ್ತದೆ. ದುಡಿಮೆ ಮತ್ತು ಆದಾಯವಿಲ್ಲದೇ ಜನರಿಗೆ ಬಡತನ ಕಾಡುತ್ತಿದೆ. ಬಡತನದಿಂದ ಪೌಷ್ಠಿಕಾಂಶಯುತ ಆಹಾರವಿಲ್ಲದೇ ಜನರು ಕ್ಷಯ ರೋಗದ ಅಪಾಯವನ್ನು ಎದುರಿಸುತ್ತಿದ್ದರು. ಇದೀಗೊ ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಕೂಡಾ ಕ್ಷಯ ರೋಗದ ಭೀತಿ ಹೆಚ್ಚಾಗುವಂತಾ ಸನ್ನಿವೇಶ ಸೃಷ್ಟಿಯಾಗಿದೆ.

ಕ್ಷಯ ರೋಗದ ಭೀತಿಯ ಹಿಂದೆ ಆರ್ಥಿಕ ಹೊಡೆತ

ಕ್ಷಯ ರೋಗದ ಭೀತಿಯ ಹಿಂದೆ ಆರ್ಥಿಕ ಹೊಡೆತ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡರು. ಆದಾಯ ಸಮಸ್ಯೆ, ಕಾರ್ಮಿಕರ ವಲಸೆ, ಆಹಾರ ಭದ್ರತೆಯಿಲ್ಲದೇ ಅಪೌಷ್ಠಿಕತೆ ಪ್ರಮಾಣದ ಹೆಚ್ಚಾಯಿತು. ಹಸಿವು ನೀಗಿಸಿಕೊಳ್ಳಲಾಗದ ಸ್ಥಿತಿಯನ್ನು ಎದುರಿಸಿದ ಜನರಲ್ಲಿ ದೀರ್ಘಾವಧಿ ಪ್ರಭಾವ ಬೀರಿತು. ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕುಗ್ಗಿತು. ಇನ್ನೊಂದು ದಿಕ್ಕಿನಲ್ಲಿ ಕ್ಷಯ ರೋಗದ ಅಪಾಯ ಹೆಚ್ಚಾಗಿತು. ಕ್ಷಯ ರೋಗದಿಂದಲೇ ಬಳಲುತ್ತಿದ್ದ ಅದೆಷ್ಟೋ ಜನರಿಗೆ ಸಾವಿನ ಭೀತಿ ಹೆಚ್ಚಾಯಿತು.

English summary
India Has A Large Underweight Population With Tuberculosis, And The Coronavirus Crisis Is Only Making It Worse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X