ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮನಿಸಿ: ಟಿಬಿ-ಕೋವಿಡ್ ಪರೀಕ್ಷೆ ಕುರಿತು ಆರೋಗ್ಯ ಸಚಿವಾಲಯದ ಮಹತ್ವದ ಸೂಚನೆ

|
Google Oneindia Kannada News

ನವದೆಹಲಿ, ಆಗಸ್ಟ್ 28: ಎಲ್ಲ ಕ್ಷಯ (ಟಿಬಿ) ರೋಗಿಗಳೂ ಕೊರೊನಾ ವೈರಸ್ ತಪಾಸಣೆಗೆ ಒಳಪಡಬೇಕು ಮತ್ತು ಎಲ್ಲ ಕೊರೊನಾ ವೈರಸ್ ಪಾಸಿಟಿವ್ ರೋಗಿಗಳನ್ನೂ ಕಡ್ಡಾಯವಾಗಿ ಕ್ಷಯ ರೋಗ ಪರೀಕ್ಷೆಗೆ ಒಳಪಡಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

Recommended Video

China ತನ್ನ ಲಸಿಕೆಯನ್ನು ಕೊಡಲು ಹಾಕಿದ ಕಂಡೀಷನ್ ಏನು ? | Oneindia Kannada

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಗದರ್ಶಿಯೊಂದನ್ನು ಗುರುವಾರ ಬಿಡುಗಡೆ ಮಾಡಿದೆ. ಜ್ವರ (ಐಎಲ್‌ಐ) ಮತ್ತು ತೀವ್ರ ಗಂಭೀರ ಉಸಿರಾಟದ ಸೋಂಕುಗಳ (ಎಸ್‌ಎಆರ್‌ಐ) ಪ್ರಕರಣದಂತಹ ಇನ್‌ಫ್ಲೂಯೆಂಜಾಗಳಲ್ಲಿ ಟಿಬಿ ಹಾಗೂ ಕೋವಿಡ್ ರೋಗಿಗಳಿಗೆ ಎರಡೂ ಬಗೆಯ ಪರೀಕ್ಷೆಗಳನ್ನು ನಡೆಸಬೇಕು ಎಂದು ತಿಳಿಸಿದೆ.

 ಕೋವಿಡ್-19: ದೇಶೀಯ ವಿಮಾನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಕೋವಿಡ್-19: ದೇಶೀಯ ವಿಮಾನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ

ತೀವ್ರ ಪ್ರಮಾಣದ ಕೋವಿಡ್ 19 ಕಾಯಿಲೆ ಬಂದವರಲ್ಲಿ ಕ್ಷಯ ರೋಗವು ಕಾಣಿಸಿಕೊಳ್ಳುವ ಹೆಚ್ಚಿದೆ. ಜತೆಗೆ ಅಪೌಷ್ಟಿಕತೆ, ಮಧುಮೇಹ, ಧೂಮಪಾನ, ಎಚ್‌ಐವಿ ಮುಂತಾದ ಸಮಸ್ಯೆಯುಳ್ಳ ಟಿಬಿ ರೋಗಿಗಳು ಕೂಡ ಮತ್ತಷ್ಟು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಸಚಿವಾಲಯ ಹೇಳಿದೆ. ಮುಂದೆ ಓದಿ.

ಟಿಬಿ-ಕೋವಿಡ್ ಸಾಮೀಪ್ಯತೆ

ಟಿಬಿ-ಕೋವಿಡ್ ಸಾಮೀಪ್ಯತೆ

ಕ್ಷಯ ಮತ್ತು ಕೋವಿಡ್ ಎರಡೂ ಪ್ರಾಥಮಿಕವಾಗಿ ಶ್ವಾಸಕೋಶಕ್ಕೆ ದಾಳಿ ಮಾಡುತ್ತವೆ. ಕೋವಿಡ್-19 ರೋಗಿಗಳಲ್ಲಿ ನಡೆಸಿದ ವಿಭಿನ್ನ ಅಧ್ಯಯನಗಳಲ್ಲಿ ಶೇ 0.37-4.47ರಷ್ಟು ಕ್ಷಯ ಇರುವುದು ಪತ್ತೆಯಾಗಿದೆ. ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಜನವರಿಯಿಂದ ಜೂನ್ ಅವಧಿಯಲ್ಲಿ ಟಿಬಿ ಘೋಷಣೆಗಳಲ್ಲಿ ಶೇ 26ರಷ್ಟು ಒಟ್ಟಾರೆ ಇಳಿಕೆಯಾಗಿದೆ ಎಂದೂ ಅದು ಹೇಳಿದೆ.

ಯಾರೆಲ್ಲ ಪರೀಕ್ಷೆಗೆ ಒಳಪಡಬೇಕು?

ಯಾರೆಲ್ಲ ಪರೀಕ್ಷೆಗೆ ಒಳಪಡಬೇಕು?

ಹೊಸದಾಗಿ ಕ್ಷಯ ರೋಗ ಪತ್ತೆಯಾದ ರೋಗಿಗಳು ಮತ್ತು ಪ್ರಸ್ತುತ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರು ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಪಡಬೇಕು. ಫಲಿತಾಂಶದ ಆಧಾರದಲ್ಲಿ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗೆ ಅನುಗುಣವಾಗಿ ಮುಂದಿನ ಕ್ರಮವನ್ನು ತೆಗೆದುಕೊಳ್ಳಬೇಕು. ಆದರೆ ಈ ಸಮಯದಲ್ಲಿ ಟಿಬಿ ಚಿಕಿತ್ಸೆಯನ್ನು ನಿಲ್ಲಿಸಬಾರದು ಎಂದು ಸೂಚನೆ ನೀಡಲಾಗಿದೆ.

ಅಮೆರಿಕದಲ್ಲಿ ವರ್ಷಾಂತ್ಯಕ್ಕೆ ಕೊರೊನಾ ಲಸಿಕೆ ಸಿದ್ಧ: ಡೊನಾಲ್ಡ್ ಟ್ರಂಪ್ಅಮೆರಿಕದಲ್ಲಿ ವರ್ಷಾಂತ್ಯಕ್ಕೆ ಕೊರೊನಾ ಲಸಿಕೆ ಸಿದ್ಧ: ಡೊನಾಲ್ಡ್ ಟ್ರಂಪ್

ಕ್ಷಯದ ಲಕ್ಷಣವಿದ್ದರೆ...

ಕ್ಷಯದ ಲಕ್ಷಣವಿದ್ದರೆ...

ಜತೆಗೆ ಎಲ್ಲ ಕೋವಿಡ್-19 ಪ್ರಕರಣಗಳನ್ನೂ ಕ್ಷಯ ಲಕ್ಷಣಗಳಿದ್ದರೆ ತಿಳಿದುಕೊಳ್ಳಲು ಪರೀಕ್ಷೆಗೆ ಒಳಪಡಿಸಬೇಕು. ನಾಲ್ಕು ಪ್ರಮುಖ ಲಕ್ಷಣಗಳಾದ ಎರಡು ವಾರಕ್ಕಿಂತ ಹೆಚ್ಚು ಸಮಯದ ಕೆಮ್ಮು, ಎರಡು ವಾರಕ್ಕಿಂತ ಅಧಿಕ ಸಮಯದ ಜ್ವರ, ಗಣನೀಯ ಪ್ರಮಾಣದ ತೂಕ ಇಳಿಕೆ ಮತ್ತು ರಾತ್ರಿ ಬೆವರುವಿಕೆ ಕಂಡುಬಂದರೆ, ಟಿಬಿ ಪ್ರಕರಣದ ಸಂಪರ್ಕದ ಇತಿಹಾಸ, ಟಿಬಿಯ ಇತಿಹಾಸ ಮತ್ತು ಈ ಎಲ್ಲ ಲಕ್ಷಣಗಳಿದ್ದವರನ್ನು ಎದೆ ಭಾಗದ ಎಕ್ಸ್‌ರೇ ಹಾಗೂ ಟಿಬಿ ಪತ್ತೆ ಹಚ್ಚುವ ನ್ಯೂಕ್ಲಿಯರ್ ಆಸಿಡ್ ಆಂಪ್ಲಿಫಿಕೇಷನ್ ಟೆಸ್ಟ್ (ಎನ್‌ಎಎಟಿ) ಒಳಪಡಿಸಬೇಕು.

ಕೋವಿಡ್-ಟಿಬಿ ಪ್ರತ್ಯೇಕ ವಿಭಾಗ

ಕೋವಿಡ್-ಟಿಬಿ ಪ್ರತ್ಯೇಕ ವಿಭಾಗ

ಕೋವಿಡ್ ಐಸೋಲೇಷನ್ ಸೌಲಭ್ಯಗಳೊಂದಿಗೆ ತೀವ್ರ ಅನಾರೋಗ್ಯದ ನಿರ್ವಹಣೆಗೆ ಟಿಬಿ ಸೇವೆಗಳ ಸೌಲಭ್ಯಗಳನ್ನು ಕೂಡ ಜೋಡಿಸಿ ಟಿಬಿ-ಕೋವಿಡ್ ರೋಗಿಗಳೆಂದು ಪ್ರತ್ಯೇಕವಾಗಿ ಗುರುತಿಸಬೇಕಾಗುತ್ತದೆ. ಐಎಲ್‌ಐ ಮತ್ತು ಎಸ್‌ಎಆರ್‌ಐ ಪ್ರಕರಣಗಳಲ್ಲಿ ಟಿಬಿ ಪರೀಕ್ಷೆ ನಡೆಸಲೇಬೇಕು ಎಂದು ಸಲಹೆ ನೀಡಿದೆ.

ದೇಶದಲ್ಲಿ ಶೇ.78 ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲವಂತೆ!ದೇಶದಲ್ಲಿ ಶೇ.78 ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲವಂತೆ!

English summary
Health Ministry has issued a new guidance note said, Covid screening for all TB patients and TB screening for all Covid 19 positive patients should be conducted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X