• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮೀಕ್ಷೆ: ಅಸೆಂಬ್ಲಿಯಲ್ಲಿ ಹಿಂದೆ, ಲೋಕಸಭೆಯಲ್ಲಿ 'ಬಿಜೆಪಿ' ಭಾರೀ ಮುಂದೆ

|

ಮುಂಬರುವ ಲೋಕಸಭಾ ಚುನಾವಣೆ ಜೊತೆ ಹನ್ನೊಂದು ರಾಜ್ಯಗಳ ಅಸೆಂಬ್ಲಿ ಚುನಾವಣೆಯೂ ನಡೆಯಬೇಕು ಎನ್ನುವ ಬಿಜೆಪಿ ಪ್ರಸ್ತಾವನೆಯನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸುವುದು ಸಾಧ್ಯವಿಲ್ಲ ಎಂದು ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಮಂಗಳವಾರ (ಆ 14) ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ನಿರ್ಣಾಯಕವಾಗಿರುವ ಮೂರು ರಾಜ್ಯಗಳ ಅಸೆಂಬ್ಲಿ ಚುನಾವಣೆ ಈ ವರ್ಷಾಂತ್ಯದಲ್ಲಿ ಅಥವಾ ಜನವರಿ 2019ರೊಳಗೆ ನಡೆಯಲಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ರಾಜ್ಯಗಳ ಚುನಾವಣೆ ನಡೆಯಲಿದ್ದು, ಪ್ರಸಕ್ತ ಮೂರೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.

3 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಜಯ: ಸಮೀಕ್ಷೆ

ಈ ನಡುವೆ, ಮೂರು ರಾಜ್ಯಗಳಲ್ಲಿ ಮತದಾರನ ನಾಡಿಮಿಡಿತ ಯಾವ ಪಕ್ಷದ ಪರವಾಗಿದೆ ಎನ್ನುವ ಸಮೀಕ್ಷೆಯನ್ನು ಎಬಿಪಿ ನ್ಯೂಸ್ - ಸಿವೋಟರ್ ಜಂಟಿಯಾಗಿ ನಡೆಸಿದೆ. ಸಮೀಕ್ಷಾ ವರದಿಯ ಪ್ರಕಾರ, ಮೂರೂ ರಾಜ್ಯಗಳಲ್ಲಿ ಬಿಜೆಪಿಗೆ ಮುಖಭಂಗ ನಿಶ್ಚಿತ ಎನ್ನುವ ಫಲಿತಾಂಶ ಹೊರಬಿದ್ದಿದೆ.

ಆದರೆ, ಅಸೆಂಬ್ಲಿ ಚುನಾವಣೆಯ ಜೊತೆ ಲೋಕಸಭೆಯ ಚುನಾವಣೆಯ ಬಗ್ಗೆ ಈ ಮೂರು ರಾಜ್ಯಗಳ ಜನರ ಅಭಿಪ್ರಾಯ ಅತ್ಯಂತ ಸ್ಪಷ್ಟವಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕಡೆಯಿದೆ ಎನ್ನುವುದು ಒಂದೆಡೆಯಾದರೆ, ಮೋದಿಯೇ ಪ್ರಧಾನಿ ಹುದ್ದೆಗೆ ಸೂಕ್ತ ಎನ್ನುವ ಅಭಿಪ್ರಾಯವನ್ನು ಜನ ಹೊಂದಿದ್ದಾರೆ.

ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆ ನಡೆಯಬಹುದಾದ 11 ರಾಜ್ಯಗಳಿವು

ಮೋದಿ ಫ್ಯಾಕ್ಟರ್ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಕೈಹಿಡಿಯಲಿದೆ ಎನ್ನುತ್ತದೆ ಸಮೀಕ್ಷಾ ವರದಿ. ಆ ಮೂಲಕ, ಮೋದಿಯನ್ನು ಮತ್ತೆ ಪ್ರಧಾನಿಯಾಗಲು ಬಿಡಬಾರದು ಎಂದು ಒಂದಾಗುತ್ತಿರುವ ವಿಪಕ್ಷಗಳಿಗೆ ಹಿನ್ನಡೆಯಾಗಲಿದೆಯಾ? ಮೂರು ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ, ಮೋದಿ ಬಗ್ಗೆ ಜನ ಯಾವ ಅಭಿಪ್ರಾಯ ಹೊಂದಿದ್ದಾರೆ, ಮುಂದೆ ಓದಿ

ಶಿವರಾಜ್ ಸಿಂಗ್ ಚೌಹಾಣ್ ವಿರುದ್ದ ಆಡಳಿತ ವಿರೋಧಿ ಅಲೆ

ಶಿವರಾಜ್ ಸಿಂಗ್ ಚೌಹಾಣ್ ವಿರುದ್ದ ಆಡಳಿತ ವಿರೋಧಿ ಅಲೆ

ಮಧ್ಯಪ್ರದೇಶದ ಹಾಲೀ ಅಸೆಂಬ್ಲಿಯ ಅವಧಿ ಜನವರಿ 9, 2019ಕ್ಕೆ ಮುಕ್ತಾಯಗೊಳ್ಳಲಿದೆ. 30.11.2005ರಿಂದ ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್ ವಿರುದ್ದ ಆಡಳಿತ ವಿರೋಧಿ ಅಲೆ ವ್ಯಕ್ತವಾಗಿರುವುದು ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ. ಮಧ್ಯಪ್ರದೇಶದಲ್ಲಿ ಒಟ್ಟು 29ಲೋಕಸಭಾ ಕ್ಷೇತ್ರಗಳಿದ್ದು, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 26 ಮತ್ತು ಕಾಂಗ್ರೆಸ್ 3ಸ್ಥಾನವನ್ನು ಗೆದ್ದಿತ್ತು.

ಬಿಜೆಪಿ ಮತ್ತು ಕಾಂಗ್ರೆಸ್ ಪಡೆಯುವ ಶೇಕಡಾವಾರು ಮತ

ಬಿಜೆಪಿ ಮತ್ತು ಕಾಂಗ್ರೆಸ್ ಪಡೆಯುವ ಶೇಕಡಾವಾರು ಮತ

ಮುಂಬರುವ ಮಧ್ಯಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ಸಮೀಕ್ಷೆ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್ ಪಡೆಯುವ ಶೇಕಡಾವಾರು ಮತಗಳಲ್ಲಿ ಕೇವಲ 2% ವ್ಯತ್ಯಾಸವಿದ್ದರೂ, ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ಸಿಗಲಿದೆ. ಆದರೆ, ಸಾರ್ವತ್ರಿಕ ಚುನಾವಣೆಯ ಸರದಿ ಬಂದಾಗ ಬಿಜೆಪಿ ಶೇ. 46 ಮತ್ತು ಕಾಂಗ್ರೆಸ್ ಶೇ.39ರಷ್ಟು ಮತವನ್ನು ಪಡೆಯಲಿದೆ. ಇನ್ನು ಪ್ರಧಾನಿ ಹುದ್ದೆಗೆ ಯಾರು ಸೂಕ್ತ ಎನ್ನುವ ಪ್ರಶ್ನೆ ಬಂದಾಗ ಮೋದಿಗೆ ಶೇ. 54 ಮತ್ತು ರಾಹುಲ್ ಗಾಂಧಿಗೆ ಶೇ. 25 ಜನ ಓಕೆ ಎಂದಿದ್ದಾರೆ.

ಕಾಂಗ್ರೆಸ್ ನಿರಾಯಾಸವಾಗಿ ಅಧಿಕಾರಕ್ಕೆ ಬರಲಿದೆ

ಕಾಂಗ್ರೆಸ್ ನಿರಾಯಾಸವಾಗಿ ಅಧಿಕಾರಕ್ಕೆ ಬರಲಿದೆ

ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದ 25ಕ್ಷೇತ್ರಗಳಲ್ಲಿ ಎಲ್ಲವನ್ನೂ ಬಿಜೆಪಿ ಗೆದ್ದು ಕ್ಲೀನ್ ಸ್ವೀಪ್ ಮಾಡಿತ್ತು. ಪ್ರಧಾನಿಯಾಗಲು ಮೋದಿಗೆ ಭರ್ಜರಿ ಬೆಂಬಲ ನೀಡಿದ್ದ ರಾಜಸ್ಥಾನದಲ್ಲಿ ಮುಂಬರುವ ಲೋಕಾಸಭಾ ಚುನಾವಣೆಯಲ್ಲೂ ಪೂರಕ ವಾತಾವರಣವಿದೆ, ಆದರೆ ಹಿಂದಿನಷ್ಟಲ್ಲ. ಸಮೀಕ್ಷೆ ಪ್ರಕಾರ, ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ನಿರಾಯಾಸವಾಗಿ ಅಧಿಕಾರಕ್ಕೆ ಬರಲಿದೆ. ಆದರೆ, ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಪರ ಶೇ. 47, ಕಾಂಗ್ರೆಸ್ ಪರ ಶೇ. 43 ಜನ ಒಲವು ತೋರಿದ್ದಾರೆ.

ಬಿಜೆಪಿ ಪರ ಶೇ. 46 ಮತ್ತು ಕಾಂಗ್ರೆಸ್ ಪರ ಶೇ. 36

ಬಿಜೆಪಿ ಪರ ಶೇ. 46 ಮತ್ತು ಕಾಂಗ್ರೆಸ್ ಪರ ಶೇ. 36

ಛತ್ತೀಸಗಢ ರಾಜ್ಯದಲ್ಲಿ ಒಟ್ಟು ಹನ್ನೊಂದು ಲೋಕಸಭಾ ಕ್ಷೇತ್ರಗಳಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿ ಹತ್ತು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿತ್ತು. ಸಮೀಕ್ಷೆಯ ಪ್ರಕಾರ, ಲೋಕಸಭಾ ಚುನಾವಣೆಯಲ್ಲಿ ಮತದಾರ ನಮ್ಮ ಮೊದಲ ಆಯ್ಕೆ ಬಿಜೆಪಿಯೇ ಎಂದಿದ್ದಾರೆ. ಬಿಜೆಪಿ ಪರ ಶೇ. 46 ಮತ್ತು ಕಾಂಗ್ರೆಸ್ ಪರ ಶೇ. 36 ಒಲವನ್ನು ಜನ ಹೊಂದಿದ್ದಾರೆ.

ನರೇಂದ್ರ ಮೋದಿ ವರ್ಸಸ್ ರಾಹುಲ್ ಗಾಂಧಿ

ನರೇಂದ್ರ ಮೋದಿ ವರ್ಸಸ್ ರಾಹುಲ್ ಗಾಂಧಿ

ಪ್ರಧಾನಿ ಹುದ್ದೆಗೆ ಯಾರು ಸೂಕ್ತ

ರಾಜಸ್ಥಾನ

ಮೋದಿ : ಶೇ. 55

ರಾಹುಲ್ : ಶೇ. 22

ಛತ್ತೀಸಗಢ

ಮೋದಿ : ಶೇ. 56

ರಾಹುಲ್ : ಶೇ. 21

English summary
CVOTER and ABP news survey: Prime Minister Narendra Modi factor to swing BJP fortunes in three states in 2019. As per survey, BJP all set to loose key three states assembly electiions (Madhya Pradesh, Rajasthan and Chhattisgarh) but, BJP well ahead in general election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X