Election Commission: ಮತದಾನೋತ್ತರ ಸಮೀಕ್ಷೆ ಪ್ರಕಟಿಸಲು ಇಂದೇ ಕೊನೆಯ ದಿನಾಂಕ!
ದೆಹಲಿ ಏಪ್ರಿಲ್ 18: ದೇಶದಲ್ಲಿ ನಾಳೆಯಿಂದ (ಏಪ್ರೀಲ್ 19) ಲೋಕಸಭಾ ಚುನಾವಣೆಗೆ ಮತದಾನ ಆರಂಭವಾಗಲಿದ್ದು ಚುನಾವಣಾ ಆಯೋಗ ಮತದಾನೋತ್ತರ ಸಮೀಕ್ಷೆ ಪ್ರಕಟಿಸದಂತೆ ಎಲ್ಲಾ ಮಾಧ್ಯಮ ಕಚೇರಿಗಳಿಗೆ ತಿಳಿಸಿದೆ.
ಏಪ್ರೀಲ್ 19ರ ಬೆಳಿಗ್ಗೆಯಿಂದ ಜೂನ್ 1ರ ಸಂಜೆ 6.30 ರವರೆಗೆ ಮತದಾನೋತ್ತರ ಸಮೀಕ್ಷೆ ಪ್ರಕಟಿಸದಂತೆ ಎಲ್ಲಾ ಮಾಧ್ಯಮ ಕಚೇರಿಗಳಿಗೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.

ದಿನಾಂಕ 19/04/2024ರ ಬೆಳಗ್ಗೆ 7.00 ಗಂಟೆ ಮತ್ತು ದಿನಾಂಕ 01/06/2024ರ ಸಂಜೆ 6.30 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೇ ಮಾಧ್ಯಮದಲ್ಲಿ ಮತದಾನಕ್ಕೆ ಸಂಬಂಧಪಟ್ಟ ಅಭಿಪ್ರಾಯದ ಸಮೀಕ್ಷೆಗಳು ಸೇರಿದಂತೆ ಚುನಾವಣೆಗೆ ಸಂಬಂಧಪಟ್ಟ ಯಾವುದೇ ಸಮೀಕ್ಷೆಯ ಫಲಿತಾಂಶವನ್ನು ಪ್ರಸಾರ ಮಾಡಲು ನಿರ್ಬಂಧಿಸಲಾಗಿದೆ ಎಂದು ಚುನಾವಣಾ ಆಯೋಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಚುನಾವಣಾ ಹಂತಗಳು
ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತವು ಏಪ್ರಿಲ್ 19 ರಂದು, ಎರಡನೇ ಹಂತವು ಏಪ್ರಿಲ್ 26 ರಂದು, ಮೂರನೇ ಹಂತವು ಮೇ 7 ರಂದು, ನಾಲ್ಕನೇ ಹಂತವು ಮೇ 13 ರಂದು, ಐದನೇ ಹಂತವು ಮೇ 20 ರಂದು, ಆರನೇ ಹಂತವು ಮೇ 25 ರಂದು ಮತ್ತು ಏಳನೇ ಹಂತವು ಜೂನ್ 1, 2024 ರಂದು ನಡೆಯಲಿದೆ.
ಈ ರಾಜ್ಯಗಳಲ್ಲಿ ಏಪ್ರಿಲ್ 19 ರಂದು ಚುನಾವಣೆ
ಏಪ್ರಿಲ್ 19 ರಂದು ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಪುದುಚೇರಿಯಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ.
ಎರಡನೇ ಹಂತದ ಮತದಾನ ಏಪ್ರಿಲ್ 26 ರಂದು 13 ರಾಜ್ಯಗಳ 89 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.












Click it and Unblock the Notifications