Vokkaliga and Congress: ಒಕ್ಕಲಿಗ ಮಠಗಳಿಗೆ ಕಾಂಗ್ರೆಸ್ ನಾಯಕರು ದೌಡು... ಅಂತರಿಕ ಸಮೀಕ್ಷೆಯಲ್ಲಿ ಅಂತದ್ದೇನಿದೆ?
ಬೆಂಗಳೂರು, ಏಪ್ರಿಲ್.06: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಪಕ್ಷಗಳು ಸೋಲು ಗೆಲುವಿನ ಬಗ್ಗೆ ತಮ್ಮಲ್ಲೇ ಆಂತರಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಇವುಗಳ ಅಧಾರದಲ್ಲಿ ರಾಜಕೀಯ ನಾಯಕರು ತಮ್ಮ ಚುನಾವಣಾ ರಣತಂತ್ರ ಹೆಣೆಯುತ್ತಿದ್ದಾರೆ. ಇತ್ತೀಚೆಗಿನ ಕಾಂಗ್ರೆಸ್ ಆಂತರಿಕ ಸಮೀಕ್ಷೆ ಪಕ್ಷಕ್ಕೆ ದೊಡ್ಡ ಶಾಕ್ ನೀಡಿದೆ.
ಕಾಂಗ್ರೆಸ್ ಅನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಗೊತ್ತೆ ಇದೆ. ಈ ಸಮಯದಲ್ಲಿ, 90 ರಷ್ಟು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷಗಳ ಮೈತ್ರಿಯಿಂದ ಸಂತಸಗೊಂಡಿದ್ದಾರೆ. ಇದು ಹಳೆ ಮೈಸೂರಿನ ಒಕ್ಕಲಿಗ ಭದ್ರಕೋಟೆಯಲ್ಲಿ ಕಾಂಗ್ರೆಸ್‌ಗೆ ಮಾರಕವಾಗಬಹುದು ಎಂಬ ವಿಚಾರ ಸಮೀಕ್ಷೆಯೊಂದರಲ್ಲಿ ತಿಳಿಸಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ನಾಯಕರು ಒಕ್ಕಲಿಗ ಮಠಗಳತ್ತು ಮುಖ ಮಾಡಿದ್ದು, ಕಾಂಗ್ರೆಸ್ ಪಕ್ಷ ಒಕ್ಕಲಿಗ ಸಮುದಾಯದ ವಿರುದ್ಧವಲ್ಲ ಎಂದು ಸಾಬೀತುಪಡಿಸಲು ಹೊರಟಿದೆ.

ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಪ್ರಾಬಲ್ಯವಿದೆ ಎಂದು ಹೇಳಿಕೊಳ್ಳುತ್ತಲೇ ಇದ್ದಾರೆ. ಆದರೆ, ಒಕ್ಕಲಿಗ ಸಮುದಾಯದ ಮತದಾರರು ಎಲ್ಲಿಗೆ ಹೋಗುವುದು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಇದಕ್ಕಾಗಿಯೇ ಕಾಂಗ್ರೆಸ್ ಅವರನ್ನು ತನ್ನತ್ತ ಸೆಳೆಯಲು ಏನು ಬೇಕಾದರೂ ಮಾಡುತ್ತಿದೆ. ಜೆಡಿಎಸ್ ಕೂಡ ತನ್ನ ಉಳಿವಿಗಾಗಿ ಈ ಕ್ಷೇತ್ರದಲ್ಲಿ ಭರ್ಜರಿ ರಣತಂತ್ರ ಹೆಣೆಯುತ್ತಿದೆ.
ಒಕ್ಕಲಿಗ ಸಮುದಾಯದ ಪರವಾಗಿಯೇ ಕಾಂಗ್ರೆಸ್ ಇದೆ ಎಂಬುದನ್ನು ತಿಳಿಸಲು, ಇತ್ತೀಚೆಗೆ ತಡರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಕೆ ವಿ ಗೌತಮ್ ಸೇರಿದಂತೆ ಇತರೆ ಅಭ್ಯರ್ಥಿಗಳು ಆದಿ ಚುಂಚನಗಿರಿ ಮಠದ ಮುಖ್ಯಸ್ಥ ನಿರ್ಮಲಾನಂದನಾಥ ಸ್ವಾಮಿಗಳ ಬಳಿ ಆಶೀರ್ವಾದ ಪಡೆದಿದ್ದಾರೆ. ಇತ್ತ, ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಕೂಡ ಆಶೀರ್ವಾದ ಪಡೆದಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ 30 ರಿಂದ 35 ರಷ್ಟು ಒಕ್ಕಲಿಗರು ತಮ್ಮದೆ ಸಮುದಾಯದ ಎಂ ಲಕ್ಷ್ಮಣ್ ಬಗ್ಗೆ ಒಲವು ತೋರಿದ್ದಾರೆ. ಈ ಕ್ಷೇತ್ರದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಓಟು ನೀಡುವ ಕಾರಣ ಫಲಿತಾಂಶ ಏನು ಬೇಕಾದರೂ ಆಗಬಹುದು ಎನ್ನುತ್ತಾರೆ ಕಾಂಗ್ರೆಸ್ ನಾಯಕರು.

ಒಕ್ಕಲಿಗರು, ಬಂಟ್ಸ್ ಮತ್ತು ರೆಡ್ಡಿ ಸೇರಿದಂತೆ ಸಮುದಾಯದ ನಾಯಕರಿಗೆ ಕಾಂಗ್ರೆಸ್ ಎಂಟು ಟಿಕೆಟ್ ನೀಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಈ ಮೂಲಕ ಪಕ್ಷ ಈ ಸಮುದಾಯಗಳ ಪರವಾಗಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾರಣದಿಂದ ಸಾಕಷ್ಟು ಜನ ಕಾಂಗ್ರೆಸ್ ಕಡೆಗೆ ಒಲವು ತೋರಿಸಿದ್ದಾರೆ. ಮಿದನ್ನು ಬಹಿರಂಗವಾಗಿಯೂ ಹೇಳಿಕೊಂಡಿದ್ದಾರೆ.
ಇದಲ್ಲದೆ ಬಹುತೇಕ ಕ್ಷೇತ್ರಗಳಲ್ಲಿ ಇದೇ ಪರಿಸ್ಥಿತಿ ಇರುವ ಕಾರಣ ಬೆಂಗಳೂರು ದಕ್ಷಿಣ ಅಭ್ಯರ್ಥಿ ಸೌಮ್ಯರೆಡ್ಡಿ, ಬೆಂಗಳೂರು ಉತ್ತರ ಅಭ್ಯರ್ಥಿ ಪ್ರೊ.ರಾಜೇಗೌಡ, ತುಮಕೂರಿನ ಎಸ್‌ಪಿ ಮುದ್ದಹನುಮೇಗೌಡ ಸೇರಿದಂತೆ ಒಕ್ಕಲಿಗ ಮುಖಂಡರು ಹಾಗೂ ಅಭ್ಯರ್ಥಿಗಳು ಸ್ವಾಮೀಜಿಯವರನ್ನು ಭೇಟಿ ಮಾಡಿದ್ದಾರೆ.
ಇದರ ಜೊತೆಗೆ ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ, ಮಂಡ್ಯದಿಂದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ. ಅವರು ಕೂಡ ಹಳೆ ಮೈಸೂರು ಭಾಗದಲ್ಲಿ ಚುನಾವಣೆ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೇ ಮಂಡ್ಯ ಚುನಾವಣಾ ಫಲಿತಾಂಶದಲ್ಲಿಯೂ ಹೆಚ್ಚುಕಡಿಮೆ ಆಗುವ ಸಂಭವವಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.












Click it and Unblock the Notifications