CSDS Lokniti pre poll Survey 2024: ಸಿಎಸ್‌ಡಿಎಸ್ ಲೋಕನೀತಿ 2024 ಚುನಾವಣಾ ಪೂರ್ವ ಸಮೀಕ್ಷೆ: ದೇಶದಲ್ಲಿ ಯಾರಿಗೆ ಗೆಲುವು?
2024ರ ಸಾರ್ವತ್ರಿಕ ಚುನಾವಣೆ ಪ್ರಾರಂಭವಾಗುವ ಮೊದಲು ಹಲವಾರು ಸಮೀಕ್ಷೆಗಳು ನಡೆದಿವೆ. ಈ ಸಮೀಕ್ಷೆಗಳ ಮೂಲಕ ಮುಂದಿನ ರಾಜಕೀಯ ಭವಿಷ್ಯ ಯಾವ ಪಕ್ಷಕ್ಕೆ ಉತ್ತಮವಾಗಿದೆ ಎನ್ನುವ ಲೆಕ್ಕಾಚಾರ ಮಾಡಬಹುದು. ಇತ್ತೀಚೆಗೆ CSDS-ಲೋಕನೀತಿ 2024 ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯ ವರದಿ ಬಹಿರಂಗಗೊಂಡಿದ್ದು ಮತ್ತೆ ಮೋದಿ ಅಲೆ ಸೃಷ್ಟಿಸುವ ಲಕ್ಷಣಗಳು ದಟ್ಟವಾಗಿವೆ.
ಹೌದು...ಈ ಬಾರಿ ಮತ್ತೆ ದೇಶದಲ್ಲಿ ನರೇಂದ್ರ ಮೋದಿ ಮೋಡಿ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್‌ಗೆ ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ.

2024ರ ಸಾರ್ವತ್ರಿಕ ಚುನಾವಣೆ ಪ್ರಾರಂಭವಾಗುವ ಮೂರು ವಾರಗಳ ಮೊದಲು ಮಾಡಿದ CSDS-Lokniti ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, ಬಿಜೆಪಿ I.N.D.I.A ಪ್ರತಿಸ್ಪರ್ಧಿ ಮೈತ್ರಿಕೂಟಕ್ಕಿಂತ 12 ಶೇಕಡಾವಾರು ಮುನ್ನಡೆ ಸಾಧಿಸಿದೆ. ಮೋದಿ ಅವರ ಬಲಿಷ್ಠ ನಾಯಕತ್ವ, ಬಿಜೆಪಿ ಪ್ರತಿಪಾದಿಸುವ ಹಿಂದೂ ರಾಷ್ಟ್ರೀಯವಾದದ ಕಾರ್ಯಸೂಚಿ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಟೆ ಹೆಚ್ಚಾಗುತ್ತಿರುವುದನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನೆರವಿಗೆ ಬರಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿಸಿದೆ.
ಆದರೆ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿದಿಲ್ಲ. ಬೆಳವಣಿಗೆಯ ಪ್ರಯೋಜನ ಎಲ್ಲರಿಗೂ ಸಮಾನವಾಗಿ ದೊರಕಿಲ್ಲ ಎಂದು ವರದಿಯು ಉಲ್ಲೇಖಿಸುತ್ತದೆ. ದೇಶದ 19 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 10 ಸಾವಿರ ಮಂದಿಯಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇಕಡ 27ರಷ್ಟು ಮಂದಿ ನಿರುದ್ಯೋಗವು ಪ್ರಮುಖ ಸಮಸ್ಯೆ ಎಂದು ಹೇಳಿಕೊಂಡಿದ್ದಾರೆ. ಬೆಲೆ ಏರಿಕೆಯ ಪ್ರಮುಖ ಸಮಸ್ಯೆ ಎಂದು ಹೇಳಿದವರ ಪ್ರಮಾಣವು ಶೇ. 23ರಷ್ಟಿದೆ ಎಂದು ಸಮೀಕ್ಷೆ ಹೇಳಿದೆ.

ನರೇಂದ್ರ ಮೋದಿ ಅವರು ಮೊದಲು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿತ್ತು. ಅದನ್ನು ಕಡಿಮೆ ಮಾಡುವ ಭರವಸೆಯನ್ನು ಮೋದಿ ಅವರು ನೀಡಿದ್ದರು. ಆದರೆ ಅದಾಗಿಲ್ಲ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ದೇಶದಲ್ಲಿ ನಿರುದ್ಯೋಗ ಪ್ರಮಾಣವು ಶೇ.4.9ರಷ್ಟು ಇತ್ತು. ಇದು 2022-23ರಲ್ಲಿ ಶೇ.5.4ಕ್ಕೆ ಏರಿಕೆ ಆಗಿದೆ. 2022-23ರಲ್ಲಿ 15ರಿಂದ 29 ವರ್ಷದ ನಡುವಿನ ವಯಸ್ಸಿನ ನಗರವಾಸಿ ಯುವಕರ ಪೈಕಿ ಶೇಕಡ 16ರಷ್ಟು ಮಂದಿ ನಿರುದ್ಯೋಗಿಗಳಾಗಿದ್ದರು. ಇದಕ್ಕೆ ಕಾರಣ ಅಗತ್ಯ ಕೌಶಲಗಳು ಇಲ್ಲದಿರುವುದು ಹಾಗೂ ಗುಣಮಟ್ಟದ ಉದ್ಯೋಗಗಳ ಕೊರತೆ ಎಂಬುದನ್ನು ಸರ್ಕಾರಿ ಅಂಕಿ-ಅಂಶಗಳು ಹೇಳುತ್ತಿವೆ.
ಇನ್ನೂ ರಾಮ ಮಂದಿರ ನಿರ್ಮಾಣ ನರೇಂದ್ರ ಮೋದಿ ಅವರಿಗೆ ಈ ಬಾರಿ ಚುನಾವಣೆಗೆ ಸಾಕಷ್ಟು ಜನಬೆಂಬಲವನ್ನು ತಂದುಕೊಟ್ಟಿದೆ ಎಂದು ಸಮೀಕ್ಷೆ ಬಹಿರಂಗಪಡಿಸುತ್ತದೆ. ಸಮೀಕ್ಷೆಯಲ್ಲಿ 22ರಷ್ಟು ಜನ ಮೋದಿ ನೇತೃತ್ವದ ಸರ್ಕಾರ ಮಾಡಿದ ಅತ್ಯಂತ ಇಷ್ಟವಾದ ಕೆಲಸ ರಾಮ ಮಂದಿರ ನಿರ್ಮಾಣ ಎಂದು ಹೇಳಿದ್ದಾರೆ. 79ರಷ್ಟು ಜನ ಭಾರತವೂ ಹಿಂದೂಗಳಿಗೆ ಮಾತ್ರವೇ ಅಲ್ಲ, ಎಲ್ಲ ಧರ್ಮೀಯರಿಗೂ ಸಮಾನವಾಗಿ ಸೇರುತ್ತದೆ ಎಂದಿದ್ದಾರೆ. ಜೊತೆಗೆ 48ರಷ್ಟು ಜನ ರಾಮ ಮಂದಿರ ನಿರ್ಮಾಣ ಹಿಂದೂ ಅಸ್ಮಿತೆಯನ್ನು ಗಟ್ಟಿಗೊಳಿಸಲಿದೆ ಎಂದಿದ್ದಾರೆ.












Click it and Unblock the Notifications