Lok Poll Prepoll Survey: ಕಾಂಗ್ರೆಸ್‌ ಮುಖದಲ್ಲಿ ಮಂದಹಾಸ ಮೂಡಿಸಿದ ಸಮೀಕ್ಷೆ: ಈ ಸಮೀಕ್ಷೆ ಮೇಲೆ ಯಾಕಿಷ್ಟು ನಂಬಿಕೆ?

ಬೆಂಗಳೂರು, ಏಪ್ರಿಲ್. 14: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಕಳೆದ ಲೋಕ ಸಮರದಲ್ಲಿ ಕೇವಲ ಒಂದು ಸ್ಥಾನ ಗಳಿಸಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್‌ಗೆ ಈ ಬಾರಿಯ ವಿಧಾನಸಭೆ ಚುನಾವಣೆ ಗೆಲುವಿನಿಂದ ಸಕತ್ ಹೈಪ್‌ನಲ್ಲಿದೆ. ಇದಕ್ಕೆ ಪೂರಕವೆಂಬಂತೆ ಕೆಲವು ಸಮೀಕ್ಷೆಗಳು ಕಾಂಗ್ರೆಸ್‌ ಕೈ ಹಿಡಿದಿವೆ.

ಲೋಕ್ ಪೋಲ್ (Lok Poll) ಸಮೀಕ್ಷೆ ಈ ಬಾರಿ ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವರದಿ ಬಹಿರಂಗಪಡಿಸಿದೆ. ಇದು ಕಳೆದ ಬಾರಿಯ ಗೆಲುವಿನ ಮತ್ತಿನಲ್ಲಿರುವ ಬಿಜೆಪಿಯ ನಿದ್ದೆ ಕೆಡಿಸಿದೆ. ಕಾಂಗ್ರೆಸ್ ಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಭರವಸೆಯಲ್ಲಿದೆ. ಇದಕ್ಕೆ ತಕ್ಕಂತೆ ಲೋಕ್‌ ಪೋಲ್ ಸಮೀಕ್ಷೆ ಸಾಥ್ ನೀಡಿದೆ.

Lok Sabha Election 2024 Lok Poll Pre-poll Survey shows clear win for Congress

ಲೋಕ್‌ ಪೋಲ್ ಸಮೀಕ್ಷೆಯ ಅಂಕಿ ಅಂಶಗಳು

ಕರ್ನಾಟಕ ರಾಜ್ಯದ ಬಗ್ಗೆ ಸಮೀಕ್ಷೆ ನಡೆಸಿರುವ ಲೋಕ್‌ ಪೋಲ್ ಅಂತಿಮ ಅಂಕಿಅಂಶಗಳಳ ಪ್ರಕಾರ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 11 ರಿಂದ 13 ಸ್ಥಾನಗಳನ್ನು ಮಾತ್ರ ಗಳಿಸಲಿದೆ. ಕಾಂಗ್ರೆಸ್ 15 ರಿಂದ 17 ಸ್ಥಾನಗಳನ್ನು ಗಳಿಸಲಿದೆ. ಈ ಸಮೀಕ್ಷೆಗೆ ಒಂದು ಲೋಕಸಭಾ ಕ್ಷೇತ್ರದಿಂದ 1,350 ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.

▪ ಬಿಜೆಪಿ : 11 - 13

▪ ಕಾಂಗ್ರೆಸ್: 15 - 17

ಯಾಕಿಷ್ಟು ನಂಬಿಕೆ ಈ ಲೋಕ್‌ ಪೋಲ್ ಸಮೀಕ್ಷೆ ಮೇಲೆ?

ಈ ಲೋಕ್‌ ಪೋಲ್ ಸಮೀಕ್ಷೆ ಕಾಂಗ್ರೆಸ್ ಪಕ್ಷಕ್ಕೆ ಹೇಳಲಾರದ ಖುಷಿ ನೀಡಿದೆ. ಕಾರಣ ಇದು ಪಕ್ಕ ಇದೆ ಎನ್ನುವುದು. ಹಾಗಾದರೆ, ಲೋಕ್‌ ಪೋಲ್ ಸಮೀಕ್ಷೆ ಮೇಲೆ ಯಾಕೆ ಇಷ್ಟು ನಂಬಿಕೆ ಎಂಬುದನ್ನು ಗಮನಿಸುವುದಾದರೆ, ಇದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಫಲಿತಾಂಶವನ್ನು ಸರಿಯಾಗಿ ತಿಳಿಸಿತ್ತು.

ಹೌದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 59 ರಿಂದ 65 ಸ್ಥಾನಗಳಲ್ಲಿ ಗೆಲ್ಲಲಿದೆ. 31% -32% ಮತಗಳನ್ನು ಪಡೆಯಲಿದೆ ಎಂದಿತ್ತು. ಕಾಂಗ್ರೆಸ್ 42% - 45% ಮತ ಹಂಚಿಕೆ ಪಡೆದು ಬರೋಬ್ಬರಿ 129 ರಿಂದ 134 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆ ಹೇಳಿತ್ತು. ಇನ್ನು, ಜೆಡಿಎಸ್‌ಗೆ 23 ರಿಂದ 28 ಸ್ಥಾನ, ಇತರೆ ಅಭ್ಯರ್ಥಿಗಳು 0-2 ಸ್ಥಾನ ಪಡೆಯುತ್ತಾರೆ ಎಂದು ಅಂದಾಜಿಸಿತ್ತು. ಇದು ಚುನಾವಣಾ ಫಲಿತಾಂಶಕ್ಕೆ ಹೆಚ್ಚು ಹತ್ತಿರವಾಗಿದೆ. ಹೀಗಾಗಿಯೇ ಈ ಸಮೀಕ್ಷೆ ಮೇಲೆ ರಾಜಕೀಯ ಪಕ್ಷಗಳು, ನಾಯಕರು ಮತ್ತು ರಾಜಕೀಯ ವಿಶ್ಲೇಶಕರು ಹೆಚ್ಚು ನಂಬಿಕೆಯಿಡುತ್ತಾರೆ.

Lok Sabha Election 2024 Lok Poll Pre-poll Survey shows clear win for Congress

ಲೋಕ್‌ ಪೋಲ್ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯ ಸತ್ಯ ಮತ್ತು ಸಂಶೋಧನೆ ಹೀಗಿವೆ.

* ನಿರುದ್ಯೋಗ, ಹಣದುಬ್ಬರ, ಪ್ರಧಾನಮಂತ್ರಿ ಅಭ್ಯರ್ಥಿ, ಕಲ್ಯಾಣ ಕ್ರಮಗಳು ಮತ್ತು ಕನ್ನಡಾಭಿಮಾನ ಇವು ಮತಕ್ಕಾಗಿ ಪರಿಗಣಿಸಲಾಗುತ್ತಿರುವ ಪ್ರಮುಖ 5 ಅಂಶಗಳಾಗಿವೆ.

* ಗ್ಯಾರಂಟಿ ಫಲಾನುಭವಿಗಳಲ್ಲಿ ರಾಜ್ಯದೊಳಗೆ ಭಾರಿ ಉತ್ತಮ ಅಭಿಪ್ರಾಯ ಇದೆ.

* ಸದಾನಂದಗೌಡ ಮತ್ತು ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳಲ್ಲಿ ಭಾರೀ ಬದಲಾವಣೆಯಾಗಿದೆ.

* ಜೆಡಿಎಸ್ ನಾಯಕರ ನಡುವಿನ ತಿಳುವಳಿಕೆ ಕೊರತೆಯಿಂದ ಬಿಜೆಪಿ ಪರ ಕೆಲಸ ಮಾಡುತ್ತಿಲ್ಲ. ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಚಿತ್ರದುರ್ಗ, ಚಾಮರಾಜನಗರ, ರಾಯಚೂರು ಪಿಸಿಗಳಲ್ಲಿ ಜೆಡಿ(ಎಸ್) ಉತ್ತಮ ಕಾರ್ಯಕರ್ತರನ್ನು ಹೊಂದಿರುವ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಸ್ಥಾನಗಳಲ್ಲಿ ಜೆಡಿಎಸ್ ನಾಯಕರಿಗೆ ಅಗೌರವ ತೋರಲಾಗುತ್ತಿದೆ.

* ಸಮುದಾಯಕ್ಕಾಗಿ ಕೈಗೊಂಡ ಕಲ್ಯಾಣ ಕ್ರಮಗಳಿಗಾಗಿ ಬೃಹತ್ ಅಹಿಂದ ಬಲವರ್ಧನೆ ಇದೆ.

* ಬಿಜೆಪಿಯೊಳಗಿನ ಒಳಜಗಳವು ನಿಕಟ ಸ್ಪರ್ಧೆ ಇರುವ ಕ್ಷೇತ್ರಗಳಲ್ಲಿ ಮತಗಳನ್ನು ವಿಭಜಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+