Namma Metro: 'ಮೆಟ್ರೋ' ಪ್ರಯಾಣಿಕರಿಗಾಗಿ ಏ. 8ರಿಂದ ಸಮೀಕ್ಷೆ: ನೀವು ಭಾಗವಹಿಸಲು ಹೀಗೆ ಮಾಡಿ

ಬೆಂಗಳೂರು, ಏಪ್ರಿಲ್ 07: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ವಿಶೇಷ ಅನುಭವ ನೀಡಲು, ಉತ್ತಮ ಸೇವೆ ಮಟ್ಟ ಹೆಚ್ಚಿಸುವ ಸಂಬಂಧ ಕಾಮೆಟ್ ನೊವಾ (COMET NOVA) ಪ್ರಯಾಣಿಕರಿಂದ ಸಮೀಕ್ಷೆ ನಡೆಯುತ್ತಿದೆ. ಏನಿದು ಸಮೀಕ್ಷೆ, ಹೇಗೆ ಪಾಲ್ಗೊಳ್ಳಬೇಕು ಎಂಬ ಮಾಹಿತಿ ಇಲ್ಲಿ ತಿಳಿಯಿರಿ.

ಹಸಿತು ಮತ್ತು ನೇರಳೆ ಮಾರ್ಗದಲ್ಲಿ ಪ್ರಯಾಣಿಸುವ ನಮ್ಮ ಮೆಟ್ರೋದ ಎಲ್ಲಾ ಪ್ರಯಾಣಿಕರ ತೃಪ್ತಿ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಈ ಸಮೀಕ್ಷೆಯು ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ.

Namma Metro Passenger Survey From April 8th For Quality Service Improvement BMRCL

ಸಮೀಕ್ಷೆ ನಡೆಯುವ ದಿನಾಂಕ

ಮೆಟ್ರೋ ಪ್ರಯಾಣಿಕರ ಈ ತೃಪ್ತಿ ಸಮೀಕ್ಷೆಯ ಅವಧಿಯು ಇದೇ ತಿಂಗಳು ಏಪ್ರಿಲ್ 8ನೇ ಏಪ್ರಿಲ್‌ನಿಂದ ಮೇ 6ನೇ ದಿನಾಂಕದವರೆಗೆ ನಡೆಸಲಿದೆ. ಸಮೀಕ್ಷೆಯು ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವುದಲ್ಲದೆ, ಲಂಡನ್‌ ಇಂಪೀರಿಯಲ್ ಕಾಲೇಜ್ ಪ್ರಮುಖವಾಗಿ ನಮ್ಮ ಮೆಟ್ರೋಗಾಗಿ ಕಾರ್ಯಕ್ಷಮತೆ ಸೂಚಕಗಳನ್ನು ರೂಪಿಸಲು ಅಧ್ಯಯವನ್ನು ಮಾಡಲು ಸಹಾಯವಾಗಲಿದೆ ಎಂದು ನಮ್ಮ ಮೆಟ್ರೊ ವಿಶ್ವಾಸ ವ್ಯಕ್ತಪಡಿಸಿದೆ.

ನಮ್ಮ ಮೆಟ್ರೋ ಪ್ರಯಾಣಿಕರ ಈ ಸಮೀಕ್ಷೆಯು ಎರಡು ಭಾಷೆಗಳಲ್ಲಿ ನಡೆಯಲಿದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಡೆಯಲಿರುವ ಸಮೀಕ್ಷೆಯಲ್ಲಿ ಪ್ರಯಾಣಿಕರು ಪಾಲ್ಗೊಂಡು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ದ ಸೇವೆ ಕುರಿತು ಅಗತ್ಯ ಸಲಹೆ ನೀಡಬಹುದು.

ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಹೀಗೆ ಮಾಡಿ

ನೀವು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕಾದರೆ, ನಮ್ಮ ಮೆಟ್ರೋ ಅಧಿಕೃತ ವೆಬ್‌ಸೈಟ್ www.bmrc.co.in ನಲ್ಲಿ ಪ್ರತಿಕ್ರಿಯೆ ಪುಟಗಳನ್ನು ತೆರೆಯಬೇಕು. ಅಲ್ಲಿ ಕಾಣುವ ಸಮೀಕ್ಷೆಯ ಕಾಲಂ ಆಯ್ಕೆ ಮಾಡಿಕೊಳ್ಳುವ ಮುಖೇನ ನೀವು ಸಹ ಭಾಗವಹಿಸಬಹುದಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Namma Metro Passenger Survey From April 8th For Quality Service Improvement BMRCL

ಅಧಿಕೃತ ಜಾಲತಾಣದ ಜೊತೆಗೆ ಪ್ರಯಾಣಿಕರು ಕ್ಯೂಆರ್ ಕೋಡ್‌ಗಳನ್ನು ನಮ್ಮ ಮೆಟ್ರೋ ಅಧಿಕೃತ ಮೊಬೈಲ್ ಅಪ್ಲಿಕೇಶನ್‌ನಲ್ಲಿ ರೈಲು ಮತ್ತು ನಿಲ್ದಾಣಗಳಲ್ಲಿ ಪ್ರದರ್ಶಿಸಲಾಗುತ್ತದೆ. ನಮ್ಮ ಮೆಟ್ರೋ ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತ್ತು ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆ ನೀಡುವಂತೆ ನಮ್ಮ ಮೆಟ್ರೋ ಶನಿವಾರ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದೆ.

ನಮ್ಮ ಮೆಟ್ರೋ ಜಾಲಕ್ಕೆ ಹೆಚ್ಚುವರಿ ರೈಲುಗಳು

ಬೆಂಗಳೂರಿನಾದ್ಯಂತ ಹಾಲಿ 73 ಕಿಲೋ ಮೀಟರ್ ವ್ಯಾಪ್ತಿ ಹೊಂದಿರುವ ನಮ್ಮ ಮೆಟ್ರೋ ಜಾಲದಲ್ಲಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕ್ರಮೇಣ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆ ಆಗುತ್ತಿದೆ. ಹಾಲಿ ಎರಡು ಮಾರ್ಗಗಳಿಗೆ ಪ್ರಯಾಣಿಕರ ಅನುಕೂಲಕ್ಕಾಗಿ 20 ಹೊಸ ರೈಲುಗಳನ್ನು ಸೇರ್ಪಡೆಗೊಳಿಸಲು ನಮ್ಮ ಮೆಟ್ರೋ ಅಧಿಕಾರಿಗಳು ಚಿಂತನೆ ನಡೆಸಿದೆ.

ಎಲ್ಲವು ಅಂದುಕೊಂಡಂತಾದರೆ ಇದೇ ವರ್ಷಾಂತ್ಯಕ್ಕೆ ಉದ್ದೇಶಿತ ಕಂಪನಿಯಿಂದ ಹೊಸ ರೈಲುಗಳು ಬೆಂಗಳೂರಿಗೆ ರವಾನೆ ಆಗಲಿವೆ ಎಂದು ನಮ್ಮ ಮೆಟ್ರೋ ಮೂಲಗಳು ಮಾಹಿತಿ ನೀಡಿವೆ.

ಎಲ್ಲವು ಅಂದುಕೊಂಡತಾದರೆ ಮುಂದಿನ ದಿನಗಳಲ್ಲಿ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದಲ್ಲಿ ಪೀಕ್ ಸಮಯದಲ್ಲಿ ಉಂಟಾಗುತ್ತಿರುವ ಜನದಟ್ಟಣೆ ಇಳಿಕೆ ಆಗಲಿದೆ. ಇದಕ್ಕೆ ಬರಲಿರುವ ಹೆಚ್ಚುವರಿ ರೈಲುಗಳು ಸಹಕಾರಿಯಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+