ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Hindenburg report on Adani: ಅದಾನಿ ವಿರುದ್ಧ ಸೆಬಿ ತನಿಖೆಗೆ ಕಾಂಗ್ರೆಸ್‌ ಒತ್ತಾಯ

ಉದ್ಯಮಿ ಗೌತಮ್‌ ಅದಾನಿ ಸಮೂಹವು ಷೇರು ತಿರುವುವಿಕೆ ಹಾಗೂ ಲೆಕ್ಕಪತ್ರ ವಂಚನೆ ಕೃತ್ಯದ ವಿರುದ್ಧ ಸೆಬಿಯಿಂದ ಗಂಭೀರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

|
Google Oneindia Kannada News

ನವದೆಹಲಿ, ಜನವರಿ 27: ಉದ್ಯಮಿ ಗೌತಮ್‌ ಅದಾನಿ ಸಮೂಹವು ಷೇರು ತಿರುವುವಿಕೆ ಹಾಗೂ ಲೆಕ್ಕಪತ್ರ ವಂಚನೆ ಕೃತ್ಯ ಎಸಗಿದೆ ಎಂದು ಹಿಂಡೆನ್‌ಬರ್ಗ್ ಸಂಶೋಧನೆಯು ಆರೋಪಿಸಿದ್ದು, ಈ ವಿಷಯದ ಬಗ್ಗೆ ಸೆಬಿಯಿಂದ ಗಂಭೀರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಭಾರತೀಯ ಹಣಕಾಸು ವ್ಯವಸ್ಥೆಯ ಸ್ಥಿರತೆ ಮತ್ತು ಭದ್ರತೆಗೆ ಜವಾಬ್ದಾರರಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಯಿಂದ ಈ ಆರೋಪಗಳಿಗೆ ಸಂಬಂಧಿಸಿದಂತೆ ಗಂಭೀರ ತನಿಖೆಯ ಅಗತ್ಯವಿದೆ ಎಂದು ಜೈರಾಮ್‌ ರಮೇಶ್‌ ಆಗ್ರಹಿಸಿದ್ದಾರೆ.

ರಾಜೀವ್ ಗಾಂಧಿ, ಮನಮೋಹನ್‌ ಸಿಂಗ್‌ ಹೊಗಳಿದ ಗೌತಮ್‌ ಅದಾನಿರಾಜೀವ್ ಗಾಂಧಿ, ಮನಮೋಹನ್‌ ಸಿಂಗ್‌ ಹೊಗಳಿದ ಗೌತಮ್‌ ಅದಾನಿ

ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಮೋದಿ ಸರ್ಕಾರವು ತಮ್ಮ ನೆಚ್ಚಿನ ವ್ಯಾಪಾರ ಸಮೂಹದ ಈ ಕೃತ್ಯ ಎಸಗಿದರೂ ಕಣ್ಣು ಮುಚ್ಚಿ ಕುಳಿತಿರುವುದು ಸರಿಯಲ್ಲ. ಕಪ್ಪುಹಣದ ಕುರಿತಾದ ಎಲ್ಲಾ ಅವಕಾಶಗಳಿಗೆ ಮೋದಿ ಸರ್ಕಾರವು ತನ್ನ ಸ್ನೇಹಿತ ವ್ಯಾಪಾರ ಗುಂಪಿನ ಅಕ್ರಮ ಚಟುವಟಿಕೆಗಳ ಕಡೆಗೆ ಕಣ್ಣು ಮುಚ್ಚಲು ನಿರ್ಧರಿಸಿದೆಯೇ? ಕ್ವಿಡ್ ಪ್ರೊ ಕ್ವೊ ಇದೆಯೇ? ಸೆಬಿ ಈ ಆರೋಪಗಳನ್ನು ಹೆಸರಿಗೆ ಮಾತ್ರವಲ್ಲದೆ ಪೂರ್ಣವಾಗಿ ತನಿಖೆ ಮಾಡುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ.

Congress demands SEBI probe against Gautam Adani

ವೈಯಕ್ತಿಕ ಕಂಪನಿಯ ಕುರಿತಾದ ಸಂಶೋಧನಾ ವರದಿಯ ಬಗ್ಗೆ ಪ್ರತಿಕ್ರಿಯಿಸಲು ಅವರಿಗೆ ಸಾಧ್ಯವಾಗದಿವುದಕ್ಕೆ ಅದಾನಿ ಗ್ರೂಪ್ ಸಾಮಾನ್ಯ ಸಂಘಟಿತ ಸಂಸ್ಥೆಯಲ್ಲ. ಏಕೆಂದರೆ ಅದು ಪ್ರಧಾನಿ ಮೋದಿ ಅವರು ಗುಜರಾತ್ ಸಿಎಂ ಆಗಿದ್ದ ಸಮಯದಿಂದಲೂ ಅವರ ನಿಕಟ ಮಿತ್ರ ಗೌತಮ್‌ ಅದಾನಿ ಎಂದು ಜೈರಾಮ್ ರಮೇಶ್ ಹೇಳಿದರು.

ಫೋರ್ಬ್ಸ್ ದಾನಿಗಳ ಪಟ್ಟಿಯಲ್ಲಿ ಅದಾನಿ, ನಡಾರ್‌ ಹೆಸರುಫೋರ್ಬ್ಸ್ ದಾನಿಗಳ ಪಟ್ಟಿಯಲ್ಲಿ ಅದಾನಿ, ನಡಾರ್‌ ಹೆಸರು

ಮೋದಿ ಸರ್ಕಾರ ಈ ಬಗ್ಗೆ ಪ್ರಯತ್ನಿಸಬಹುದು ಮತ್ತು ಸೆನ್ಸಾರ್ಶಿಪ್ ಹೇರಬಹುದು. ಭಾರತೀಯ ವ್ಯವಹಾರಗಳು ಮತ್ತು ಹಣಕಾಸು ಮಾರುಕಟ್ಟೆಗಳ ಜಾಗತೀಕರಣದ ಯುಗದಲ್ಲಿ ಕಾರ್ಪೊರೇಟ್ ದುರಾಡಳಿತವನ್ನು ಹೇಳುವ ಹಿಂಡೆನ್‌ಬರ್ಗ್ ಮಾದರಿಯ ವರದಿಗಳನ್ನು ಸರಳವಾಗಿ ತಳ್ಳಿಹಾಕಬಹುದು ಮತ್ತು ದುರುದ್ದೇಶಪೂರಿತ ಎಂದು ತಳ್ಳಿಹಾಕಬಹುದೇ?" ಹೇಳಿಕೆ ತಿಳಿಸಿದೆ.

Congress demands SEBI probe against Gautam Adani

ಷೇರು ತಿರುಚುವಿಕೆ ಹಾಗೂ ಲೆಕ್ಕಪತ್ರ ವಂಚನೆ ಬಗ್ಗೆ ಅದಾನಿ ಸಮೂಹದ ಲೀಗಲ್‌ ಅಡ್ವೈಸರ್‌ ಜತಿನ್‌ ಜಲುಂಧ್ವಾಲಾ ಅವರು ಹಿಂಡನ್‌ಬರ್ಗ್‌ ವರದಿಯಿಂದ ಭಾರತೀಯ ಷೇರು ಮಾಡುಕಟ್ಟೆಯೂ ಏರಿಳಿತಕ್ಕೆ ಕಾರಣವಾಗುತ್ತಿದೆ. ಅದಾನಿ ಷೇರು ಇಳಿಕೆಯಿಂದ ಶಾರ್ಟ್‌ ಸೆಲ್ಲರ್‌ ಹಿಂಡನ್‌ಬರ್ಗ್‌ ಪ್ರಯೋಜನ ಪಡೆಯಲಿದೆ. ಈ ಬಗೆಯ ವರದಿ ನೀಡಿರುವ ಸಂಸ್ಥೆ ವಿರುದ್ಧ ಕಾನೂನು ಹೋರಾಟ ಮುಂದಾಗುವುದಾಗಿ ತಿಳಿಸಿದ್ದಾರೆ. ಆದರೆ ಹಿಂಡನ್‌ಬರ್ಗ್‌ ಸಂಸ್ಥೆ ತಾನು ತಮ್ಮ ವರದಿಗಳಿಗೆ ಬದ್ಧವಿರುವುದಾಗಿ ಎಲ್ಲಿ ಬೇಕಾದರೂ ಇದು ಸತ್ಯ ಎಂದು ನಿರೂಪಿಸುತ್ತೇವೆ ಎಂದು ತಿಳಿಸಿದೆ.

English summary
The Congress has demanded a serious probe by the Sebi after the Hindenburg inquiry alleged that the businessman Gautam Adani Group had committed share diversion and accounting fraud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X