ಇಂಧನ ಕ್ಷೇತ್ರದಲ್ಲಿ ಅದಾನಿ ಸಮೂಹದಿಂದ ಮಹತ್ವದ ಹೂಡಿಕೆ!
ಇಂಧನ ಇಲ್ಲದೆ ಮನುಷ್ಯನ ಬದುಕು ನಡೆಯುವುದೇ ಇಲ್ಲ. ಒಂದಲ್ಲ ಒಂದು ರೀತಿಯಲ್ಲಿ ಮನುಷ್ಯ ಇಂಧನದ ಮೇಲೆ ಅವಲಂಬಿತ ಆಗಿದ್ದಾನೆ. ಆದರೆ ಭೂಮಿ ಮೇಲೆ ಇರುವಂತಹ ಪೆಟ್ರೋಲ್, ಡೀಸೆಲ್, ಕಲ್ಲಿದ್ದಲು ಸೇರಿದಂತೆ ಹಲವು ರೀತಿಯ ಇಂಧನ ಮೂಲಗಳು ಈಗ ಖಾಲಿ ಆಗಿವೆ. ಪರಿಸ್ಥಿತಿ ಹಿಗಿದ್ದಾಗ ಮನುಷ್ಯನಿಗೆ ನವೀಕರಿಸಬಹುದಾದ ಇಂಧನವೇ ಆಧಾರ ಎಂಬಂತಾಗಿದ್ದು, ಅದಾನಿ ಸಮೂಹ ಈ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಭಾರತದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರ ವಿಸ್ತರಣೆಗೆ ಅದಾನಿ ಸಮೂಹ ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಭಾರಿ ಪ್ರಮಾಣದ ಹೂಡಿಕೆಗೂ ಸಿದ್ಧತೆ ನಡೆಸಲಾಗಿದೆ. ಇದರ ಜೊತೆ ಅದಾನಿ ಸಮೂಹ ತನ್ನ ಒಡೆತನದ ಸೌರ & ಪವನ ವಿದ್ಯುತ್ ಘಟಕಗಳ ಸಾಮರ್ಥ್ಯ ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ. ಈ ಕಾರಣಕ್ಕೆ ಮುಂದಿನ 7 ವರ್ಷದವರೆಗೆ ಒಟ್ಟು ₹2.3 ಲಕ್ಷ ಕೋಟಿ ಬಂಡವಾಳ ಹೂಡಲು ತೀರ್ಮಾನಿಸಿದೆ ಎಂಬ ಮಾಹಿತಿ ಸಿಕ್ಕಿದೆ. ಭಾರತದ ಕೈಗಾರಿಕೆ ಬೆಳವಣಿಗೆ ಅತಿ ವೇಗವಾಗಿ ನಡೆಯುತ್ತಿದ್ದು, ಜನಸಂಖ್ಯೆಯು ಕೂಡ ಹೆಚ್ಚಾಗಿ ಬೆಳವಣಿಗೆ ಕಾಣುತ್ತಿದೆ. ಈ ಹಿನ್ನೆಲೆ ನವೀಕರಿಸಬಹುದಾದ ಇಂಧನ ಕ್ಷೇತ್ರದ ಬೆಳವಣಿಗೆ ಅಮೂಲ್ಯವಾಗಿದೆ.

ಅದಾನಿ ಗ್ರೂಪ್ ಮಹತ್ವದ ಹೆಜ್ಜೆ?
ಈಗಾಗಲೇ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್, ಭಾರತದ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಕಂಪನಿ ಆಗಿ ತನ್ನ ಸಾಮರ್ಥ್ಯ ತೋರಿಸಿ, ಹೆಸರು ಪಡೆದಿದೆ. ಗುಜರಾತ್‌ನಲ್ಲಿ ಕಛ್ ಪ್ರದೇಶದ ಖಾವ್ಡಾದಲ್ಲಿ ಸೌರ, ಪವನ ವಿದ್ಯುತ್ ಘಟಕ ಅದಾನಿ ಸಮೂಹದಿಂದ ನಡೆಯುತ್ತಿವೆ. ಈಗ ಇಲ್ಲಿ 2 ಗೀಗಾವಾಟ್ ವಿದ್ಯುತ್ ಉತ್ಪಾದನೆ ಕೂಡ ನಡೆಯುತ್ತಿರುವುದು ಗಮನಾರ್ಹ ಸಂಗತಿ ಈಗಿನ ಸಾಮರ್ಥ್ಯವನ್ನ 30 ಗೀಗಾವಾಟ್ ಸಾಮರ್ಥ್ಯಕ್ಕೆ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಹಿನ್ನೆಲೆಯಲ್ಲಿ ₹1.5 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ.
ಬೇರೆ ಬೇರೆ ಸ್ಥಳದಲ್ಲೂ ಹೂಡಿಕೆ
ಮತ್ತೊಂದು ಕಡೆ ಭಾರತದ ಬೇರೆ ಸ್ಥಳದಲ್ಲಿ 50 ಸಾವಿರ ಕೋಟಿ ಬಂಡವಾಳ ಹೂಡಿಕೆ ಮೂಲಕ 6 ರಿಂದ 7 ಗೀಗಾವಾಟ್ ಸಾಮರ್ಥ್ಯದ ಘಟಕದ ಸ್ಥಾಪನೆಗೂ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅದಾನಿ ನ್ಯೂ ಇಂಡಸ್ಟ್ರೀಸ್ ಲಿಮಿಟೆಡ್, ಅದಾನಿ ಎಂಟರ್‌ಪ್ರೈಸಸ್‌ಗೆ ಸೇರಿದ ಘಟಕ ಇದಾಗಿದೆ. ಇದು ಗುಜರಾತ್ ಮುಂದ್ರಾದಲ್ಲಿ ಸೌರ ಫಲಕಗಳು ಹಾಗೂ ವಿಂಡ್ ಟರ್ಬೈನ್ ತಯಾರಿಸುತ್ತಿದ್ದು ಇದರ ಸಾಮರ್ಥ್ಯದ ವಿಸ್ತರಣೆಗಾಗಿ ₹30 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಬಹುದು ಎನ್ನಲಾಗಿದೆ.
ಒಟ್ನಲ್ಲಿ ಭಾರತದ ಅಭಿವೃದ್ಧಿಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ಅಮೂಲ್ಯ ಕೊಡುಗೆ ಸಿಗಲಿದೆ. ಹೀಗಾಗಿಯೇ ನವೀಕರಿಸಬಹುದಾದ ಇಂಧನ ಕ್ಷೇತ್ರದ ಅಭಿವೃದ್ಧಿಗೆ ಈಗ ಮುಂದುವರಿದ ದೇಶಗಳು ಕೂಡ ಸಾಕಷ್ಟು ಒತ್ತು ನೀಡುತ್ತಿವೆ. ಅದೇ ರೀತಿ ಇದೀಗ ಅದಾನಿ ಸಮೂಹ ಕೂಡ ಮಹತ್ವದ ನಿರ್ಧಾರ ಕೈಗೊಂಡಿರುವುದು ಗಮನಾರ್ಹ ಸಂಗತಿ.












Click it and Unblock the Notifications