Adani Group: ಅದಾನಿ ಗ್ರೂಪ್ ವಿರುದ್ಧ ಹೊಸ ಆರೋಪ: ಮೋದಿ ವಿರುದ್ಧ ಕಾಂಗ್ರೆಸ್ ಕೆಂಡ
ಬೆಂಗಳೂರು, ಆಗಸ್ಟ್ 31: ಬಂಡವಾಳ ಹೂಡಿಕೆ ಕುರಿತಂತೆ ಅದಾನಿ ಗ್ರೂಪ್ ವಿರುದ್ಧ ಹೊಸ ಆರೋಪಗಳ ಕೇಳಿ ಬರುತ್ತಿದ್ದಂತೆ ಇತ್ತ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಸಿ ಟೀಕೆ ಮಾಡುತ್ತಿದೆ. ಸಂಘಟಿತ ಸಂಸ್ಥೆಗಳಿಗೆ ಸಂಬಂಧಿಸಿದ ಶೆಲ್ ಕಂಪನಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಶೆಲ್ ಕಂಪನಿಗಳ ಪಾತ್ರವನ್ನು ಸರಿಯಾಗಿ ತನಿಖೆ ಮಾಡುವಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಪಾತ್ರವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅದಾನಿ ಗ್ರೂಪ್‌ಗೆ ಬೇನಾಮಿ ಹಣದ ಹರಿವು ಹರಿದು ಬರುವ ಮೂಲಕ ನಿಯಮ ಉಲ್ಲಂಘಿಸಲಾಗಿದೆ. ಇಂತಹ ವಿಚಾರಗಳಲ್ಲಿ ವಿದೇಶಿ ನಾಗರಿಕರ ಪಾತ್ರ ಹೇಗಿದೆ, ಇನ್ನೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಆಪ್ತರನ್ನು ಶ್ರೀಮಂತಗೊಳಿಸಲು ನಿಯಮಗಳು ಹೇಗಿವೆ, ಅದರ ನಿಯಮ, ಮಾನದಂಡ ಕುರಿತು ಜಯರಾಮ್ ರಮೇಶ್ ಪ್ರಸ್ತಾಪಿಸಿದರು.

ಅದಾನಿ ಆಪ್ತರು ಸಾಕಷ್ಟು ಲಾಭ ಮಾಡಿಕೊಂಡಿದ್ದಾರೆ
ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (OCCRP) ತನಿಖೆ ವರದಿಯಲ್ಲಿ, ಮಾರಿಷಸ್ ಮೂಲಕ ಅದಾನಿ ಗ್ರೂಪ್ ನ ವಿವಿಧ ಕಂಪನಿಗಳ ಷೇರುಗಳ ವಹೀವಾಟು ನಡೆಸಿರುವ ಮೂಲಕ ಅದಾನಿ ಆಪ್ತರು ಭಾರೀ ಲಾಭ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅದಾನಿ ಆಪ್ತರು ಸಾರ್ವಜನಿಕವಾಗಿ ಕೋಟ್ಯಾಂತರ ರೂ. ಹಣ ಹೂಡಿಕೆ ಮಾಡುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂದು ತಿಳಿಸಿದೆ ಎಂದು ರಮೇಶ್ ಹೇಳಿದರು.
ಪ್ರಕರಣ ಕುರಿತು ಸರಿಯಾಗಿ ತನಿಖೆ ಮಾಡದಿರುವುದು ಸೆಬಿ ನಿಯಮಗಳ ಮೇಲೆ ಅನುಮಾನ ಮೂಡಲು ಕಾರಣವಾಗಿದೆ. ಹಿಂಡನ್‌ಬರ್ಗ್ ರಿಸರ್ಚ್ ತನಿಖಾ ವರದಿ ಬಿಡುಗಡೆಯಾಗಿ ಆರೇಳು ತಿಂಗಳ ನಂತರ ಪತ್ರಕರ್ತರ ಸಮೂಹಕ್ಕೆ ಸೇರಿದೆ ಎನ್ನಲಾಗುವ ವೆಬ್ಸೈಟ್ ನಲ್ಲಿ ಒಸಿಸಿಆರ್‌ಪಿ ತನಿಖಾ ವರದಿ ಪ್ರಕಟಗೊಂಡಿದೆ.
ಆರೋಪ ನಿರಾಕರಿಸಿದ ಅದಾನಿ ಗ್ರೂಪ್
ಮಾರಿಷಸ್ ದೇಶದ ಅಪಾರದರ್ಶಕ ಫಂಡ್ಗಳ ಮೂಲಕ ಅದಾನಿ ಗ್ರೂಪ್ನ ಬಿಸಿನೆಸ್ ಆಪ್ತರು ಹಣ ಹೂಡಿಕೆ ಮಾಡಿದ್ದಾರೆ. ಅನಾಮಧೇಯ ಪತ್ರಕರ್ತರು ತನಿಖೆ ನಡೆಸಿ ಈ ವರದಿ ರೂಪಿಸಿದ್ದಾರೆ ಎಂದು ಹೇಲಲಾಗುತ್ತಿದೆ. ಆದರೆ ಅದಾನಿ ಗ್ರೂಪ್ ಮಾತ್ರ ಈ ಎಲ್ಲ ಆರೋಪಗಳನ್ನು ಒಪ್ಪಲು ನಿರಾಕರಿಸಿದೆ.
As New Delhi gears up for the 2023 G20 summit meeting, it is worth recalling PM Modi’s words at the November 2014 Brisbane G20 summit calling for global cooperation “to eliminate safe havens for economic offenders”, to “track down and unconditionally extradite money launderers”… pic.twitter.com/xzEpFC76sq
— Jairam Ramesh (@Jairam_Ramesh) August 31, 2023
2023ರ ಜಿ20 ಶೃಂಗಸಭೆಗೆ ನವದೆಹಲಿಯಲ್ಲಿ ಇನ್ನೇನು ಆರಂಭಗೊಳ್ಳಬೇಕಿದೆ. ಇನ್ನೂ 2014ರ ನವೆಂಬರ್‌ನಲ್ಲಿ ನಡೆದ ಬ್ರಿಸ್ಬೇನ್ ಜಿ20 ಶೃಂಗಸಭೆಯಲ್ಲಿ 'ಆರ್ಥಿಕ ಅಪರಾಧಿಗಳಿಗೆ ಸುರಕ್ಷಿತ ತಾಣಗಳನ್ನು ಅಂತ್ಯಗೊಳಿಸಲು ಜಾಗತಿಕ ಸಹಕಾರಕ್ಕೆ ಪ್ರಧಾನಿಯವರು ಕರೆ ನೀಡಿದ್ದರು. ಸದ್ಯದ ಸ್ಥಿತಿಯಲ್ಲಿ ಅವರು ಮಾತನ್ನು ಸ್ಮರಿಸಲು ಯೋಗ್ಯವಾಗಿದೆಯೇ ಎಂದು ಜಯರಾಮ್ ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಜೈರಾಮ್ ವಾಗ್ದಾಳಿ
ಅದಾನಿ ಗ್ರೂಪ್ ಸದಸ್ಯರು ಬಂಡವಾಳ ಹೂಡಿಕೆ ಮೂಲಕ ಕಾನೂನುಗಳ ಸ್ಪಷ್ಟ ಉಲ್ಲಘಂಟನೆ ಬಗ್ಗೆ OCCRP ಮತ್ತು ದಿ ಫೈನಾನ್ಷಿಯಲ್ ಟೈಮ್ಸ್ ಮತ್ತು ದಿ ಗಾರ್ಡಿಯನ್‌ನ ಕೆಲವು ಅಂಶಗಳ ಬಹಿರಂಗಗೊಂಡ ಬಳಿಕ ನರೇಂದ್ರ ಮೋದಿಯವರು ಮಾತುಗಳು ಎಷ್ಟು ಸುಳ್ಳು ಎಂದು ತಿಳಿಯುತ್ತವೆ ಎಂದು ವಾಗ್ದಾಳಿ ನಡೆಸಿದರು.
ಭಷ್ಟಾಚಾರ ನಿಯಂತ್ರಣ ಮತ್ತು ತನಿಖಾ ಸಂಸ್ಥೆಗಳ ಕೈ ಕಟ್ಟಿ ಹಾಕುವ ಮೂಲಕ ಪ್ರಧಾನಿ ಮೋದಿಯವರು ತಮ್ಮ ಭ್ರಷ್ಟ ಸ್ನೇಹಿತರು ಮತ್ತವರ ದುಷ್ಕೃತ್ಯಗಳನ್ನು ರಕ್ಷಿಸಲು ಎಂತಹ ಕೆಲಸಗಳನ್ನು ಮಾಡುತ್ತಾರೆ ಎಂಬುದನ್ನು ಈ ಆರೋಪಗಳು ಸಾಬೀತು ಮಾಡುತ್ತವೆ. ತಪ್ಪುಗಳ ತನಿಖೆಗೆ ಬದಲಾಗಿ ಬಿಜೆಪಿ ವಿಪಕ್ಷಗಳನ್ನು ಬೆದರಿಸುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪ ಮಾಡಿದರು.

ಅದಾನಿ ಗ್ರೂಪ್ ಪಾಲುದಾರರು/ಆಪ್ತರು ನಾಸರ್ ಅಲಿ ಶಾಬನ್ ಅಹ್ಲಿ ಮತ್ತು ಚಾಂಗ್ ಚುಂಗ್-ಲಿಂಗ್ ಅವರನ್ನು ಷೇರುಗಳ ಏರಿಕೆ ತಡೆಯಲು ಕನಿಷ್ಠ ಸಾರ್ವಜನಿಕ ಷೇರುದಾರರಿಗೆ ಸಂಬಂಧಿಸಿದ ಭಾರತೀಯ ಭದ್ರತಾ ಕಾನೂನುಗಳನ್ನು ಬೈಪಾಸ್ ಮಾಡುವ ಪ್ರಯತ್ನಕ್ಕೆ ಪುರಾವೆಗಳಿವೆ.
ಬೇನಾಮಿ ಕಂಪನಿ ಮಾಲೀಕರು ಬೆಳಕಿಗೆ
ಗೌತಮ್ ಅದಾನಿ ಸಹೋದರ ವಿನೋದ್‌ಗೆ ಅಲಿ ಹಾಗೂ ಚಾಂಗ್ ನಿಯಂತ್ರಣದಲ್ಲಿರುವ ಶೆಲ್ ಕಂಪನಿಗಳು ನಾಲ್ಕು ಅದಾನಿ ಗ್ರೂಪ್ ಕಂಪನಿಗಳಲ್ಲಿ ರಹಸ್ಯವಾಗಿ ಹಾಗೂ ಕಾನೂನು ವಿರುದ್ಧವಾಗಿ ಸಾಕಷ್ಟು ಷೇರುಗಳನ್ನು ಸಂಗ್ರಹಿಸಿವೆ ಎಂದು ಅವರು ಆಪಾದಿಸಿದರು.
ಸೆಬಿ ಸಂಸ್ಥೆ ಗುರುತಿಸಲು ಸಾಧ್ಯವಾಗದ 13 ಬೇನಾಮಿ ಶೆಲ್ ಕಂಪನಿಗಳ ಪೈಕಿ ಎರಡರ ನಿಜವಾದ ಮಾಲೀಕರು ಯಾರು ಎಂಬುದು ಬೆಳಕಿಗೆ ಬಂದಿದೆ. 2014 ರಲ್ಲಿ ಅದಾನಿ ಗ್ರೂಪ್ ವಿರುದ್ಧ ತನಿಖೆಗಳು ಹೊರ ಬಂದಿದ್ದರೂ ಸಹಿ ಸೆಬಿ ಮಾತ್ರ ತನಿಖೆ ನಡೆಸಿ ಸತ್ಯ ಹೊರಗೆಳೆಯುವಲ್ಲಿ ವಿಫಲವಾಗಿದ್ದು ಏಕೆ? ಎಂದು ಅವರು ಗುಡುಗಿದರು. ಇನ್ನು ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಹ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿಸಿದರು.












Click it and Unblock the Notifications